Halal Certificate: ಮಾಂಸಗಳ ಮೇಲೆ ಹೊಸ ಹಲಾಲ್ ನಿಯಮವನ್ನ ಜಾರಿಗೆ ತಂದ ಕೇಂದ್ರ ಸರ್ಕಾರ, ಪ್ರಮಾಣಪತ್ರ ಕಡ್ಡಾಯ.

ಮಾಂಸಗಳಿಗೆ ಹಲಾಲ್ ನಿಯಮಗಳನ್ನ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ.

Halal Certificate: ಭಾರತದಿಂದ ವಿದೇಶಗಳಿಗೆ ಕೆಲವು ಮಾಂಸಗಳನ್ನು ರಫ್ತು (Meats Export) ಮಾಡಲಾಗುತ್ತದೆ. ವಿದೇಶಗಳಿಗೆ ಮಾಂಸಗಳನ್ನು ರಫ್ತು ಮಾಡಲು ಹಲವು ನಿಯಮಗಳಿದ್ದು ಮಾಂಸಗಳನ್ನು ರಫ್ತು ಮಾಡುವ ವ್ಯಾಪಾರಸ್ಥರು ಅಥವಾ ಸಂಸ್ಥೆಯವರು ಕೇಂದ್ರ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಅದೇ ರೀತಿಯಲ್ಲಿ ವಿದೇಶಕ್ಕೆ ಮಾಂಸಗಳನ್ನು ರಫ್ತು ಮಾಡುವ ಸಮಯದಲ್ಲಿ ಪ್ರಮಾಣ ಪತ್ರವನ್ನು (Halal Certificate) ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

The central government has made Halal rules mandatory for meats.
Image Credit: opindia

ಹಲಾಲ್ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
ವಿದೇಶಗಳಿಗೆ ರಫ್ತಾಗುವ ಮಾಂಸಗಳಿಗೆ ಹಲಾಲ್ ಪ್ರಮಾಣಪತ್ರ ಕಡ್ಡಾಯವಾಗಿ ಇರಬೇಕು ಎಂದು ಕೇಂದ್ರ ಸರ್ಕಾರ (Central Government) ಆದೇಶವನ್ನು ಹೊರಡಿಸಿದೆ. ಉತ್ತಮ ಗುಣಮಟ್ಟದ ಮಾಂಸಗಳನ್ನು ರಫ್ತುಮಾಡುವ ಉದ್ದೇಶದಿಂದ ವಿದೇಶಗಳಿಗೆ ರಫ್ತಾಗುವ ಮಾಂಸಗಳಿಗೆ ಹಲಾಲ್ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರದ ಆದೇಶದಲ್ಲಿ ಏನಿದೆ
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯ ಅಕ್ರೆಡಿಷನ್ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಹೊಂದಿರುವ ಪ್ಯಾಕೇಜಿಂಗ್ ಕೇಂದ್ರಗಳಲ್ಲಿ ಮಾಂಸ ಉತ್ಪನ್ನಗಳನ್ನು ತಯಾರಿಸಿ ಪ್ರೊಸೆಸಿಂಗ್ ನಡೆಸಿ ಪ್ಯಾಕ್ ಆಗಿದ್ದರೆ ಮಾತ್ರ ಹಲಾಲ್ ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸೂಚನೆಯನ್ನು ಹೊರಡಿಸಿದೆ.

The central government has issued an order making many certificates mandatory for meat sent to foreign countries
Image Credit: downtheroadbutchery

ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲದ ದೇಶಗಳಿಗೆ ಮಾಂಸ ಉತ್ಪನ್ನಗಳನ್ನು ರಫ್ತು ಮಾಡುವಾಗ ಆ ದೇಶದ ಅವಶ್ಯಕತೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಕಳುಹಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group