Tax Saving Tip: ಈ 6 ವಿಧಾನವನ್ನ ಅನುಸರಿಸಿದರೆ ನಿಮಗೆ ಬರಲ್ಲ ಆದಾಯ ತೆರಿಗೆ ನೋಟೀಸ್, ತೆರಿಗೆ ರೂಲ್ಸ್

ಈ 6 ವಿಧಾನದ ಮೂಲಕ ನೀವು ತೆರಿಗೆ ಉಳಿತಾಯ ಮಾಡಬಹುದು

Tax Saving Investment: ಇನ್ನೇನು ಕೆಲವೇ ತಿಂಗಳುಗಳು ಕಳೆದರೆ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಇನ್ನು ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗ ITR ಸಲ್ಲಿಸಬೇಕಿದೆ. ಈಗಾಗಲೇ ITR ಸಲ್ಲಿಕೆಗೆ ಗಡುವು ಹತ್ತಿರವಾಗುತ್ತಿದೆ. ತೆರಿಗೆ ಪಾವತಿದಾರರು ತೆರಿಗೆ ಉಳಿತಾಯಡಿ ಕಡೆ ಹೆಚ್ಚಿನ ಗಮ ಹರಿಸುತ್ತಿದ್ದಾರೆ.

ಇನ್ನು ಆದಾಯ ಇಲಾಖೆಯು ಕೆಲ ಮೂಲದ ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಇನ್ನು ನೀವು ತೆರಿಗೆ ಉಳಿಸಲು ಯೋಚಿಸುತ್ತಿದ್ದರೆ ಈ ವಿಧಾನವನ್ನು ಅನುಸರಿಸಬಹುದು. ಈ ರೀತಿಯಾಗಲಿ ಹೂಡಿಕೆ ಮಾಡಿವುದರಿಂದ ನೀವು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಬಹುದು. ಇದೀಗ ನಾವು ಈ ಲೇಖನದಲ್ಲಿ ತೆರಿಗೆ ಉಳಿಸುವ 6 ವಿಧಾನದ ಬಗ್ಗೆ ಮಹಿತಿ ತಿಳಿಯೋಣ.

Tax Saving Fixed Deposits
Image Credit: sfinopedia

ಈ 6 ವಿಧಾನವನ್ನ ಅನುಸರಿಸಿದರೆ ನಿಮಗೆ ಬರಲ್ಲ ಆದಾಯ ತೆರಿಗೆ ನೋಟೀಸ್
•Tax saving fixed deposit
ತೆರಿಗೆ ಉಳಿಸುವ ಫಿಕ್ಸೆಡ್ ಡೆಪಾಸಿಟ್‌ ಗಳು (FD) ತೆರಿಗೆ ಉಳಿಸಲು ಸುಲಭವಾದ ಆಯ್ಕೆಯಾಗಿದೆ. ಬ್ಯಾಂಕ್ ನಲ್ಲಿ FD ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಪ್ರಸ್ತುತ FD ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ಆಯ್ಕೆಯಾಗಿದೆ.

•Public Provident Fund
ನೀವು PPF ನಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಉಳಿಸಬಹುದು. ಇದರಲ್ಲಿ ಹಣ ಉಳಿತಾಯದ ಜತೆಗೆ ತೆರಿಗೆಯೂ ಉಳಿತಾಯವಾಗುತ್ತದೆ. ಇದು ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ವಿಧಾನವಾಗಿದೆ. ಇದರ ಮೂಲಕ ನೀವು ತೆರಿಗೆಯನ್ನು ಉಳಿಸಬಹುದು. ಇದು ಸರ್ಕಾರದ ಯೋಜನೆಯಾಗಿದೆ ಆದ್ದರಿಂದ ಇದು ಸಾಕಷ್ಟು ಸುರಕ್ಷಿತವೆಂದು ಪರಿಗಣಿಸಲಾಗಿದೆ.

Public Provident Fund Scheme
Image Credit: Housing

•National Savings Certificate
ನೀವು NSC ಮೂಲಕ ಹಣವನ್ನು ಉಳಿಸಬಹುದು. ಇದು ಸ್ಥಿರ ಆದಾಯದ ಹೂಡಿಕೆಯ ಆಯ್ಕೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. 5 ವರ್ಷಗಳ ಅವಧಿಗೆ ಲಾಕ್ ಇದೆ. ಇದರ ಹೊರತಾಗಿ, ಗ್ಯಾರಂಟಿ ರಿಟರ್ನ್ಸ್ ಲಭ್ಯವಿದೆ.

Join Nadunudi News WhatsApp Group

•Senior Citizen Savings Scheme
ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೂಲಕ ತೆರಿಗೆಯನ್ನು ಉಳಿಸಬಹುದು. ಇದರಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು ಮಾಡಲಾಗಿದೆ. ಇದರಲ್ಲೂ ಒಬ್ಬರು ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯ ಲಾಕ್-ಇನ್ ಅವಧಿಯು 5 ವರ್ಷಗಳು ಮತ್ತು ನೀವು ಅದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ, 80C ಅಡಿಯಲ್ಲಿ 1.5 ಲಕ್ಷದ ವರೆಗೆ ವಿನಾಯಿತಿಯ ಪ್ರಯೋಜನವು ಲಭ್ಯವಿದೆ.

Sukanya Samriddhi Yojana Latest
Image Credit: Times Now

•Sukanya Samriddhi Yojana
ಸುಕನ್ಯಾ ಸಮೃದ್ಧಿ ಯೋಜನೆಯು ತೆರಿಗೆ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ರೂಪಿಸಲಾಗಿದೆ. ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಈ ಯೋಜನೆ ಆರಂಭಿಸಿತ್ತು. ನಿಮ್ಮ ಮಗಳಿಗೆ 21 ವರ್ಷ ತುಂಬಿದಾಗ ನೀವು ಹಣವನ್ನು ಹಿಂಪಡೆಯಬಹುದು. ಇದರಲ್ಲಿ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತದೆ. ಈ ಯೋಜನೆಯಡಿ ಪಡೆದ ಬಡ್ಡಿಯು ತೆರಿಗೆ ಮುಕ್ತವಾಗಿದೆ.

•Loan
ನೀವು ಸಾಲವನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ತೆರಿಗೆಯನ್ನು ಉಳಿಸಬಹುದು. ಗೃಹ ಸಾಲ, ಶಿಕ್ಷಣ ಸಾಲದ ಮೂಲಕವೂ ತೆರಿಗೆ ಉಳಿಸಬಹುದು. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ (24B) ಅಡಿಯಲ್ಲಿ, ನೀವು ಗೃಹ ಸಾಲದ ಮೇಲೆ ರೂ. 2 ಲಕ್ಷದವರೆಗೆ ತೆರಿಗೆ ಉಳಿಸಬಹುದು. ಹಾಗೆಯೆ ಶಿಕ್ಷಣ ಸಾಲದ ಮೇಲೆ ನೀವು ಸೆಕ್ಷನ್ 80E ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

Join Nadunudi News WhatsApp Group