Wedding Gifts: ಮದುವೆಯಲ್ಲಿ ಇಂತಹ ಉಡುಗೊರೆ ನೀಡಿದರೆ ಕಟ್ಟಬೇಕು ತೆರಿಗೆ, ತೆರಿಗೆ ಇಲಾಖೆಯ ಇನ್ನೊಂದು ನಿಯಮ

ಮದುವೆಯಲ್ಲಿ ಇಂತಹ ಉಡುಗೊರೆ ಪಡೆದರೆ ತೆರಿಗೆ ಕಟ್ಟಬೇಕೇ..? ಸ್ಪಷ್ಟನೆ ನೀಡಿದ ತೆರಿಗೆ ಇಲಾಖೆ

Tax On Wedding Gifts: ಮಾರ್ಚ್ ಏಪ್ರಿಲ್ ನಿಂದ ಮದುವೆ ಸೀಸನ್ ಗಳು ಆರಂಭವಾಗುತ್ತದೆ. ಮದುವೆಯ ಸೀಸನ್ ಆರಂಭವಾದಾಗ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತದೆ. ಇನ್ನು ಮದುವೆಯಲ್ಲಿ ವದು ಮತ್ತು ವರನಿಗೆ ಉಡುಗೊರೆಯನ್ನು ನೀಡುವ ಸಲುವಾಗಿ ಚಿನ್ನಾಭರಣಗಳನ್ನು ಕೂಡ ಖರೀದಿಸುತ್ತಾರೆ.

ಇನ್ನು ಮದುವೆಯಾಗುವವರು ಕೂಡ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಹೊಸ ವರ್ಷದಲ್ಲಿ ಅನೇಕ ತೆರಿಗೆ ನಿಯಮಗಳು ಪರಿಚಯವಾಗಿದೆ. ಆದಾಯ ಇಲಾಖೆಯು ಮದುವೆಯಲ್ಲಿ ನೀಡಲಾಗುವ ಉಡುಗೊರೆಗೂ ಕೂಡ ತೆರಿಗೆಯನ್ನು ವಿಧಿಸಬಹುದು. ಹೀಗಾಗಿ ನೀವು ಮದುವೆಯಲ್ಲಿ ನೀಡಲಾಗುವ ಉಡುಗೊರೆಗಳಿಗೆ ತೆರಿಗೆ ಇದೆಯೇ..? ಇಲ್ಲವೇ..? ಎನ್ನುವ ತೆರಿಗೆ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

Tax On Wedding Gifts
Image Credit: Informal News

ಮದುವೆಯಲ್ಲಿ ಇಂತಹ ಉಡುಗೊರೆ ಪಡೆದರೆ ತೆರಿಗೆ ಕಟ್ಟಬೇಕೇ..?
ಸಾಮಾನ್ಯವಾಗಿ ಮದುವೆಯಲ್ಲಿ ವಧು-ವರನಿಗೆ ಸಾಕಷ್ಟು ಉಡುಗೊರೆಗಳು ಬರುತ್ತದೆ. ಅದರಲ್ಲೂ ಹೆಚ್ಚಾಗಿ ವರನಿಗೆ ವಧುವಿನ ಕಡೆಯಿಂದ ಹೆಚ್ಚಿನ ಉಡುಗೊರೆ ಬರುತ್ತದೆ. ದೊಡ್ಡ ಮೊತ್ತದ ಹಣ, ಕಾರು, ಆಸ್ತಿ, ಚಿನ್ನಾಭರಣ ಸೇರಿದಂತೆ ಹೆಚ್ಚಿನ ಬೆಲೆಬಾಳುವ ವಸ್ತುಗಳು ಉಡುಗೊರೆ ರೂಪದಲ್ಲಿ ಮದುವೆಯಲ್ಲಿ ನೀಡಲಾಗತ್ತದೆ.

ಮದುವೆಯಲ್ಲಿ ನೀಡಲಾಗುವ ಈ ಎಲ್ಲ ಉಡುಗೊರೆಗಳಿಗೆ ತೆರಿಗೆ ಪಾವತಿಸಬೇಕೇ..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇನ್ನು ಆದಾಯ ಇಲಾಖೆಯ ನಿಯಮದ ಪ್ರಕಾರ, ವಿವಾಹದ ಸಮಯದಲ್ಲಿ ವಧು- ವರನು ಸ್ವೀಕರಿಸುವ ಉಡುಗೊರೆಗಳು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಯಾವುದೇ ಉಡುಗೊರೆಗಳಿಗೆ ತೆರಿಗೆ ನೀಡುವ ಅಗತ್ಯ ಇರುವುದಿಲ್ಲ.

Tax Rules On Wedding Gifts
Image Credit: The Economic Times

ಮದುವೆಯಲ್ಲಿ ಇಂತಹ ಉಡುಗೊರೆ ನೀಡಿದರೆ ಕಟ್ಟಬೇಕು ತೆರಿಗೆ
ಇನ್ನು ಮದುವೆಯಲ್ಲಿ ವದು ಮತ್ತು ವರನ ಪೋಷಕರು ಸ್ವೀಕರಿಸಿದ ಉಡುಗೊರೆಯೂ ತೆರಿಗೆ ಮುಕ್ತವಾಗಿರುವುದಿಲ್ಲ. ಮದುವೆಯಲ್ಲಿ ಪುಷ್ಕರವು ಮಿತಿಗಿಂತ ಹೆಚ್ಚಿನ ಉಡುಗೊರೆಯನ್ನು ಪಡೆದರೆ ತೆರಿಗೆ ಕಟ್ಟಬೇಕಾಗುತ್ತದೆ ಎನ್ನುವುದು ತಿಳಿದಿರಲಿ. ಮದುವೆಯಲ್ಲಿ ನೀಡುವ ಉಡುಗೊರೆಗಳಿಗೆ ಯಾವುದೇ ಮಿತಿ ಇರುವುದಿಲ್ಲ. ಉಡುಗೊರೆಗಳನ್ನು ನೀಡುವಾಗ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದು ಉತ್ತಮ. ಹಾಗೆಯೆ ಉಡುಗೊರೆಯನ್ನು ಪಡೆದುಕೊಳ್ಳುವಾಗ ಉಡುಗೊರೆಗಳ ಪುರಾವೆಯನ್ನು ಇಟ್ಟುಕೊಂಡರೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group