Toll Tax: ಹೊಸ ಟೋಲ್ ನಿಯಮ ಜಾರಿ, ಇನ್ಮುಂದೆ ಇಂತಹ ಜನರು ಎಲ್ಲಿಯೂ ಟೋಲ್ ಕಟ್ಟುವ ಅಗತ್ಯ ಇಲ್ಲ.

ಇನ್ಮುಂದೆ ಇಂತಹ ಜನರು ಎಲ್ಲಿಯೂ ಟೋಲ್ ಕಟ್ಟುವ ಅಗತ್ಯ ಇಲ್ಲ

Toll Tax New Rule: ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಸಂಚರಿಸುವಾಗ ನೀವು Toll ಪಾವತಿಸುವುದು ಕಡ್ಡಾಯವಾಗಿರುತ್ತದೆ. ಟೋಲ್ ಪಾವತಿಸದೇ ನಿಮ್ಮ ವಾಹನ ಮುಂದಕ್ಕೆ ಹೋಗಲು ಸಾದ್ಯವಾಗುದಿಲ್ಲ. ಟೋಲ್ ಪಾವತಿಯ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ಮಾಹಿತಿ ತಿಳಿದಿರಬಹುದು. ಇನ್ನು ಟೋಲ್ ಪಾವತಿಗಾಗಿ ಸಾಕಷ್ಟು ಹೈಟೆಕ್ ವಿಧಾನವನ್ನು ಬಳಸಲಾಗುತ್ತಿದೆ.

ಟೋಲ್ ಪಾವತಿದಾರರ ಸಮಯವನ್ನು ವ್ಯರ್ತ ಮಾಡಬಾರದೆನ್ನುವ ಉದ್ದೇಶದಿಂದ ಅನೇಕ ಟೋಲ್ ಪಾವತಿಯ ವಿಧಾನವನ್ನು ಕಂಡುಹಿಡಿಯಲಾಗಿದೆ. ಈಗಂತೂ ಕ್ಷಣಾರ್ಧದಲ್ಲಿ ಟೋಲ್ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇನ್ನು ಕೆಲವೊಂದು ಸಮಯದಲ್ಲಿ ಇಂತಹ ಜನರು ಟೋಲ್ ಪಾವತಿಸುವ ಅಗತ್ಯ ಇರುವುದಿಲ್ಲ. ಯಾರಿಗೆ ಟೋಲ್ ಪಾವತಿಯಿಂದ ವಿನಾಯಿತಿ ಲಭ್ಯವಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Toll Tax New Rule
Image Credit: Livemint

ಹೊಸ ಟೋಲ್ ನಿಯಮ ಜಾರಿ
ಟೋಲ್ ತೆರಿಗೆಯನ್ನು ರಸ್ತೆಗಳ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಈ ಶುಲ್ಕದ ಮೂಲಕ ಸರ್ಕಾರವು ಹೆದ್ದಾರಿಗಳು ಮತ್ತು ಎಕ್ಸ್‌ ಪ್ರೆಸ್‌ ವೇಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಯೋಜಿಸುತ್ತದೆ. ಇನ್ನು ರಸ್ತೆ ತೆರಿಗೆ ಮತ್ತು ಟೋಲ್ ತೆರಿಗೆ ಬೇರೆ ಬೇರೆ ತೆರಿಗೆಯಾಗಿದೆ. ನೀವು ಒಂದೇ ರಾಜ್ಯದಲ್ಲಿ ವಿವಿಧ ರಸ್ತೆಗಳನ್ನು ಬಳಸುವಾಗ RTO ನಿಂದ ರಸ್ತೆ ತೆರಿಗೆ ವಿಧಿಸಲಾಗುತ್ತದೆ. ಅಂತರ ರಾಜ್ಯ ಹೆದ್ದಾರಿಗಳನ್ನು ಬಳಸುವುದಕ್ಕೆ ಟೋಲ್ ತೆರಿಗೆ ವಿಧಿಸಲಾಗುತ್ತದೆ.

