Criminal Law: ಜುಲೈ 1 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಈ ಮೂರೂ ಕ್ಕ್ರಿಮಿನಲ್ ಕಾನೂನು, ಹೊಸ ಕಾನೂನು ಜಾರಿ

ಜುಲೈ 1 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ

Three New Criminal Law: ಸದ್ಯ ದೇಶದಲ್ಲಿ ಹೊಸ ವರ್ಷದ ಆರಂಭದಿಂದ ಅನೇಕ ನಿಯಮಗಳು ಬದಲಾಗುತ್ತಿದೆ. ದೇಶದ ಜನತೆ ಹೊಸ ಹೊಸ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ರೀತಿಯ ಹಣಕಾಸಿನ ನಿಯಮಗಳು ಕೂಡ ಬದಲಾಗಿವೆ ಎನ್ನಬಹುದು. ಸದ್ಯ ದೇಶದಲ್ಲಿ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ. ಜುಲೈ 1 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿಗೆ ಬರಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.

Criminal Law latest News
Image Credit: Kashmirobserver

ಜುಲೈ 1 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ
ಜುಲೈ 1 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ. ದೇಶದ ವಸಾಹತುಶಾಹಿ ಯುಗದ ಕಾನೂನುಗಳನ್ನು (Indian Penal Code) ಬದಲಿಸುವುದಾಗಿ ಸರ್ಕಾರ ಘೋಷಿಸಿದೆ. ಭಾರತೀಯ ನ್ಯಾಯಾಂಗ ಸಂಹಿತೆ, ಭಾರತೀಯ ನಾಗರಿಕ ಸಂರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯಾಧಾರ ಮಸೂದೆಗಳು 1860 ರ ಭಾರತೀಯ ದಂಡ ಸಂಹಿತೆ (IPC), 1973 ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸುತ್ತದೆ. ಸಂಸತ್ತು ಇತ್ತೀಚೆಗೆ ಮೂರು ಕಾನೂನುಗಳನ್ನು ಅಂಗೀಕರಿಸಿದೆ.

Three New Criminal Law
Image Credit: Theprint

ರಾಷ್ಟ್ರಪತಿ ದ್ರೌಪದಿ ಮುರ್ಮು ಕಳೆದ ಡಿಸೆಂಬರ್‌ ನಲ್ಲಿ ಇದಕ್ಕೆ ಒಪ್ಪಿಗೆ ನೀಡಿದ್ದರು. ಹೊಸ ಕಾನೂನುಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಕಲ್ಯಾಣಕ್ಕೆ ಒತ್ತು ನೀಡುತ್ತವೆ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಾದಿಸಿದ್ದರು. ಹೊಸ ಕಾನೂನುಗಳು ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುತ್ತವೆ.

‘ತನಿಖೆ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಹೇಳಿದರು. ಮೂರು ಕಾಯಿದೆಗಳ ಅಡಿಯಲ್ಲಿ ಎಲ್ಲಾ ವ್ಯವಸ್ಥೆಗಳು ಜಾರಿಗೆ ಬಂದ ನಂತರ ಐದು ವರ್ಷಗಳಲ್ಲಿ ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಮುಂದುವರೆದ ಕಾನೂನಾಗಲಿದೆ ಎಂದು ಅಮಿತ್ ಶಾ ಹೇಳಿಕೊಂಡಿದ್ದರು.

Join Nadunudi News WhatsApp Group

Join Nadunudi News WhatsApp Group