Tax On Cash Saving: ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇಟ್ಟರೆ ಅಥವಾ ಹಣ ತಗೆದರೆ ಬರಲಿದೆ ತೆರಿಗೆ ನೋಟೀಸ್, ತೆರಿಗೆ ಇಲಾಖೆಯ ನಿಯಮ
ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇಟ್ಟರೆ ಅಥವಾ ಹಣ ತಗೆದರೆ ಬರಲಿದೆ ತೆರಿಗೆ ನೋಟೀಸ್.
Tax Rule For Saving Account: ದೇಶದಲ್ಲಿ ಆದಾಯ ತೆರಿಗೆ ಇಲಾಖೆ ಹಲವು ರೀತಿಯ ತೆರಿಗೆ ನಿಯಮವನ್ನು ಅಳವಡಿಸಿದೆ. ಎಲ್ಲ ಮೂಲದ ಆದಾಯಕ್ಕೂ ತೆರಿಗೆ ಇಲಾಖೆ ಪ್ರತ್ಯೇಕ ನಿಯಮವನ್ನು ಅನುಸರಿಸಿದೆ. ತೆರಿಗೆ ಇಲಾಖೆಯ ಯಾವುದೇ ನಿಯಮ ಉಲ್ಲಂಘನೆಯಾದರು ಕೂಡ ಅಂತಹ ಸಂದರ್ಭದಲ್ಲಿಇಲ್ಕೆ Tax Notice ಅನ್ನು ನೀಡುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ.
ಇನ್ನು ತೆರಿಗೆ ಇಲಾಖೆಯು ಒಬ್ಬ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಯನ್ನು ಹೊಂದಬಹುದು ಹಾಗೆಯೆ ಉಳಿತಿಯ ಖಾತೆಯಲ್ಲಿ ಠೇವಣಿ ಮಾಡಬಹುದಾದ ಹಣದ ಮಿತಿಯ ಬಗ್ಗೆ ನಿಯಮವನ್ನು ಸೂಚಿಸಿದೆ. (Tax On Money Saving) ನಗದು ವ್ಯವಹಾರವನ್ನು ಮಾಡುವ ಮೊದಲು ತೆರಿಗೆ ಇಲಾಖೆಯ ನಿಯಮವನ್ನು ತಿಳಿಯುವುದು ಅಗತ್ಯ.
![Tax Notice Latest Update](https://nadunudi.in/wp-content/uploads/2023/12/Tax-Notice-Latest-Update.jpg)
ತೆರಿಗೆ ಇಲಾಖೆಯ ಹೊಸ ನಿಯಮ
ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಬಹುದಾದ ಹಣದ ಮೊತ್ತಕ್ಕೆ ಸಾಮಾನ್ಯವಾಗಿ ಯಾವುದೇ ಮಿತಿಯಿಲ್ಲದಿದ್ದರೂ, ಒಂದು ಹಣಕಾಸು ವರ್ಷದಲ್ಲಿ ನೀವು ಎಷ್ಟು ಹಣವನ್ನು ಠೇವಣಿ ಮಾಡಬಹುದು ಅಥವಾ ಉಳಿತಾಯ ಖಾತೆಯಿಂದ ಹಿಂಪಡೆಯಬಹುದು ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿದೆಯಾ..?
ದೇಶದಲ್ಲಿನ ಕಪ್ಪುಹಣಕ್ಕೆ ಕಡಿವಾಣ ಹಾಕಲು ಬ್ಯಾಂಕ್ ಗಳು, ಕಾರ್ಪೊರೇಟ್ ಗಳು, ಅಂಚೆ ಕಚೇರಿಗಳು ಮತ್ತು ಎನ್ ಬಿಎಫ್ ಸಿಗಳು ಉಳಿತಾಯ ಖಾತೆಯಲ್ಲಿನ ವಹಿವಾಟುಗಳು ನಿಗದಿತ ಮೊತ್ತಕ್ಕಿಂತ ಹೆಚ್ಚಾದಾಗ ಹಣಕಾಸು ವರದಿ (SFT) ಹೇಳಿಕೆಗಳನ್ನು ಸಲ್ಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದು ಹಣವನ್ನು ಠೇವಣಿ ಮಾಡುವುದು ಅಥವಾ ಹಿಂಪಡೆಯುವುದು, ಷೇರುಗಳಲ್ಲಿ ಹೂಡಿಕೆ ಮಾಡುವುದು, ಮ್ಯೂಚುವಲ್ ಫಂಡ್ ಗಳು, ಕ್ರೆಡಿಟ್ ಕಾರ್ಡ್ ವೆಚ್ಚಗಳು, ವಿದೇಶಿ ಕರೆನ್ಸಿ ಖರೀದಿ, ರಿಯಲ್ ಎಸ್ಟೇಟ್ ವಹಿವಾಟುಗಳು ಇತ್ಯಾದಿ ಒಳಗೊಂಡಿದೆ.
![Tax Rule For Saving Account](https://nadunudi.in/wp-content/uploads/2023/12/Tax-Rule-For-Saving-Account.jpg)
ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇಟ್ಟರೆ ಅಥವಾ ಹಣ ತಗೆದರೆ ಬರಲಿದೆ ತೆರಿಗೆ ನೋಟೀಸ್
ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ಠೇವಣಿ ಮತ್ತು ಹಿಂಪಡೆಯುವಿಕೆಯ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ತಿಳಿಸುವುದು ಅವಶ್ಯಕ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನಿಮ್ಮಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆದಿದ್ದರೆ ನೀವು ಜಾಗರೂಕರಾಗಿರಬೇಕು. ಚಾಲ್ತಿ ಖಾತೆಯಲ್ಲಿನ ಈ ಮಿತಿ 50 ಲಕ್ಷ.
ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಪ್ರಕಾರ, ಬ್ಯಾಂಕ್ ಖಾತೆ ಸೌಲಭ್ಯವನ್ನು ಒದಗಿಸುವ ಪ್ರತಿಯೊಂದು ಬ್ಯಾಂಕಿಂಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ ಗೆ ಅನ್ವಯಿಸುತ್ತದೆ. ಒಂದು ಅಥವಾ ಎರಡು ಖಾತೆಗಳನ್ನು ಹೊರತುಪಡಿಸಿ ಒಂದು ಹಣಕಾಸು ವರ್ಷದಲ್ಲಿ ರೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಿದರೆ ನೀವು ತೆರಿಗೆ ಇಲಾಖೆಗೆ ಹಣದ ಮೂಲವನ್ನ ತಿಳಿಸಬೇಕಾಗುತ್ತದೆ
ಪಾವತಿ ಮತ್ತು ಸೆಟಲ್ ಮೆಂಟ್ ಸಿಸ್ಟಮ್ಸ್ ಆಕ್ಟ್ 2007 ರ ಸೆಕ್ಷನ್ 18 ರ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಬ್ಯಾಂಕ್ ಡ್ರಾಫ್ಟ್ ಗಳು, ಪೇ ಆರ್ಡರ್ ಗಳು, ಬ್ಯಾಂಕರ್ ಗಳ ಚೆಕ್ ಗಳು, ಪ್ರಿಪೇಯ್ಡ್ ಉಪಕರಣಗಳನ್ನು ಖರೀದಿಸಲು ಹಣಕಾಸು ವರ್ಷದಲ್ಲಿ ಹತ್ತು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ಸಂಗ್ರಹಣೆಯಲ್ಲಿ ಪಾವತಿಸಲಾಗಿದೆ.