Tecno Spark 20: ಕೇವಲ 10 ಸಾವಿರ ಬಜೆಟ್ ನಲ್ಲಿ ಲಾಂಚ್ ಆಯಿತು ಈ ಟೆಕ್ನೋ ಫೋನ್, ಬಡವರಿಗಾಗಿ

ಕೇವಲ 10 ಸಾವಿರಕ್ಕೆ ಖರೀದಿಸಿ ಈ ಟೆಕ್ನೋ ಫೋನ್.

Tecno Spark 20 Smartphone: ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಾದ Tecno ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಪ್ರೀಮಿಯಂ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಈಗಂತೂ ಸ್ಮಾರ್ಟ್ ಫೋನ್ ಗಳು ಬಾರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಖರೀದಿಸುತ್ತಿದ್ದಾರೆ. ಇದೀಗ ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಟೆಕ್ನೋ ನೂತನ ಮಾದರಿಯ ಸ್ಮಾರ್ಟ್ ಫೋನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Tecno Spark 20 Smartphone Price And Feature
Image Credit: Loksankalp

ಬಜೆಟ್ ಪ್ರಿಯರಿಗಾಗಿ ಹೊಸ ಸ್ಮಾರ್ಟ್ ಫೋನ್ ಲಾಂಚ್
ಇದೀಗ ಗ್ರಾಹಕರ ಬಜೆಟ್ ಬೆಲೆಯಲ್ಲಿ ನೂತನ ವೈಶಿಷ್ಟ್ಯಗಳಿರುವ ಸ್ಮಾರ್ಟ್ ಫೋನ್ ಲಂಚ್ ಆಗಿದೆ. ಟೆಕ್ನೋ ತನ್ನ Spark 20 ಸ್ಮಾರ್ಟ್ ಫೋನ್ ಅನ್ನು ಡಿಸೆಂಬರ್ 2023 ರಲ್ಲಿಯೇ ಮಾರುಕಟ್ಟೆಯಲ್ಲಿ ಲಂಚ್ ಮಾಡಿದೆ. ಪ್ರಸ್ತುತ ಈ ಸ್ಮಾರ್ಟ್ ಫೋನ್ 10 ಸಾವಿರಕ್ಕೂ ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರಲಿದೆ. ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ Tecno Spark 20 Smartphone ಮಾರುಕಟ್ಟೆಯಲ್ಲಿ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಠಕ್ಕರ್ ನೀಡುವುದರಲ್ಲಿ ಎರಡು ಮಾತಿಲ್ಲ.

ಕೇವಲ 10 ಸಾವಿರ ಬಜೆಟ್ ನಲ್ಲಿ ಲಾಂಚ್ ಆಯಿತು ಈ ಟೆಕ್ನೋ ಫೋನ್
ನೀವು Spark 20 Smartphone ನಲ್ಲಿ 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ನೋಡಬಹುದು. ಡ್ಯುಯೆಲ್ ರಿಯರ್ ಕ್ಯಾಮರಾವನ್ನು ಹೊಂದಿದ್ದು, ಈ ಸ್ಮಾರ್ಟ್ ಫೋನ್ ಡೈನಾಮಿಕ್ ಪೋರ್ಟ್ ಸಾಫ್ಟ್ ವೆರ್ ಅನ್ನು ಕೂಡ ಹೊಂದಿದೆ. Cyber ​​White, Gravity Black, Magic Skin 2.0 (Blue), and Neon Gold ಬಣ್ಣಗಳ ಆಯ್ಕೆಯಲ್ಲಿ ನೀವು Spark 20 Smartphone ಅನ್ನು ಕೇವಲ 10499 ರೂ. ಗಳಲ್ಲಿ ಖರೀದಿಸಬಹುದು.

Tecno Spark 20 Smartphone
Image Credit: 91mobiles

Spark 20 ಸ್ಮಾರ್ಟ್ಫೋನ್ ನ ವಿಶೇಷತೆ
ಟೆಕ್ನೋ ಸ್ಪಾರ್ಕ್ 20 ಫೋನ್ 6.6-ಇಂಚಿನ HD (720 x 1,612 ಪಿಕ್ಸೆಲ್‌ಗಳು) LCD ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಹೊಂದಿದೆ. ಫೋನ್ 8GB RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ MediaTek Helio G85 SoC ನಿಂದ ಚಾಲಿತವಾಗಿದೆ. RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ಯಿಂದ 16GB ವರೆಗೆ ವಿಸ್ತರಿಸಬಹುದು. ಇದು Android 13-ಆಧಾರಿತ HiOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಫೆ. 2 ರಿಂದ ಜನಪ್ರಿಯ ಇ- ಕಾಮರ್ಸ್ ವೆಬ್ ಸೈಟ್ ಆಗಿರುವ ಅಮೆಜಾನ್ ನಲ್ಲಿ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group