Bank Transaction: ಇನ್ಮುಂದೆ ಬ್ಯಾಂಕ್ ಖಾತೆಯಿಂದ ವರ್ಷಕ್ಕೆ ಇಷ್ಟು ಹಣ ಮಾತ್ರ ಹಿಂಪಡೆಯಬಹುದು, ಹೊಸ ತೆರಿಗೆ ನಿಯಮ
ಒಂದು ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಖಾತೆಯಿಂದ ಇಷ್ಟು ಹಣವನ್ನು ಮಾತ್ರ ಹಿಂಪಡೆಯಬಹುದು
Tax On Withdrawing Money From Bank Account: ಜನರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಲು ಬಯಸುತ್ತಾರೆ. ಗ್ರಾಹಕರು ತಮ್ಮ ಅನಿವಾರ್ಯ ಪರಿಸ್ಥಿತಿಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವ ಕಾರಣ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ ನಿಮಗೆ ಗೊತ್ತೇ…? ನೀವು ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆದರೆ ಅದಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಆದರೆ ಈ ತೆರಿಗೆ ಪಾವತಿಗೆ ಆದಾಯ ಇಲಾಖೆಯು ಮಿತಿಯನ್ನು ಅಳವಡಿಸಿದೆ. ನೀವು ಮಿತಿಗಿಂತ ಹೆಚ್ಚಿನ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಹಿಂಪಡೆಯಲು ಬಯಸಿದರೆ ಆ ಸಮಯದಲ್ಲಿ ನೀವು TDS ಪಾವತಿಸಬೇಕಾಗುತ್ತದೆ. ಹಣ ಹಿಂಪಡೆಯುವಿಕೆಗೆ ATM ನಲ್ಲಿ ಮಾತ್ರವಳದೆ ಬಾಂಕ್ ಖಾತೆಯ ಹಣ ಹಿಂಪಡೆಯುವಿಕೆಗೂ ನಿಯಮ ರೂಪಿಸಲಾಗಿದೆ. ಇದೀಗ ನಾವು ಈ ಬಗ್ಗೆ ವಿವರವನ್ನು ತಿಳಿದುಕೊಳ್ಳೋಣ.
![Tax On Withdrawing Money From Bank Account](https://nadunudi.in/wp-content/uploads/2024/02/Tax-On-Withdrawing-Money-From-Bank-Account.png)
ಇನ್ಮುಂದೆ ಬ್ಯಾಂಕ್ ಖಾತೆಯಿಂದ ವರ್ಷಕ್ಕೆ ಇಷ್ಟು ಹಣ ಮಾತ್ರ ಹಿಂಪಡೆಯಬಹುದು
ಜನರು ತಮ್ಮ ಬ್ಯಾಂಕ್ ಖಾತೆಯಿಂದ ಉಚಿತವಾಗಿ ಹಣವನ್ನು ಹಿಂಪಡೆದುಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯ್ಲಲಿನ ಹಾನ್ ಹಿಂಪಡೆಯುವಿಕೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ಒಬ್ಬ ವ್ಯಕ್ತಿ ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಅನ್ನು ಪಾವತಿಸಬೇಕಾಗುತ್ತದೆ.
ಈ ನಿಯಮ ಸತತ ಮೂರೂ ವರ್ಷದಿಂದ Income Tax Return ಸಲ್ಲಿಸದ ಜನರಿಗೆ ಅನ್ವಯವಾಗುತ್ತದೆ. ITR ಅನ್ನು ಸಲ್ಲಿಸುವವರಿಗೆ ಈ ನಿಯಮದ ಅಡಿಯಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಅಂತಹ ಗ್ರಾಹಕರು TDS ಪಾವತಿಸದೆಯೇ ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್ ಖಾತೆಯಿಂದ ಆರ್ಥಿಕ ವರ್ಷದಲ್ಲಿ 1 ಕೋಟಿ ರೂಪಾಯಿಗಳನ್ನ ಹಿಂಪಡೆಯಬಹುದಾಗಿದೆ.
![Withdrawing Money From Bank Account](https://nadunudi.in/wp-content/uploads/2024/02/Withdrawing-Money-From-Bank-Account.png)
ಹಣವನ್ನು ಹಿಂತೆಗೆದುಕೊಂಡಾಗ ಎಷ್ಟು TDS ಪಾವತಿಸಬೇಕಾಗುತ್ತದೆ…?
ನೀವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ITR ಅನ್ನು ಸಲ್ಲಿಸದಿದ್ದರೆ, ಆಗ ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 2 ಪ್ರತಿಶತ TDS ಮತ್ತು 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 5 ಪ್ರತಿಶತ TDS ಅನ್ನು ಪಾವತಿಸಬೇಕಾಗುತ್ತದೆ.
ATM ವಹಿವಾಟಿನ ಮಿತಿಯ ಬಗೆ ತಿಳಿಯಿರಿ
ATM ನಲ್ಲಿ ಹಣವನ್ನು ಡ್ರಾ ಮಾಡಲು ಮಿತಿಯನ್ನು ವಿಧಿಸಲಾಗಿದೆ. RBI ಜನವರಿ 1, 2022 ರಿಂದ ATM ನಿಂದ ನಗದು ಹಿಂಪಡೆಯಲು ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಈಗ ಬ್ಯಾಂಕ್ಗಳು ನಿಗದಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ 21 ರೂಪಾಯಿಗಳನ್ನು ವಿಧಿಸುತ್ತಿವೆ. ನಿಮ್ಮ ಬ್ಯಾಂಕ್ ATM ನಿಂದ ನೀವು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದು ಹಾಗೆ ಇತರ ಬ್ಯಾಂಕ್ ATM ನಿಂದ 3 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದಾಗಿದೆ.