Smartphone: 128 GB ಸ್ಟೋರೇಜ್ ಜೊತೆಗೆ 7000 mAh ಬ್ಯಾಟರಿ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್ ಬಜೆಟ್ ಮೊಬೈಲ್.

ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದೆ ಟೆಕ್ನೋ ಕಂಪನಿಯ ಹೊಸ ಸ್ಮಾರ್ಟ್ ಫೋನ್.

Tecno Pova Neo 3 Smartphone: ಇದೀಗ ಮೊಬೈಲ್ ಗಳ ಮೇಲಿನ ಬೇಡಿಕೆ ಹೆಚ್ಚಿದ್ದು ಗ್ರಾಹಕರ ಬೇಡಿಕೆ ಅನುಗುಣವಾಗಿ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಮೊಬೈಲ್ ಗಳನ್ನೂ ಪರಿಚಯಿಸುತ್ತಿವೆ. ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ.

ಇದೀಗ ದೇಶದ ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಯಾದ ಟೆಕ್ನೋ (Tecno) ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ಇದೀಗ ತನ್ನ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದ್ದು ಈ ಹೊಸ ಸ್ಮಾರ್ಟ್ ಫೋನ್ ಗ್ರಾಹಕರನ್ನು ಸೆಳೆಯಲಿದೆ.

Tecno Pova Neo 3 Smartphone feature
Image Credit: Businessinsider

ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ (Tecno Pova Neo 3 Smartphone) 
ಪ್ರತಿಷ್ಠಿತ ಮೊಬೈಲ್ ತಯಾರಕ ಕಂಪನಿಯಾದ ಟೆಕ್ನೋ ಇದೀಗ ತನ್ನ ಪೋವಾ ಸರಣಿಯ ಅಡಿಯಲ್ಲಿ ಹೊಚ್ಚ ಹೊಸ ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಟೆಕ್ನೋ ಪೋವಾ ನಿಯೋ 2 ಸ್ಮಾರ್ಟ್ ಫೋನ್ ಲಭ್ಯವಿದ್ದು ಇದೀಗ ಹೊಸ ಮಾದರಿಯ ಫೋನ್ ಮಾರುಕಟ್ಟೆಗೆ ಬರುತ್ತಿದೆ. ಪೋವಾ ನಿಯೋ 2 ಸ್ಮಾರ್ಟ್ ಫೋನ್ ನ ಮಾದರಿಗಿಂತ ಹೊಸ ಪೋವಾ ನಿಯೋ 3 ಸ್ಮಾರ್ಟ್ ಫೋನ್ ಹೆಚ್ಛಿನ RAM ಮತ್ತು ವಿಭಿನ್ನ ಫೀಚರ್ ಅನ್ನು ಒಳಗೊಂಡಿದೆ.

ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ ವಿಶೇಷತೆ
ಹೊಸ Turbo Mecha ಸುಧಾರಿತ ವಿನ್ಯಾಸವನ್ನು ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ ಹೊಂದಿದೆ. Mecha Black, Amber Gold ಮತ್ತು Hurricane Blue ನಂತಹ ಮೂರು ಬಣ್ಣಗಳ ಆಯ್ಕೆಯಲ್ಲಿ ನಿಯೋ 3 ಸ್ಮಾರ್ಟ್ ಫೋನ್ ಲಭ್ಯವಾಗಲಿದೆ.

ಈ ಸ್ಮಾರ್ಟ್ ಫೋನ್ 6 .82 ಇಂಚಿನ HD ಡಿಸ್ ಪ್ಲೇ ಹೊಂದಿದ್ದು, IPS LCD ಪ್ಯಾನೆಲ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ 1640 x 720 ಪಿಕ್ಸೆಲ್ ರೆಸಲ್ಯೂಷನ್ ಅನ್ನು ಒಳಗೊಂಡಿದೆ. ಈ ನಿಯೋ 3 ಸ್ಮಾರ್ಟ್ ಫೋನ್ HiOS 13 ಆಧಾರಿತ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

Join Nadunudi News WhatsApp Group

Tecno Pova Neo 3 Smartphone Battery Capacity
Image Credit: Republicworld

ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ ಬ್ಯಾಟರಿ ಸಾಮರ್ಥ್ಯ
ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ 8GB RAM ಹಾಗೂ 128GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚಿನ ಸಂಗ್ರಣೆಗಾಗಿ ಇದು ಮೈಕ್ರೋ SD ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಈ ಟೆಕ್ನೋ ಪೋವಾ ನಿಯೋ 3 ಸ್ಮಾರ್ಟ್ ಫೋನ್ 18W ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದ್ದು, 7000mAh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಇನ್ನು ಈ ನಿಯೋ 3 ಸ್ಮಾರ್ಟ್ ಫೋನ್ ನ ಬೆಲೆ 14,990 ರೂ. ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group