Toll Fee: ಇಂದಿನಿಂದ ದುಪ್ಪಟ್ಟು ಟೋಲ್ ಶುಲ್ಕ, ವಾಹನ ಇದ್ದವರಿಗೆ ಕೇಂದ್ರದಿಂದ ಬೇಸರದ ಸುದ್ದಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆ ಶುಲ್ಕವನ್ನು ಎಷ್ಟು ಹೆಚ್ಚಿಸಿದೆ.

Toll Fee Hike: ಸದ್ಯ ದೇಶದಲ್ಲಿ Traffic ಸಮಸ್ಯೆಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರವು ಟ್ರಾಫಿಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದರು ಕೂಡ Traffic ಸಮಸ್ಯೆ ಕಡಿಮೆ ಆಗುತ್ತಿಲ್ಲ ಎನ್ನಬಹುದು. ದೇಶದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ.

ಇನ್ನು ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನ ಕೂಡ Toll Plaza ವನ್ನು ಹಾದುಹೋಗಬೇಕಾಗುತ್ತದೆ. ಸದ್ಯ Toll ನಲ್ಲಿ ಪ್ರತಿ ನಿತ್ಯ ಹಣ ಕಟ್ಟುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಟೋಲ್ ನಲ್ಲಿ ಪ್ರತಿನಿತ್ಯ ಹಣ ಕಟ್ಟುವವರಿಗೆ ಇಂದಿನಿಂದ ಹೊಸ ನಿಯಮ ಜಾರಿಗೆ ಬರಲಿದೆ. ಕೇಂದ್ರದ ಈ ಹೊಸ ನಿಯಮವು ವಾಹನ ಸವಾರರಿಗೆ ಆರ್ಥಿಕವಾಗಿ ನಷ್ಟವನ್ನು ನೀಡಲಿದೆ.

Toll Fee Hike
Image Credit: Hindustantimes

ವಾಹನ ಇದ್ದವರಿಗೆ ಕೇಂದ್ರದಿಂದ ಬೇಸರದ ಸುದ್ದಿ
ಇನ್ನು ಹೊಸ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗುವುದು ಸಹಜ. ಸದ್ಯ ಜೂನ್ ತಿಂಗಳ ಆರಂಭದಲ್ಲಿ ಕೂಡ ಅನೇಕ ಹೊಸ ನಿಯಮಗಳು ಜಾರಿಗೆ ಬಂದಿದೆ. ಜೂನ್ ತಿಂಗಳ ಆರಂಭ ಇದೀಗ ಟೋಲ್ ಟ್ಯಾಕ್ಸ್ ಏರಿಕೆಗೆ ಕಾರಣವಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆ ಶುಲ್ಕವನ್ನು ಹೆಚ್ಚಿಸಲು ಮುಂದಾಗಿದೆ. ಈ ಮೂಲಕ ವಾಹನ ಸವಾರರಿಗೆ ಬೇಸರದ ಸುದ್ದಿಯನ್ನು ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಬಳಕೆ ಶುಲ್ಕವನ್ನು ಎಷ್ಟು ಹೆಚ್ಚಿಸಿದೆ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Toll Fee Hike New Update
Image Credit: Deccanherald

ಇಂದಿನಿಂದ ದುಪ್ಪಟ್ಟು ಟೋಲ್ ಶುಲ್ಕ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೋಮವಾರದಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಹೆದ್ದಾರಿ ಟೋಲ್ ಅನ್ನು 50% ಹೆಚ್ಚಿಸಿದೆ. ಪರಿಷ್ಕೃತ ದರ ಏಪ್ರಿಲ್ 1 ರಿಂದ ಜಾರಿಗೆ ಬರಬೇಕಿತ್ತು.ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೆದ್ದಾರಿ ಟೋಲ್ ಹೆಚ್ಚಳವನ್ನು ಮುಂದೂಡಿತ್ತು. ಸಗಟು ಹಣದುಬ್ಬರದ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ.

ಅದೇ ರೀತಿ ಈ ಆರ್ಥಿಕ ವರ್ಷದಿಂದ ಪರಿಷ್ಕೃತ ದರ ಹೆಚ್ಚಳವಾಗಬೇಕಿತ್ತು. ದೇಶದಲ್ಲಿ ಒಟ್ಟು 885 ಹೆದ್ದಾರಿ ಟೋಲ್ ಪ್ಲಾಜಾಗಳಿವೆ. 675 ಟೋಲ್‌ ಗಳು ಸರ್ಕಾರದ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿವೆ ಮತ್ತು 180 ಟೋಲ್‌ ಗಳು ಖಾಸಗಿ ಒಡೆತನದಲ್ಲಿದೆ. ಸದ್ಯ ಇಂದಿನಿಂದ ದೇಶದಲ್ಲಿ ಟೋಲ್ ಪ್ಲಾಜಾ ದರಗಳು ಹೆಚ್ಚಳವಾಗಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತ ಮಾಹಿತಿಯನ್ನು ನೀಡಿದೆ.

Join Nadunudi News WhatsApp Group

Toll Fee Hike In India
Image Credit: Samayam

Join Nadunudi News WhatsApp Group