Toll Tax: ವಾಹನ ಸವಾರರಿಗೆ ಬೇಸರದ ಸುದ್ದಿ, ಇಂದಿನಿಂದ ಟೋಲ್ ಶುಲ್ಕದಲ್ಲಿ ಇಷ್ಟು ಹೆಚ್ಚಳ

ಏಪ್ರಿಲ್ 1 ರಿಂದ ದೇಶದಾದ್ಯಂತ ಈ ಎಲ್ಲ ಟೋಲ್ ಶುಲ್ಕ ಹೆಚ್ಚಳ.

Toll Tax Hike: ಪ್ರಸ್ತುತ ಹೊಸ ಹಣಕಾಸು ವರ್ಷ ಆರಂಭವಾಗಿದ್ದು, ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಹಲವಾರು ಕೆಲಸಗಳಿಗೆ ಕೊನೆಯ ದಿನಾಂಕ ನಿಗದಿಯಾಗಿದ್ದು, ಹೊಸ ತಿಂಗಳು ಆರಂಭದ ಕಾರಣ ಹೊಸ ಹೊಸ ನಿಯಮಗಳು ಜಾರಿಯಾಗಿವೆ.

ಸದ್ಯ ದೇಶದಲ್ಲಿ ಈ ಹೊಸ ನಿಯಮ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ. ಏಕೆಂದರೆ ಏಪ್ರಿಲ್ 1 ರಿಂದ ದೇಶದಲ್ಲಿ ಟೋಲ್ ದರಗಳು ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ದೇಶದಾದ್ಯಂತ ಈ ಎಲ್ಲ ಟೋಲ್ ಶುಲ್ಕ ಹೆಚ್ಚಳವಾಗಲಿದೆ.

toll tax hike from April 1
Image Credit: The Hans India

ಏಪ್ರಿಲ್ 1 ರಿಂದ ದೇಶದಾದ್ಯಂತ ಈ ಎಲ್ಲ ಟೋಲ್ ಶುಲ್ಕ ಹೆಚ್ಚಳ
•ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರ ಮತ್ತೆ ಏರಿಕೆಯಾಗಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಟೋಲ್ ದರ ಏಪ್ರಿಲ್ 1 ರಿಂದ ಏರಿಕೆಯಾಗುತ್ತಿದ್ದು ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಜೂನ್ ನಲ್ಲಿ ಟೋಲ್ ದರವನ್ನು ಶೇ.22 ರಷ್ಟು ಹೆಚ್ಚಿಸಲಾಗಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008-ನಿಯಮ 5 ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಟೋಲ್ ದರವನ್ನು ಮತ್ತೆ ಹೆಚ್ಚಿಸಲಾಗಿದೆ.

•ಕಾರು ಏಕಮುಖ 170, ದ್ವಿಮುಖ ವಾಹನ 255, ಲಘು ವಾಣಿಜ್ಯ ವಾಹನ ಏಕಮುಖ 270, ದ್ವಿಮುಖ 415, ಟ್ರಕ್ ಬಸ್ ಏಕಮುಖ 580, ದ್ವಿಮುಖ 870, ಮೂರು ಆಕ್ಸಲ್ ವಾಣಿಜ್ಯ ವಾಹನ 635, ದ್ವಿಮುಖ 950, ದೊಡ್ಡ ಗಾತ್ರದ ವಾಹನ 1080 ರಿಂದ 1620, 4 ಅಥವಾ ಆರು ಆಕ್ಸಲ್ ವಾಹನ ಏಕಮುಖ 1110, ಡ್ಯುಪ್ಲೆಕ್ಸ್ 1660 ಆಗಿದೆ.

Toll Tax Hike News
Image Credit: India

•ಕರಾವಳಿಯ ಬಂಟ್ವಾಳ ಸಮೀಪದ ಬ್ರಹ್ಮಕೂಟ್ಲು, ಕೇರಳ-ಕರ್ನಾಟಕ ಗಡಿಭಾಗದ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ, ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಗಳಲ್ಲಿ ಪರಿಷ್ಕೃತ ಶುಲ್ಕ ಜಾರಿಯಾಗಲಿದೆ. ಬ್ರಹ್ಮರಕೂಟ್ಲು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರಕ್ಕೆ 5 ರೂ. ಪರಿಷ್ಕೃತ ದರ ರೂ.50ರಷ್ಟು ಏರಿಕೆ ಕಂಡಿದೆ. ತಲಪಾಡಿಯಲ್ಲಿ 80, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿಯಲ್ಲಿ 90 ಪರಿಷ್ಕೃತ ದರವಾಗಿದೆ.

Join Nadunudi News WhatsApp Group

•ಮುಂಬೈನ ರಾಜೀವ್ ಗಾಂಧಿ ಬಾಂದ್ರಾ ವರ್ಲಿ ಸೀ ಲಿಂಕ್‌ ನಲ್ಲಿ ಏಕಮುಖ ಪ್ರಯಾಣವು ಏಪ್ರಿಲ್ 1 ರಿಂದ ದುಬಾರಿಯಾಗಲಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಸೇತುವೆಗೆ ಟೋಲ್ ಹೆಚ್ಚಳವನ್ನು ಘೋಷಿಸಿದೆ, ಇದು 18 ರಷ್ಟು ದುಬಾರಿಯಾಗಿದೆ.

Toll Tax Hike
Image Credit: jagran

Join Nadunudi News WhatsApp Group