Property Tax Notice: ಸ್ವಂತ ಆಸ್ತಿ ಇದ್ದವರಿಗೆ ತೆರಿಗೆ ಇಲಾಖೆಯಿಂದ ಹೊಸ ನಿಯಮ, ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್

ಈ ರೀತಿಯಲ್ಲಿ ಸ್ವಂತ ಆಸ್ತಿ ಇದ್ದರೆ ತೆರಿಗೆ ಇಲಾಖೆಯಿಂದ ಬರಲಿದೆ ನೋಟೀಸ್

Tax On Property Purchase: ಹೂಡಿಕೆಗೆ ಉತ್ತಮ ಉದಾಹರಣೆ ಎಂದರೆ ಆಸ್ತಿ ಖರೀದಿ. ಆಸ್ತಿ ಖರೀದಿಯಿಂದ ಉಳಿತಾಯ ಯೋಜನೆಗಳ ಹೂಡಿಕೆಗಿಂತ ಹೆಚ್ಚಿನ ಲಾಭವನ್ನು ಗಳಿಸಬಹುದು. ಇನ್ನು ನೀವು ಆಸ್ತಿ ಖರೀದಿಯ ಸಮಯದಲ್ಲಿ ಆಸ್ತಿ ಕುರಿತಾಗಿ ಇರುವ ತೆರಿಗೆ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ.

ಏಕೆಂದರೆ ಆದಾಯ ಇಲಾಖೆಯ ನಿಯಮಾನುಸಾರವೇ ಆಸ್ತಿ ನೋಂದಣಿ ಅಥವಾ ಖರೀದಿ ಮಾಡಬೇಕಾಗುತ್ತದೆ. ಆಸ್ತಿಯನ್ನು ನೋಂದಾಯಿಸುವ ಮೊದಲು ತೆರಿಗೆ ನಿಯಮವನ್ನು ತಿಳಿದುಕೊಳ್ಳಿ. ಆಸ್ತಿ ಖರೀದಿಯಲ್ಲಿ ತೆರಿಗೆಯ ಇಲಾಖೆಯ ನಿಯಮ ಉಲ್ಲಂಘನೆಯಾದರೆ ನಿಮ್ಮ ಮನೆಗೆ Tax Notice ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.

Property Tax Latest Update
Image Credit: idfcfirstbank

ಸ್ವಂತ ಆಸ್ತಿ ಇದ್ದವರಿಗೆ ತೆರಿಗೆ ಇಲಾಖೆಯಿಂದ ಖಡಕ್ ನಿಯಮ
ಆಸ್ತಿಯನ್ನು ನೋಂದಾಯಿಸುವ ಮೊದಲು ನಿಮ್ಮ Aadhaar Card ಮತ್ತು PAN Card ಅನ್ನು ಲಿಂಕ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದರ ಜೊತೆಗೆ ನೀವು ಆಸ್ತಿಯನ್ನು ಖರೀದಿಸುವ ವ್ಯಕ್ತಿ ಕೂಡ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿರುವುದನ್ನು ಗಮನಿಸಬೇಕು. ಒಂದು ವೇಳೆ ಆಸ್ತಿ ನೋಂದಣಿಯಲ್ಲಿ ಈ ತಪ್ಪಾದರೆ ನೀವು ಆಸ್ತಿಯ ಮೇಲೆ ಶೇಕಡಾ 1 ರ ಬದಲಿಗೆ ಶೇಕಡಾ 20 ರಷ್ಟು TDS ಅನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

ನಿಮ್ಮ ಮನೆಗೆ ಬರಲಿದೆ ತೆರಿಗೆ ನೋಟೀಸ್
ಆದಾಯ ತೆರಿಗೆ ಕಾಯ್ದೆಯ ಪ್ರಕಾರ, 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಆಸ್ತಿಯನ್ನು ಖರೀದಿಸುವವರು ಕೇಂದ್ರ ಸರ್ಕಾರಕ್ಕೆ 1 ಪ್ರತಿಶತ ಟಿಡಿಎಸ್ ಮತ್ತು ಮಾರಾಟಗಾರರಿಗೆ ಒಟ್ಟು ವೆಚ್ಚದ 99 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ಅವಧಿ ಮುಗಿದ ಸುಮಾರು ಆರು ತಿಂಗಳ ನಂತರ, ಆದಾಯ ತೆರಿಗೆ ಇಲಾಖೆಯು 50 ಲಕ್ಷ ರೂ. ಗಿಂತ ಹೆಚ್ಚಿನ ಆಸ್ತಿಯನ್ನು ಖರೀದಿಸುವ ಖರೀದಿದಾರರಿಗೆ ನೋಟಿಸ್ ಕಳುಹಿಸಲು ಪ್ರಾರಂಭಿಸಿದೆ.

Tax On Property Purchase
Image Credit: Piramalrealty

ಈ ನೋಟಿಸ್‌ ನಲ್ಲಿ ಆಸ್ತಿ ಖರೀದಿಗೆ ಶೇ .20 ರಷ್ಟು ಟಿಡಿಎಸ್ ಪಾವತಿಸುವಂತೆ ತಿಳಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ಅಡಿಯಲ್ಲಿ ITR ನಲ್ಲಿ ಆಧಾರ್ ಅನ್ನು ಲಿಂಕ್ ಮಾಡುವುದು ಅವಶ್ಯಕ. ಇಲ್ಲವಾದರೆ ನಿಮ್ಮ ಮನೆಗೆ ಟ್ಯಾಕ್ಸ್ ನೋಟಿಸ್ ಬರುತ್ತದೆ. ನೀವು ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ನಿಮಗೆ ಅರಿವಿರಲಿ.

Join Nadunudi News WhatsApp Group

Join Nadunudi News WhatsApp Group