Toll Plaza: ಪ್ರತಿನಿತ್ಯ ಟೋಲ್ ಕಟ್ಟುವವರಿಗೆ ಹೊಸ ರೂಲ್ಸ್, ಇನ್ನುಮುಂದೆ ಈ ಸೇವೆ ಇಲ್ಲ

ಟೋಲ್ ಪ್ಲಾಜಾ ಗಳು ಶೀಘ್ರದಲ್ಲೇ ಕೊನೆಗೊಳ್ಳಲಿದೆ

Toll Plaza Closed In India: ಸದ್ಯ ದೇಶದಲ್ಲಿ Traffic ಸಮಸ್ಯೆಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರವು ಟ್ರಾಫಿಕ್ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದರು ಕೂಡ Traffic ಸಮಸ್ಯೆ ಕಡಿಮೆ ಆಗುತ್ತಿಲ್ಲ ಎನ್ನಬಹುದು. ದೇಶದಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ವಿವಿಧ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇನ್ನು ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನ ಕೂಡ Toll Plaza ವನ್ನು ಹಾದುಹೋಗಬೇಕಾಗುತ್ತದೆ. ಸದ್ಯ Toll ನಲ್ಲಿ ಪ್ರತಿ ನಿತ್ಯ ಹಣ ಕಟ್ಟುವವರಿಗೆ ಹೊಸ ರೂಲ್ಸ್ ಜಾರಿಯಾಗಿದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

Toll Plaza Closed In India
Image Credit: Live Mint

ಟೋಲ್ ಪ್ಲಾಜಾ ಗಳು ಶೀಘ್ರದಲ್ಲೇ ಕೊನೆಗೊಳ್ಳಲಿದೆ
ಹೌದು ಸದ್ಯದಲ್ಲೇ ರಾಷ್ಟೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲಿನ ಟೋಲ್ ಪ್ಲಾಜಾ ಗಳು ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಹಾಗೆ ಉಪಗ್ರಹ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರುವ ಗುರಿಯನ್ನು ಹೊಂದಿದೆ.

ಹೌದು ಟೋಲ್ ಕಾರ್ಯಾಚರಣೆಗಳ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಟೋಲ್ ಸಂಗ್ರಹದ ಅನುಭವವನ್ನು ಒದಗಿಸಲು, NHAI ನ ಅಂಗಸಂಸ್ಥೆಯಾದ ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ (IHMCL) ಭಾರತದಲ್ಲಿ GNSS ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಅರ್ಹ ಕಂಪನಿಗಳಿಂದ ಇಒಐಗಳನ್ನು ಆಹ್ವಾನಿಸಿದೆ.

Toll Plazas Closed
Image Credit: India TV News

ಫಾಸ್ಟ್ಯಾಗ್ ನಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ
ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ವ್ಯವಸ್ಥೆಯೊಳಗೆ GNSS ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ETC) ವ್ಯವಸ್ಥೆಯನ್ನು ಜಾರಿಗೆ ತರಲು NHAI ಯೋಜಿಸುತ್ತಿದೆ. ಆರಂಭದಲ್ಲಿ RFID ಆಧಾರಿತ ETC ಮತ್ತು GNSS ಆಧಾರಿತ ETC ಎರಡೂ ಒಟ್ಟಿಗೆ ಕೆಲಸ ಮಾಡುವ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳುವ ಯೋಜನೆ ಇದೆ.

Join Nadunudi News WhatsApp Group

Toll Plaza Latest News
Image Credit: Live Mint

Join Nadunudi News WhatsApp Group