Agriculture: ತೆಂಗಿನ ಜೊತೆ ಈ ಬೆಳೆಯನ್ನು ಬೆಳೆಯುವುದರ ಮೂಲಕ ಭರ್ಜರಿ ಆದಾಯ ಮಾಡಬಹುದು

ಏಲಕ್ಕಿ ಕೃಷಿ ಮಾಡುವ ಮನಸ್ಸು ಇದ್ದವರಿಗೆ ಈ ಮಾರ್ಗ ಸೂಚಿ ಉಪಯುಕ್ತ ಆಗಲಿದೆ.

ಪಾಯಸ, ಲಾಡು ಇನ್ನಿತರ ಸ್ವೀಟ್ಸ್ ಗಳಿಗೆ ಇಂದು ಏಲಕ್ಕಿ (Cardamom) ತುಂಬಾ ಅಗತ್ಯವಾಗಿದ್ದು ಇದರ ಘಮವನ್ನು ಇಷ್ಟ ಪಡದವರು ತುಂಬಾ ಕಮ್ಮಿ ಎನ್ನಬಹುದು. ಮಕ್ಕಳಿಂದ ಅಬಾಲವೃದ್ಧರವರೆಗೂ ಈ ಫ್ಲೇವರ್ ತುಂಬಾ ಜನರು ಇಷ್ಟಪಡುತ್ತಲೇ ಇರುತ್ತಾರೆ. ಅದೇ ರೀತಿ ಏಲಕ್ಕಿ ತಿನ್ನಲು ಮಾತ್ರ ಘಮ ಇರದೆ ಕೃಷಿಯಿಂದ ಕೂಡ ಉತ್ತಮ ಆದಾಯವನ್ನು ನೀವು ಗಳಿಸಬಹುದಾಗಿದೆ. ಏಲಕ್ಕಿ ಕೃಷಿ ಮಾಡುವ ಮನಸ್ಸು ಇದ್ದವರಿಗೆ ಈ ಮಾರ್ಗ ಸೂಚಿ ಉಪಯುಕ್ತ ಆಗಲಿದೆ.

ಈ ವಿಧಾನ ಅನುಸರಿಸಿ

ಏಲಕ್ಕಿಯನ್ನು ನಿಮ್ಮ ತೋಟದಲ್ಲಿ ಉಪಬೆಳೆಯಾಗಿ ಬೆಳೆಯಬಹುದಾಗಿದೆ. ಕೆಲವೊಮ್ಮೆ ಅಂತರ್ ಬೆಳೆಯಲ್ಲಿ ಆದಾಯ ಬರದಿದ್ದರೂ ಕೂಡ ತೋಟದ ನಿರ್ವಹಣೆ ತುಂಬಾ ಚೆನ್ನಾಗಿ ಇರುತ್ತದೆ.ಹತ್ತು ರೂ. ಗೆಲ್ಲ ಏಲಕ್ಕಿ ಗಿಡ ಲಭ್ಯ ಇದ್ದು ಸುಲಭಕ್ಕೆ ನೆಡಬಹುದು. ಮೊದಲಿಗೆ ಏಲಕ್ಕಿ ಕಂದನ್ನು ನಾಟಿ ಮಾಡಿ, ಅದಕ್ಕೆ ವಿಶೇಷ ಆರೈಕೆ ಅಗತ್ಯ ಇಲ್ಲ ಸಹಜವಾಗಿ ಗಿಡ ಪೋಷಣೆ ಆಗಲಿದೆ. ಎರೆಹುಳ ಮತ್ತು ಕೊಟ್ಟಿಗೆ ಗೊಬ್ಬರ ಇದಕ್ಕೆ ಉತ್ತಮ ಪೋಷಣೆಯಾಗಿದೆ. ನೀರು ನಿಲ್ಲಬಾರದು ಹರಿದು ಹೋಗುವಂತೆ ಗಿಡದ ಪೋಷಣೆ ಮಾಡಬೇಕು.

Agriculture
Image Source: News18

ಯಾವಾಗ ಫಸಲು ಬರಲಿದೆ

ಏಲಕ್ಕಿ ಗಿಡನೆಟ್ಟು ಒಂದು ವರ್ಷಕ್ಕೆಲ್ಲ ಇಳುವರಿ ನಿಮಗೆ ಸಿಗಲಿದೆ. ಆದರೂ ಎರಡು ವರ್ಷದಿಂದ ಫಲ ಉತ್ತಮ ಇಳುವರಿ ಸಿಗಲಿದೆ. ಈ ಮೂಲಕ ಎರಡರಿಂದ ಹತ್ತು ವರ್ಷದ ವರೆಗೂ ಒಂದು ಗಿಡ ಏಲಕ್ಕಿ ಕೃಷಿಯಲ್ಲಿ ರೈತರಿಗೆ ಲಾಭ ನೀಡಲಿದೆ. ಇದನ್ನು ಕಪ್ಪೆಗಳು ಮತ್ತು ಹಕ್ಕಿಗಳು ತಿನ್ನುವ ಕಾರಣ ಆ ಬಗ್ಗೆ ಕೂಡ ಸೂಕ್ತ ಕ್ರಮ ಅನುಸರಿಸುವುದು ಅಗತ್ಯ.

Join Nadunudi News WhatsApp Group

ಲಾಭ ಇದೆ

ಈ ಅಂತರ್ ಬೆಳೆ ವಿಧಾನದಿಂದಾಗಿ ತೋಟ ನಿರ್ವಹಣೆ ಸುಲಭವಾಗಲಿದೆ. ತೋಟದಲ್ಲಿ ಸ್ವಚ್ಚತಾ ಕಾರ್ಯ ಆಗಲಿದೆ. ಗಿಡಗಳ ಪೋಷಣೆ ಜೊತೆಗೆ ಕಳೆ ನಿರ್ವಹಣೆ ಸಹ ಸುಲಭವಾಗಿ ಆಗಲಿದ್ದು ತೋಟಕ್ಕು ಒಂದು ಹೊಸ ಮೆರಗು ಸಿಗಲಿದೆ. ಈ ಮೂಲಕ ಇದರ ನಿರ್ವಹಣೆ ಎಲ್ಲವೂ ಒಂದು ಉತ್ತಮ ಹೊಣೆ ಎನ್ನಬಹುದು.

Agriculture
Image Source: Youtube

ಅಡಿಕೆ ಜೊತೆ ಬೆಳೆ ಉತ್ತಮ

ತೆಂಗಿನ ತೋಟಕ್ಕೆ ಇದು ಅಷ್ಟು ಸೂಕ್ತ ಅಲ್ಲದ ಕಾರಣ ಅಡಿಕೆ ಗಿಡದ ಜೊತೆ ಉಪಬೆಳೆಯಾಗಿ ಬೆಳೆಯಬಹುದು. ಯಾಕೆಂದರೆ ತೆಂಗಿನ ಕಾಯಿ ಮಡಲು ಬೀಳುವ ಕಾರಣ ಸಸಿ ಹಾನಿಯಾಗುವ ಸಾಧ್ಯತೆ ಅಧಿಕ ಇದೆ. ಹಾಗಾಗಿ ಏಲಕ್ಕಿ ಕೃಷಿ ಪೋಷಣೆ ತಂಪಿನ ಜಾಗದಲ್ಲಿ ಆಗಬೇಕು ಬಿಸಿಲಿದ್ದರೆ ಎಲೆ ಒಣಗಿ ಗಿಡ ಹಾಳಾಗುವ ಸಾಧ್ಯತೆ ಕೂಡ ಇದೆ.

Join Nadunudi News WhatsApp Group