ತಂತ್ರಜ್ಞಾನವನ್ನು ಬಳಸಿಕೊಂಡು ಸುಲಭವಾಗಿ ಮತ್ತು ತ್ವರಿತವಾಗಿ ಟೋಲ್ ತೆರಿಗೆ ಪಾವತಿಸುವ ಸೌಲಭ್ಯವನ್ನು NHAI ಒದಗಿಸಿದೆ. ಇದರ ಹೆಸರು ಫಾಸ್ಟ್ಯಾಗ್, ಇದನ್ನು ವಾಹನದ ಗಾಜಿನ ಒಳಭಾಗದಲ್ಲಿ ಸ್ಥಾಪಿಸಲಾಗಿದೆ. ಇದರೊಂದಿಗೆ, ಟೋಲ್ ಮೊತ್ತವನ್ನು ವಾಹನ ಮಾಲೀಕರ ಖಾತೆಯಿಂದ ನೇರವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಅವರು ಕಾಯದೆ ಟೋಲ್ ದಾಟಲು ಅವಕಾಶ ನೀಡಲಾಗುತ್ತದೆ.

New Toll Plaza Rules
Image Credit: Navbharattimes

ಇನ್ಮುಂದೆ ಇಂತಹ ಜನರು ಎಲ್ಲಿಯೂ ಟೋಲ್ ಕಟ್ಟುವ ಅಗತ್ಯ ಇಲ್ಲ
ಭಾರತದ ರಾಷ್ಟ್ರಪತಿ

Join Nadunudi News WhatsApp Group

ಭಾರತದ ಉಪ ರಾಷ್ಟ್ರಪತಿ

ಭಾರತದ ಪ್ರಧಾನ ಮಂತ್ರಿ

ಒಂದು ರಾಜ್ಯದ ಗವರ್ನರ್

ಭಾರತದ ಮುಖ್ಯ ನ್ಯಾಯಮೂರ್ತಿ

ಲೋಕಸಭೆಯ ಸ್ಪೀಕರ್

ಕೇಂದ್ರ ಸಂಪುಟ ಸಚಿವರು

ಒಂದು ರಾಜ್ಯದ ಮುಖ್ಯಮಂತ್ರಿ

ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ಕೇಂದ್ರ ರಾಜ್ಯ ಸಚಿವರು

ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್

ಪೂರ್ಣ ಸಾಮಾನ್ಯ ಅಥವಾ ಸಮಾನ ಶ್ರೇಣಿಯ ಶ್ರೇಣಿಯನ್ನು ಹೊಂದಿರುವ ಸಿಬ್ಬಂದಿ ಮುಖ್ಯಸ್ಥ

ರಾಜ್ಯದ ವಿಧಾನ ಪರಿಷತ್ತಿನ ಅಧ್ಯಕ್ಷರು

ಒಂದು ರಾಜ್ಯದ ವಿಧಾನಸಭೆಯ ಸ್ಪೀಕರ್

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ಹೈಕೋರ್ಟ್ ನ್ಯಾಯಾಧೀಶರು

ಸಂಸತ್ತಿನ ಸದಸ್ಯ

ಸೇನಾ ಮುಖ್ಯಸ್ಥರ ಸೇನಾ ಕಮಾಂಡರ್ ಮತ್ತು ಇತರ ಸೇವೆಗಳಲ್ಲಿ ಸಮಾನ
ಸಂಬಂಧಪಟ್ಟ ರಾಜ್ಯದೊಳಗಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಕಾರ್ಯದರ್ಶಿ, ಭಾರತ ಸರ್ಕಾರ

ಕೌನ್ಸಿಲ್ ಆಫ್ ಸ್ಟೇಟ್ಸ್ ಕಾರ್ಯದರ್ಶಿ

ಕಾರ್ಯದರ್ಶಿ, ಲೋಕಸಭೆ

ರಾಜ್ಯ ಪ್ರವಾಸದಲ್ಲಿ ವಿದೇಶಿ ಗಣ್ಯರು

toll tax exemption
Image Credit: ABPlive

Join Nadunudi News WhatsApp Group