The Kerala Story: ದಿ ಕೇರಳ ಚಿತ್ರವನ್ನ ಯಾಕೆ ನಿಷೇಧ ಮಾಡಲಾಗಿದೆ, ಸುಪ್ರೀಂ ಕೋರ್ಟ್ ಪ್ರಶ್ನೆ ಉತ್ತರಿಸಿದ ತಮಿಳುನಾಡು ಸರ್ಕಾರ.

ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಚಿತ್ರವನ್ನ ಯಾಕೆ ಬ್ಯಾನ್ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಈಗ ಪ್ರಶ್ನೆಯನ್ನ ಮಾಡಿದೆ.

The Kerala Story Controversy: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದೆ. ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಸಾಕಷ್ಟು ಜನರು ಈ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಸಿನಿಮಾ ವಿವಾದದ ಮದ್ಯೆ ಸಿಲುಕಿಕೊಂಡಿದ್ದರು ದಾಖಲೆಯ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾ ವಿವಾದದಿಂದ ಸಾಕಷ್ಟು ಚಿತ್ರಮಂದಿರದಲ್ಲಿ ರಿಲೀಸ್ ಆಗಿಲ್ಲ.

The Kerala Story Controversy
Image Source: India Today

ವಿವಾದಕ್ಕೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ
ಇನ್ನು ಹಲವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಸಾಕಷ್ಟು ಜನರು ಚಿತ್ರಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಕೂಡ ಘೋಷಣೆ ಮಾಡಿದ್ದು ಇದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

The Kerala Story Controversy
Image Source: India Today

ಸುಪ್ರೀಂ ಕೋರ್ಟ್ ಪ್ರಶ್ನೆಗೆ ಉತ್ತರಿಸಿದ ತಮಿಳುನಾಡು ಸರ್ಕಾರ
ಇನ್ನು ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಿ ಎರಡು ದಿನ ಕಳೆದರು ಸಹ ತಮಿಳುನಾಡಿನಲ್ಲಿ ಈ ಸಿನಿಮಾ ನೋಡಲು ಯಾರು ಬರುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯಾದ್ಯಂತ ಥಿಯೇಟರ್​​​ ಮಾಲೀಕರು ಈ ಕ್ರಮಕ್ಕೆ ಬಂದಿದ್ದಾರೆ ಎಂದು ಸುಪ್ರೀಂ ಕೋರ್ಟ್​​​ ನೋಟಿಸ್​​​ಗೆ ತಮಿಳುನಾಡು ಸರ್ಕಾರ ಉತ್ತರಿಸಿದೆ.

ಮಲ್ಟಿಪ್ಲೆಕ್ಸ್​​​ ಮಾಲೀಕರು ಮೇ 7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಇದಕ್ಕೆ ಕಾರಣ ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡಲು ಜನರೇ ಇರಲಿಲ್ಲ ಎಂದು ತಮಿಳುನಾಡು ಸರ್ಕಾರ ಪತ್ರದಲ್ಲಿ ಉತ್ತರಿಸಿದೆ. ಜತೆಗೆ ಇದು ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್​​​ಗಳಲ್ಲಿ ​​ ಬಿಡುಗಡೆಯಾಗಿದೆ ಎಂದು ಹೇಳಿದೆ.

Join Nadunudi News WhatsApp Group

The Kerala Story Controversy
Image Source: Zee News

ದಿ ಕೇರಳ ಸ್ಟೋರಿ ಚಿತ್ರದಲ್ಲಿ ಯಾವುದೇ ಜನಪ್ರಿಯ ನಟರು ಇಲ್ಲ ಅದಕ್ಕಾಗಿ ಕಳಪೆ ಪ್ರದರ್ಶನಗೊಂಡು ಬಾಕ್ಸ್​​ ಆಫೀಸ್​​ಗೆ​​ ಭಾರೀ ತೊಂದರೆಯಾಗಿದೆ ಎಂದು ಹೇಳಿದೆ. ಇದರ ಜತೆಗೆ ಈ ಸಿನಿಮಾವನ್ನು ನೋಡಲು ಅಷ್ಟೊಂದು ಜನ ಬಂದಿಲ್ಲ ಎಂದು ಸ್ವತಃ ಚಲನಚಿತ್ರ ಪ್ರದರ್ಶಕರೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಇನ್ನೂ ಈ ಸಿನಿಮಾ ನೋಡು ಜನ ಬರಬೇಕು ಎಂದು ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.

Join Nadunudi News WhatsApp Group