Toll Price: ವಾಹನ ಇದ್ದವರಿಗೆ ಜೂನ್ 3 ರಿಂದ ಹೊಸ ಟೋಲ್ ನಿಯಮ, ಇನ್ಮುಂದೆ ಕಟ್ಟಬೇಕು ಹೆಚ್ಚು ಶುಲ್ಕ

ವಾಹನ ಇದ್ದವರಿಗೆ ಜೂನ್ 5 ರಿಂದ ಹೊಸ ಟೋಲ್ ನಿಯಮ

Toll Tax Hike In India: ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಸಂಚರಿಸುವಾಗ ನೀವು Toll ಪಾವತಿಸುವುದು ಕಡ್ಡಾಯವಾಗಿರುತ್ತದೆ. ಟೋಲ್ ಪಾವತಿಸದೇ ನಿಮ್ಮ ವಾಹನ ಮುಂದಕ್ಕೆ ಹೋಗಲು ಸಾದ್ಯವಾಗುದಿಲ್ಲ. ಟೋಲ್ ಪಾವತಿಯ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿ ತಿಳಿದಿರಬಹುದು.

ಇನ್ನು ಟೋಲ್ ಪಾವತಿಗಾಗಿ ಸಾಕಷ್ಟು ಹೈಟೆಕ್ ವಿಧಾನವನ್ನು ಬಳಸಲಾಗುತ್ತಿದೆ. ಟೋಲ್ ಪಾವತಿದಾರರ ಸಮಯವನ್ನು ವ್ಯರ್ತ ಮಾಡಬಾರದೆನ್ನುವ ಉದ್ದೇಶದಿಂದ ಅನೇಕ ಟೋಲ್ ಪಾವತಿಯ ವಿಧಾನವನ್ನು ಕಂಡುಹಿಡಿಯಲಾಗಿದೆ. ಈಗಂತೂ ಕ್ಷಣಾರ್ಧದಲ್ಲಿ ಟೋಲ್ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Toll Tax Hike News
Image Credit: India

ವಾಹನ ಇದ್ದವರಿಗೆ ಜೂನ್ 3 ರಿಂದ ಹೊಸ ಟೋಲ್ ನಿಯಮ
ಸದ್ಯ ಲೋಕಸಭೆ ಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಲಿದೆ. ಹೌದು ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ತೆರಿಗೆಯನ್ನು ಹೆಚ್ಚಿಸಲು ಆದೇಶ ಹೊರಡಿಸಿದೆ. ಟೋಲ್ ದರವನ್ನು ಹೆಚ್ಚಿಸಲು ಕೇಂದ್ರ ಕಚೇರಿಯಿಂದ ಅನುಮತಿ ಪಡೆಯಲಾಗಿದೆ. ಟೋಲ್ ದರವನ್ನು ಹೆಚ್ಚಿಸುವ NHAI ಪ್ರಸ್ತಾಪವನ್ನು ರಸ್ತೆ ಮತ್ತು ಸಾರಿಗೆ ಸಚಿವಾಲಯ ಅನುಮೋದಿಸಿದೆ.

ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ದರಗಳನ್ನು ಹೆಚ್ಚಿಸಿದ್ದರೂ, 2024 ರ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಈ ವರ್ಷದ ಏಪ್ರಿಲ್ 1 ರಿಂದ ಟೋಲ್ ದರಗಳನ್ನು ಹೆಚ್ಚಿಸಲಾಗಿಲ್ಲ. ಇಂದು ರಾತ್ರಿ 12 ಗಂಟೆಯಿಂದ ದೇಶದಲ್ಲಿ ಟೋಲ್ ಪಾವತಿ ದುಬಾರಿಯಾಗಲಿದೆ, ಹೌದು ಜೂನ್ 3 ರ ಬೆಳಿಗ್ಗೆಯಿಂದ ಜನರು ಟೋಲ್ ದಾಟಲು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

Toll Tax Hike In India
Image Credit: Live Mint

Join Nadunudi News WhatsApp Group

Join Nadunudi News WhatsApp Group