The Kerala Story: ವಿವಾದದ ನಡುವೆಯೂ ದಾಖಲೆಯ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ, ಭರ್ಜರಿ ಕಲೆಕ್ಷನ್.

ಕೆಲವು ವಿವಾದಗಳ ನಡೆವೆಯೂ ದಿ ಕೇರಳ ಸ್ಟೋರಿ ಚಿತ್ರ ದೇಶದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.

The Kerala Story Collection: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದೆ. ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಸಾಕಷ್ಟು ಜನರು ಈ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಸಿನಿಮಾ ವಿವಾದದ ಮದ್ಯೆ ಸಿಲುಕಿಕೊಂಡಿದ್ದರು ದಾಖಲೆಯ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾ ವಿವಾದದಿಂದ ಸಾಕಷ್ಟು ಚಿತ್ರಮಂದಿರದಲ್ಲಿ ರಿಲೀಸ್ ಆಗಿಲ್ಲ. ಆದರೂ ಸಹ ರಿಲೀಸ್ ಆಗಿದ್ದ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

Despite some controversies, The Kerala Story made record collections in the country.
Image Credit: firstpost

ವಿವಾದಕ್ಕೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ
ಇನ್ನು ಹಲವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಸಾಕಷ್ಟು ಜನರು ಚಿತ್ರಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಕೂಡ ಘೋಷಣೆ ಮಾಡಿದ್ದು ಇದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ದಿ ಕೇರಳ ಸ್ಟೋರಿ ಸಿನಿಮಾ
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಕೆಲವು ಸೂಕ್ಷ್ಮ ವಿಚಾರಗಳು ಇರುವುದರಿಂದ ಜನರು ಸಿನಿಮಾದ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಇರುವುದು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳಲು ಜನರು ಕಾಯುತ್ತಿದ್ದಾರೆ. ಸದ್ಯ ಹಲವು ವಿವಾದಗಳ ನಡುವೆ ಕೂಡ ದಿ ಕೇರಳ ಸ್ಟೋರಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಜನರು ಮೆಚ್ಚುವೆಯನ್ನ ವ್ಯಕ್ತಪಡಿಸಿದ ಕಾರಣ ದೇಶದಲ್ಲಿ ದಿ ಕೇರಳ ಸ್ಟೋರಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ.

Having faced many controversies, Kerala Story has made a record in terms of film collections.
Image Credit: zeenews

ದಿ ಕೇರಳ ಸ್ಟೋರಿ ಸಿನಿಮಾದ 5 ದಿನದ ಕಲೆಕ್ಷನ್
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ ಸತತ ಐದು ದಿನ ಆಗಿದೆ. ಈ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 55 ರಿಂದ 60 ಕೋಟಿ ರೂಪಾಯಿ ಗಳಿಸಿದೆ. ಸಾಕಷ್ಟು ವಿವಾದದ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

Join Nadunudi News WhatsApp Group

ಬಿಡುಗಡೆಯಾದ ಐದು ದಿನದಲ್ಲಿ 55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ದಿ ಕೇರಳ ಸ್ಟೋರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಈ ಚಿತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಮಾಡಲಿದೆ.

Join Nadunudi News WhatsApp Group