Temple Priests: ಎಲ್ಲಾ ಜಾತಿಯವರೂ ಕೂಡ ದೇವಸ್ಥಾನದ ಅರ್ಚಕರಾಗಬಹುದು, ಕೋರ್ಟ್ ಮಹತ್ವದ ತೀರ್ಪು.

ಮದ್ರಾಸ್ ಹೈಕೋರ್ಟ್ ದೇವಸ್ಥಾನದ ಅರ್ಚಕರಾಗಲು ಯಾವ ಜಾತಿಯವರು ಅರ್ಹರಾಗಿರುತ್ತಾರೆ ಎನ್ನುವ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.

Temple Priests: ದೇಶದಲ್ಲಿ ಜಾತಿ ವಿಚಾರವಾಗಿ ಸಾಕಷ್ಟು ಗಲಭೆಗಳು ಉಂಟಾಗುತ್ತದೆ. ಜಾತಿ ವಿಚಾರವಾಗಿ ಮೇಲು ಕೀಳು ಎನ್ನುವ ಭಾವನೆಗಳು ಇದ್ದೆ ಇರುತ್ತದೆ. ಮದುವೆಯಾಗುವ ಸಮಯದಲ್ಲಿ ಕೂಡ ಜಾತಿ ವಿಚಾರದ ಕಾರಣ ಸಾಕಷ್ಟು ವಿವಾದಗಳು ನಡೆಯುತ್ತದೆ. ಹಲವು ಕಡೆ ಪರ ಜಾತಿಯ ವ್ಯಕ್ತಿಯನ್ನು ವಿವಾಹ ಆಗಲು ಅನುಮತಿ ನೀಡುವುದಿಲ್ಲ. ಇನ್ನು ಕೂಡ ದೇಶದಲ್ಲಿ ಜಾತಿ ಬೇದ ಸಮಸ್ಯೆಗಳಿವೆ.

ಕೆಲ ವರ್ಗದ ಜನರಿಗೆ ಇಂದು ಕೂಡ ಪ್ರಮುಖ ದೇವಾಲಗಳಿಗೆ ಪ್ರವೇಶ ನಿಷಿದ್ಧವಾಗಿದೆ. ದೇವಸ್ಥಾನದಲ್ಲಿ ಕೆಲಸ ಮಾಡಲು ಕೂಡ ಕೆಲ ವರ್ಗದ ಜನರನ್ನು ಅನುಮತಿಸುವುದಿಲ್ಲ. ಇನ್ನು ದೇವಸ್ಥಾನದ ಅರ್ಚಕರು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ಇದೀಗ ಮದ್ರಾಸ್ ಹೈಕೋರ್ಟ್ (Madras High Court) ದೇವಸ್ಥಾಕ್ಕೆ ಅರ್ಚಕರಾಗಲು ಯಾವ ಜಾತಿಯವರು ಅರ್ಹರಾಗಿರುತ್ತಾರೆ ಎನ್ನುವ ಬಗ್ಗೆ ಆದೇಶವನ್ನು ಹೊರಡಿಸಿದೆ.

High Court order on which caste people are eligible to become temple priests
Image Credit: Thehindu

ದೇವಸ್ಥಾನದ ಅರ್ಚಕರಾಗಲು ಯಾವ ಜಾತಿಯ ಜನರು ಅರ್ಹರು ಎನ್ನುವ ಕುರಿತು ಹೈಕೋರ್ಟ್ ಆದೇಶ
“ದೇವಾಲಯಗಳಲ್ಲಿ ಅರ್ಚಕರನ್ನು ನೇಮಿಸುವಲ್ಲಿ ಜಾತಿಯ ಪಾತ್ರವಿಲ್ಲ. ಆದರೆ ನಿರ್ಧಿಷ್ಟ ದೇವಾಲಯದ ಆಗಮ ತತ್ವಗಳನ್ನು ವ್ಯಕ್ತಿ ಚೆನ್ನಾಗಿ ತಿಳಿದಿರುವುದು ಮಾತ್ರ ಅವಶ್ಯಕತೆ ಇದೆ.

ಪುನರಾವರ್ತನೆಯ ಅಪಾಯದಲ್ಲಿ ಜಾತಿಯನ್ನು ಆಧರಿಸಿ ವಂಶಾವಳಿಯ ಅರ್ಚಕರ ನೇಮಕಾತಿಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಆದರೆ ಹುದ್ದೆಗೆ ಆಯ್ಕೆ ಮಾಡಿದ ವ್ಯಕ್ತಿಯು ಅವಶ್ಯಕತೆಗಳನ್ನು ಪೂರೈಸಬೇಕು” ಎಂದು ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಏನ್. ಆನಂದ್ ಮಹತ್ವದ ಆದೇಶವನ್ನು ನೀಡಿದೆ.

High Court order on which caste people are eligible to become temple priests
Image Credit: Barandbench

ಅರ್ಚಕರಾಗುವವರು ದೇವಸ್ಥಾನದಲ್ಲಿ ಮಾಡಲಾಗುವ ಎಲ್ಲ ಆಚರಣೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಧಾರ್ಮಿಕ ಸೇವೆಯನ್ನು ನಿರ್ವಹಿಸುವುದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ. ಅರ್ಚಕರ ಧಾರ್ಮಿಕ ಸೇವೆಯು ಧರ್ಮದ ಜಾತ್ಯತೀತ ಭಾಗವಾಗಿದೆ ಮತ್ತು ಧಾರ್ಮಿಕ ಸೇವೆಯ ಕಾರ್ಯಕ್ಷಮತೆಯೂ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ಕೋರ್ಟ್ ಹೇಳಿದೆ.

Join Nadunudi News WhatsApp Group

Join Nadunudi News WhatsApp Group