Transaction Limit: ಒಂದೇ ಬಾರಿಗೆ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ತಗೆಯಬಹುದು…? ತೆರಿಗೆ ನಿಯಮ ಅನ್ವಯ
ನಿಮ್ಮ ಬ್ಯಾಂಕ್ ಖಾತೆಯಿಂದ ಒಂದೇ ಬಾರಿಗೆ ಎಷ್ಟು ಹಣ ತೆಗೆಯಬಹುದು, ತೆರಿಗೆ ನಿಯಮ
Money Withdrawal Limit: ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ನ ಎಲ್ಲ ನಿಯಮಗಳನ್ನು ತಿಳಿಯುವುದು ಅಗತ್ಯವಾಗಿದೆ. ಇತ್ತೀಚೆಗಂತೂ RBI ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿ ಮಾಡಿದೆ. ಬ್ಯಾಂಕ್ ಖಾತೆಯಲ್ಲಿನ ಹಣದ ಠೇವಣಿ ಹಾಗೂ ಬ್ಯಾಂಕ್ ಖಾತೆಯಲ್ಲಿನ ಹಣದ ಹಿಂಪಡೆಯುವಿಕೆಗೆ ನಿಯಮವನ್ನು ರೂಪಿಸಲಾಗಿದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹೂಡಿಕೆಯ ಹಣವನ್ನು ನೀವು ಯಾವಾಗ ಬೇಕಾದರೂ ತೆಗೆಯಬಹುದು. ಆದರೆ ಹಣ ಹಿಂಪಡೆಯುವಿಕೆಗೆ ಬ್ಯಾಂಕ್ ನಿಯಮವನ್ನು ರೂಪಿಸಿದೆ. ನಿಯಮಕ್ಕಿಂತ ಹೆಚ್ಚುವರಿ ಹಣವನ್ನು ನೀವು ಖಾತೆಯಿಂದ ಹಿಂಪಡೆದರೆ ತೆರಿಗೆ ನಿಯಮಗಳು ನಿಮಗೆ ಅನ್ವಯವಾಗಲಿದೆ.
![There are rules for withdrawing money through ATM and only so much money can be withdrawn per day.](https://nadunudi.in/wp-content/uploads/2023/06/atm-withdrawal-limit.png)
ಒಂದೇ ಬಾರಿಗೆ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ತಗೆಯಬಹುದು…?
ಜನರು ತಮ್ಮ ಬ್ಯಾಂಕ್ ಖಾತೆಯಿಂದ ಉಚಿತವಾಗಿ ಎಷ್ಟು ಹಣವನ್ನು ಹಿಂಪಡೆಯಲು ಅವಕಾಶವಿದೆ ಎನ್ನುವ ಬಗ್ಗೆ ಗೊಂದಲದಲ್ಲಿರಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ಒಬ್ಬ ವ್ಯಕ್ತಿ ಆರ್ಥಿಕ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಅನ್ನು ಪಾವತಿಸಬೇಕಾಗುತ್ತದೆ.
ಈ ನಿಯಮ ಸತತ ಮೂರೂ ವರ್ಷದಿಂದ Income Tax Return ಸಲ್ಲಿಸದ ಜನರಿಗೆ ಅನ್ವಯವಾಗುತ್ತದೆ. ITR ಅನ್ನು ಸಲ್ಲಿಸುವವರಿಗೆ ಈ ನಿಯಮದ ಅಡಿಯಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಅಂತಹ ಗ್ರಾಹಕರು TDS ಪಾವತಿಸದೆಯೇ ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್ ಖಾತೆಯಿಂದ ಆರ್ಥಿಕ ವರ್ಷದಲ್ಲಿ 1 ಕೋಟಿ ರೂಪಾಯಿಗಳನ್ನ ಹಿಂಪಡೆಯಬಹುದಾಗಿದೆ.
![Important decision of RBI in withdrawal of money](https://nadunudi.in/wp-content/uploads/2023/08/money-withdraw.png)
ತೆರಿಗೆ ನಿಯಮ ಅನ್ವಯ
ನೀವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ITR ಅನ್ನು ಸಲ್ಲಿಸದಿದ್ದರೆ, ಆಗ ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 2 ಪ್ರತಿಶತ TDS ಮತ್ತು 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡಾಗ 5 ಪ್ರತಿಶತ TDS ಅನ್ನು ಪಾವತಿಸಬೇಕಾಗುತ್ತದೆ.
ಇನ್ನು RBI ಜನವರಿ 1, 2022 ರಿಂದ ATM ನಿಂದ ನಗದು ಹಿಂಪಡೆಯಲು ಸೇವಾ ಶುಲ್ಕವನ್ನು ಹೆಚ್ಚಿಸಿದೆ. ಈಗ ಬ್ಯಾಂಕ್ ಗಳು ನಿಗದಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ 21 ರೂಪಾಯಿಗಳನ್ನು ವಿಧಿಸುತ್ತಿವೆ. ನಿಮ್ಮ ಬ್ಯಾಂಕ್ ATM ನಿಂದ ನೀವು ಪ್ರತಿ ತಿಂಗಳು 5 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದು ಹಾಗೆ ಇತರ ಬ್ಯಾಂಕ್ ATM ನಿಂದ 3 ಬಾರಿ ಉಚಿತವಾಗಿ ಹಣವನ್ನ ಡ್ರಾ ಮಾಡಬಹುದಾಗಿದೆ. ಮಿತಿಗಿಂತ ಹೆಚ್ಚುವರಿ ವಹಿವಾಟು ನಡೆದರೆ ದಂಡ ಕಟಬೇಕಾಗುತ್ತದೆ.