Tax Saving: ಆದಾಯ ತೆರಿಗೆ ಪಾವತಿಸುವವರಿಗೆ ಬಿಗ್ ಅಪ್ಡೇಟ್, ಈಗ 4 ಲಕ್ಷ ರೂ ಉಳಿಸಬಹುದು ನೋಡಿ

ಆದಾಯ ತೆರಿಗೆ ಪಾವತಿ ಮಾಡುವವರು ಈ ವಿಧಾನ ಅನುಸರಿಸಿದರೆ 4 ಲಕ್ಷದ ತನಕ ಲಾಭ ಸಿಗಲಿದೆ

Income Tax Saving Method: ದೇಶದಲ್ಲಿ ತೆರಿಗೆ ಪಾವತಿಯ ನಿಯಮಗಳು ಕಠಿಣಗೊಳ್ಳುತ್ತಿದೆ. ತೆರಿಗೆ ಪಾವತಿದಾರರಿಗೆ ಆದಾಯ ಇಲಾಖೆ ಆಗಾಗ ಹೊಸ ಹೊಸ ನಿಯಮಗಳನ್ನು ಪರಿಚಯಿಸುತ್ತಿರುತ್ತದೆ. ಸದ್ಯ ಆದಾಯ ಇಲಾಖೆಯು ತೆರಿಗೆ ಪಾವತಿದಾರರಿಗೆ ತೆರಿಗೆ ವಿನಾಯಿತಿಯನ್ನು ನೀಡಲು ಮುಂದಾಗಿದೆ ಎನ್ನಬಹುದು.

ನೀವು ಕೆಲವು ಆದಾಯದ ಮೂಲಗಳಿಗೆ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಬಹುದು. ಇನ್ನು 80C ಅಡಿಯಲ್ಲಿ ಕೆಲವು ಮೂಲದ ತೆರಿಗೆಗಳಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ನೀವು ತೆರಿಗೆ ವಿನಾಯಿತಿಯನ್ನು ಪಡೆಯಲು ಉತ್ತಮ ಆಯ್ಕೆಗಳು ಈ ಕೆಳಗಿನಂತವಿದೆ. ಈ ರೀತಿಯ ಎಲ್ಲಾ ಹೂಡಿಕೆಗಳಿಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

IncomeTax Rules 2024
Image Credit: Outlookindia

ಆದಾಯ ತೆರಿಗೆ ಪಾವತಿಸುವವರಿಗೆ ಬಿಗ್ ಅಪ್ಡೇಟ್, ನೀವು 4 ಲಕ್ಷ ರೂ ಉಳಿಸಬಹುದು
•ಉಳಿತಾಯ ಖಾತೆಯ ಬಡ್ಡಿಯ ಮೇಲೆ ರಿಯಾಯಿತಿ
ಆದಾಯ ತೆರಿಗೆಯ ಸೆಕ್ಷನ್ 80TTA ಅಡಿಯಲ್ಲಿ, ಉಳಿತಾಯ ಖಾತೆಯಲ್ಲಿನ ಠೇವಣಿಗಳ ಮೇಲೆ ಪಡೆದ ಬಡ್ಡಿಯು ತೆರಿಗೆ ವಿನಾಯಿತಿಯ ವ್ಯಾಪ್ತಿಗೆ ಸೇರುತ್ತದೆ.ನೀವು ರೂ. 10,000 ವರೆಗಿನ ವಾರ್ಷಿಕ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹಿರಿಯ ನಾಗರಿಕರು ವಿವಿಧ ಉಳಿತಾಯ ಖಾತೆಗಳಲ್ಲಿ ಸೆಕ್ಷನ್ 80TTB ಅಡಿಯಲ್ಲಿ ವಾರ್ಷಿಕವಾಗಿ 50,000 ರೂ.ವರೆಗಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ.

•ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ
National Pension Scheme (NPS) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿ ವಯಸ್ಸಿನಲ್ಲಿ ನೀವು ದೊಡ್ಡ ಮೊತ್ತದ ನಿಧಿಯನ್ನು ಪಡೆಯುತ್ತೀರಿ. ನಿಮ್ಮ ವರ್ಷಾಶನ ಮೊತ್ತ ಮತ್ತು ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ ನೀವು ಮಾಸಿಕ ಪಿಂಚಣಿ ಪಡೆಯುತ್ತೀರಿ. ಇದರಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಮೂರು ಲಾಭಗಳು ಸಿಗುತ್ತವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸೆಕ್ಷನ್ 80 CCD (1B) ಅಡಿಯಲ್ಲಿ 50,000 ರೂ.ಗಳ ಹೆಚ್ಚುವರಿ ತೆರಿಗೆ ಕಡಿತವನ್ನು ಪಡೆಯಬಹುದು.

Tax Free Income
Image Credit: Original Source

•ಆರೋಗ್ಯ ವಿಮೆಯ ಮೇಲೆ ವಿನಾಯಿತಿ
ಆರೋಗ್ಯ ವಿಮೆಯ ಮೂಲಕ, ನೀವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುವುದು ಮಾತ್ರವಲ್ಲದೆ, ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ ಸೆಕ್ಷನ್ 80D ಅಡಿಯಲ್ಲಿ ಕಡಿತದ ಪ್ರಯೋಜನವನ್ನು ಸಹ ಪಡೆಯಬಹುದು.

Join Nadunudi News WhatsApp Group

•ಗೃಹ ಸಾಲದ ವಿನಾಯಿತಿ
ನೀವು ಗೃಹ ಸಾಲಕ್ಕಾಗಿ ತೆಗೆದುಕೊಂಡ ಮೊತ್ತ ಮತ್ತು ಅದರ ಮೇಲೆ ವಿಧಿಸುವ ಬಡ್ಡಿ ಎರಡಕ್ಕೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ನೀವು ವಾರ್ಷಿಕವಾಗಿ ರೂ 1.5 ಲಕ್ಷದ ವರೆಗಿನ ಗೃಹ ಸಾಲದ ಅಸಲು ಮೊತ್ತದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದರೆ ಸೆಕ್ಷನ್ 24 ರ ಅಡಿಯಲ್ಲಿ ರೂ. 2 ಲಕ್ಷದವರೆಗಿನ ಅಸಲು ಮೊತ್ತದ ಮೇಲೆ ವಿಧಿಸಲಾದ ಬಡ್ಡಿಯ ಮೇಲೆ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

•ದೇಣಿಗೆಯ ಮೇಲೆ ವಿನಾಯಿತಿ ಪಡೆಯಬಹುದು
ದಾನ ಮಾಡಿದರೆ ತೆರಿಗೆಯನ್ನು ಉಳಿಸಬಹುದು. ದತ್ತಿ ಮೊತ್ತದ ಮೇಲಿನ ವಿನಾಯಿತಿಯನ್ನು ಆದಾಯ ತೆರಿಗೆಯ ಸೆಕ್ಷನ್ 80CCC ಅಡಿಯಲ್ಲಿ ಕ್ಲೈಮ್ ಮಾಡಬಹುದು. ಮಾನ್ಯತೆ ಪಡೆದ ದತ್ತಿ ಸಂಸ್ಥೆಗೆ ನೀಡಿದ ದೇಣಿಗೆ ತೆರಿಗೆ ವಿನಾಯಿತಿಯ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಸಂಪೂರ್ಣ ದೇಣಿಗೆಯ ಮೇಲೆ ವಿನಾಯಿತಿ ಲಭ್ಯವಿಲ್ಲ. 200 ರೂ.ಗಿಂತ ಹೆಚ್ಚಿನ ಮೊತ್ತದ ಮೇಲೆ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group