Tomato Price: ದೇಶದಲ್ಲಿ ಟೊಮೆಟೊ ಬೆಲೆ 120 ಕ್ಕೆ ತಲುಪಲು ಕಾರಣ ಏನು, ಯಾವಾಗ ಇಳಿಕೆಯಾಗುತ್ತೆ ಟೊಮೆಟೊ ದರ.

ದುಬಾರಿಯಾದ ಟೊಮೇಟೊ ದರ, ಟೊಮೊಟೊ ದರ ದಿಢೀರ್ ಏರಿಕೆ ಆಗಲು ಕಾರಣವೇನು?

Tomato Price Hike: ಇದೀಗ ಆಹಾರ ಪದಾರ್ಥಗಳು ಹಾಗು ತರಕಾರಿಗಳು ದುಬಾರಿಯಾಗುತ್ತಿದೆ. ಏಕಾಏಕಿ ತರಕಾರಿ ಬೆಲೆ ಗಗನಕ್ಕೇರಿದೆ. ಈಗಾಗಲೇ ಜನ ಸಾಮಾನ್ಯರು ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಈ ಸಮಯದಲ್ಲೇ ತರಕಾರಿಗಳ ಬೆಲೆ ಕೂಡ ಹೆಚ್ಚಾಗುತ್ತಿದೆ.

ಇನ್ನು ಪ್ರತಿ ನಿತ್ಯ ಅಡುಗೆಗೆ ಬಳಸಲಾಗುವ ಟೊಮೆಟೊ (Tomato) ಇದೀಗಾ ಬಾರಿ ದುಬಾರಿಯಾಗಿದೆ. ಟೊಮೊಟೊ ದರ ಏರಿಕೆಗೆ ಕಾರಣ ಏನು ಎನ್ನುವ ಕುರಿತು ಜನಸಾಮಾನ್ಯರು ಚಿಂತಿಸುತ್ತಿದ್ದಾರೆ.

What is the reason for sudden increase in tomato price?
Image Credit: Timesnownews

ದೇಶದಲ್ಲಿ ಟೊಮೆಟೊ ಬೆಲೆ 120 ಕ್ಕೆ ಏರಿಕೆ
ದೇಶದ ಹಲವು ಪ್ರದೇಶಗಳಲ್ಲಿ ಟೊಮೊಟೊ ದರ 100 ಕಿಂತ ಅಧಿಕವಾಗಿದೆ. ಪ್ರಸ್ತುತ ಟೊಮೊಟೊ ಗರಿಷ್ಟ ದರ 122 ರೂ. ತಲುಪಿದೆ. ಇನ್ನು ದೆಹಲಿಯಲ್ಲಿ ಕೆಜಿಗೆ ರೂ. 60 ,ಮುಂಬೈನಲ್ಲಿ ಕೆಜಿಗೆ ರೂ. 42,

ಕೋಲ್ಕತ್ತಾದಲ್ಲಿ ಕೆಜಿಗೆ ರೂ. 75, ಚೆನ್ನೈ ನಲ್ಲಿ ಕೆಜಿಗೆ ರೂ. 67, ಯುಪಿಯ ಗೋರಖ್ ಪುರ ಹಾಗೂ ಕರ್ನಾಟಕದ ಬಳ್ಳಾರಿಯಲ್ಲಿ ಟೊಮೊಟೊ ದರ ಕೆಜಿಗೆ 122 ರೂ. ತಲುಪಿದೆ. ಟೊಮೊಟೊ ದರ ಕೇಳಿ ಜನಸಾಮನ್ಯರು ಅಚ್ಚರಿ ಪಡುತ್ತಿದ್ದಾರೆ.

ಟೊಮೊಟೊ ದರ ದಿಢೀರ್ ಏರಿಕೆ ಆಗಲು ಕಾರಣವೇನು 
ಟೊಮೇಟೊ ಬೆಲೆ ಏರಿಕೆಗೆ ತಾತ್ಕಾಲಿಕ ಸಮಸ್ಯೆ ಎದುರಾಗಿದೆ. ಟೊಮೇಟೊ ದರ ತೀವ್ರ ಏರಿಕೆಗೆ ಮಳೆಯೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಟೊಮೇಟೊ ದರ ಹೆಚ್ಚುತ್ತಿದೆ. ಇನ್ನು ಮುಂಗಾರು ಆರಂಭದ ಕಾರಣ ಟೊಮೇಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ.

Join Nadunudi News WhatsApp Group

What is the reason for sudden increase in tomato price?
Image Credit: Editorji

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದಾಗಿ ಟೊಮೇಟೊ ಬೆಳೆ ಹಾನಿಯಾಗಿದೆ ಮತ್ತು ಬೇಡಿಕೆಗೆ ಹೋಲಿಸಿದರೆ ಅದರ ಪೂರೈಕೆಯು ಕಡಿಮೆಯಾಗಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022 -23 ರ ಬೆಳೆ ಋತುವಿನಲ್ಲಿ ಟೊಮೇಟೊ ಉತ್ಪಾದನೆಯು 20 .62 ಮಿಲಿಯನ್ ಟನ್ ಗಳು ಎಂದು ಅಂದಾಜಿಸಲಾಗಿದೆ. ಶೀಘ್ರವೇ ಟೊಮೊಟೊ ದರ ಇಳಿಕೆ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.

Join Nadunudi News WhatsApp Group