Tax Payment: ಇನ್ಮುಂದೆ ಹೆಂಡತಿ ಮತ್ತು ಮಕ್ಕಳಿಗೆ ಖರ್ಚಿಗೆ ಹಣ ಕೊಟ್ಟರೂ ಕೂಡ ಕಟ್ಟಬೇಕು ತೆರಿಗೆ, ಹೊಸ ತೆರಿಗೆ ನಿಯಮ.

ಹೆಂಡತಿ ಮತ್ತು ಮಕ್ಕಳಿಗೆ ಕೊಡುವ ಈ ಹಣಕ್ಕೂ ಕೂಡ ತೆರಿಗೆ ನಿಯಮ ಅನ್ವಯ ಆಗಲಿದೆ

Tax Payment Update: ಆದಾಯ ಇಲಾಖೆಯು ಮಿತಿಗಿಂತ ಹೆಚ್ಚಿನ ಆದಾಯದ ಮೂಲವನ್ನು ಹೊಂದಿದ್ದವರಿಗೆ ತೆರಿಗೆಯನ್ನು ವಿಧಿಸುತ್ತದೆ. ಆದಾಯ ಇಲಾಖೆಯು ಕಣ್ಣು ತಪ್ಪಿಸಿ ಯಾರು ಕೂಡ ಯಾವುದೇ ರೀತಿಯ ಹಣಕಾಸಿನ ವಹಿವಾಟನ್ನು ಮಾಡಲು ಸಾಧ್ಯವಿರುವುದಿಲ್ಲ. ಆದಾಯ ಇಲಾಖೆಯು ಎಲ್ಲಾ ರೀತಿಯ ನಗದು ವಹಿವಾಟಿನ ಮೇಲು ಕಣ್ಣಿರಿಸುತ್ತದೆ.

ನೀವು ನಿಮ್ಮ ಹೆಂಡತಿಗೆ ಖರ್ಚಿಗೆ ನಗದು ರೂಪದಲ್ಲಿ ಹಣವನ್ನು ಕಳುಹಿಸಿದರೆ ಅಥವಾ ನಗದು ರೂಪದಲ್ಲಿ ವಿದೇಶದಲ್ಲಿರುವ ನಿಮ್ಮ ಮಕ್ಕಳಿಗೆ ಹಣವನ್ನು ಪದೇ ಪದೇ ಕಳುಹಿಸುತ್ತಿದ್ದರೆ ಆದಾಯ ಇಲಾಖೆಯು ಇದರ ಮೂಲದ ಬಗ್ಗೆ ತನಿಖೆ ನಡೆಸುತ್ತದೆ. ಹಾಗಾದರೆ ಹೆಂಡತಿ ಮತ್ತು ಮಕ್ಕಳಿಗೆ ಖರ್ಚಿಗೆ ಹಣ ಕೊಟ್ಟರೂ ತೆರಿಗೆ ಕಟ್ಟಬೇಕಾ..? ಎನ್ನುವುದು ನಿಮ್ಮ ಸದ್ಯದ ಪ್ರಶ್ನೆಯಾಗಿರಬಹುದು, ಇದಕ್ಕೆ ಉತ್ತರ ಇಲ್ಲಿದೆ ನೋಡಿ.

Tax Payment Update
Image Credit: Efficacyams

ಹೆಂಡತಿ ಮತ್ತು ಮಕ್ಕಳಿಗೆ ಖರ್ಚಿಗೆ ಹಣ ಕೊಟ್ಟರೂ ತೆರಿಗೆ ಕಟ್ಟಬೇಕಾ..?
ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಪ್ರತಿ ತಿಂಗಳು ಮನೆ ನಿರ್ವಹಣೆಗೆ ಹಣವನ್ನು ಗಂಡ ಕಳುಹಿಸಿದರೆ ಅಥವಾ ಹಣವನ್ನು ಉಡುಗೊರೆಯಾಗಿ ನೀಡಿದರೆ ಆದಾಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಈ ಎರಡು ಸಮಯದಲ್ಲಿ ಕಳುಹಿಸಲಾದ ಹಣವನ್ನು ಗಂಡನ ಆದಾಯವೆಂದು ಪರಿಗಣಿಸಲಾಗುತ್ತದೆ. ಇದ್ದಕ್ಕೆ ಆದಾಯ ಇಲಾಖೆ ತೆರಿಗೆ ನೋಟಿಸ್ ಅನ್ನು ಕಳುಹಿಸುವುದಿಲ್ಲ.

ಯಾವ ಸಂದರ್ಭದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ..?
ಇನ್ನು ಗಂಡನು ಹೆಂಡತಿಗೆ ಖರ್ಚಿಗೆಂದು ನೀಡಿದ ಹಣವನ್ನು ಪತ್ನಿಯು ಯಾವುದೇ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಪಡೆದ ಲಾಭಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೂಡಿಕೆಯ ಮೇಲಿನ ಲಾಭವನ್ನು ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರ ಮಾಡಲಾಗುತ್ತದೆ.

Income Tax Latest Updates
Image Credit: Magicbricks

ಅದನ್ನು ಪತ್ನಿಯ ಆದಾಯವೆಂದು ಪರಿಗಣಿಸಲಾಗುತ್ತದೆ. ಅವರೇ ಹೂಡಿಕೆ ಮಾಡಿರುವುದರಿಂದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 296SS ಮತ್ತು 296T ಅಡಿಯಲ್ಲಿ ರೂ. 20 ಸಾವಿರಕ್ಕಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡವನ್ನು ವಿಧಿಸಲಾಗುತ್ತದೆ. ಆದರೆ ಕೆಲವು ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದಾಗ್ಯೂ ಹೂಡಿಕೆಯ ಲಾಭದ ಮೇಲಿನ ಆದಾಯಕ್ಕೆ ತೆರಿಗೆ ಕಟ್ಟಬೇಕು ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

Join Nadunudi News WhatsApp Group