Maruti Electric: ಅಗ್ಗದ ಬೆಲೆಗೆ ಟಾಪ್ ಎಲೆಕ್ಟ್ರಿಕ್ ಕಾರ್ ಪರಿಚಯಿಸಿದ ಮಾರುತಿ, ಸಿಂಗಲ್ ಚಾರ್ಜ್ ನಲ್ಲಿ 550 Km ರೇಂಜ್

3 ಬೆಸ್ಟ್ ಎಲೆಕ್ಟ್ರಿಕ್ ಕಾರ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಹೊರಟಿರುವ ಮಾರುತಿ ಸುಜುಕಿ

Top 3 Best Maruti Electric Cars: ಭಾರತೀಯ ಆಟೋ ವಲಯದಲ್ಲಿ Maruti Suzuki ಕಂಪನಿ ಇನ್ನಿತರ ಕಾರ್ ತಯಾರಕ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚಿನ ಸ್ಥಾನದಲ್ಲಿದೆ. ಇನ್ನು ಇಂಧನ ಚಾಲಿತ ವಾಹನಗಳ ವಿಭಾಗದಲ್ಲಿ ಮಾರುತಿ ಸುಜುಕಿ ಮೇಲುಗೈ ಸಾಧಿಸಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಜೋರಿರುವ ಕಾರಣ ಸದ್ಯ ಕಂಪನಿಯು Electric Car ಗಳನ್ನೂ ಪರಿಚಯಿಸಲು ಇದೀಗ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ನೀವು ಎಲೆಕ್ಟ್ರಿಕ್ ವಿಭಾಗದಲ್ಲಿ ಮಾರುತಿ ಕಂಪನಿಯ ಕಾರ್ ಗಳನ್ನೂ ಕೂಡ ನೋಡಬಹುದಾಗಿದೆ. ಸದ್ಯ ಮುಂಬರುವ ವರ್ಷದಲ್ಲಿ ಮಾರುತಿ ಕಂಪನಿಯು ಭರ್ಜರಿಯಾಗಿ ಮೂರು ಬೆಸ್ಟ್ ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸಲಿದೆ. ಇದೀಗ ನಾವು ಈ ಲೇಖನದಲ್ಲಿ Maruti Electric Car ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Maruti EVX SUV Price
Image Credit: Autox

ಅಗ್ಗದ ಬೆಲೆಗೆ ಲಾಂಚ್ ಆಗಲಿದೆ ಮಾರುತಿ ಕಂಪನಿಯ 3 ಬೆಸ್ಟ್ ಎಲೆಕ್ಟ್ರಿಕ್ ಕಾರ್ಸ್
•Maruti EVX SUV
ಮಾರುತಿ ಸುಜುಕಿ eVX SUV 2024 ಜೂನ್ ರಿಂದ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಇದು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಿ ಎಂಟ್ರಿ ಕೊಡಲಿದೆ. ಇದು ಹ್ಯುಂಡೈ ಕ್ರೆಟಾ EV ಮತ್ತು ಟಾಟಾ ಕರ್ವ್ EV ಯಂತಹ SUV ಗಳೊಂದಿಗೆ ನೇರ ಪೈಪೋಟಿಗಿಳಿಯಲಿದೆ. ಮಾರುತಿ eVX SUV 8 kW ಮತ್ತು 60 kW ನ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡುವ ನಿರೀಕ್ಷೆಯಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 550 ಕಿ.ಮೀ. ಮೈಲೇಜ್ ನೀಡುತ್ತದೆ.

•Maruti Electric ಹ್ಯಾಚ್ ಬ್ಯಾಕ್
ಮಾರುತಿ ಸುಜುಕಿಯು ಬೆಸ್ಪೋಕ್ K-EV ಪ್ಲಾಟ್‌ ಫಾರ್ಮ್ ಅನ್ನು ಆಧರಿಸಿದ ಮಾದರಿಯೊಂದಿಗೆ ಪ್ರವೇಶ ಮಟ್ಟದ ಎಲೆಕ್ಟ್ರಿಕ್ ಹ್ಯಾಚ್‌ ಬ್ಯಾಕ್ ಅನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. WX ಪರಿಕಲ್ಪನೆಯ ಹ್ಯಾಚ್‌ಬ್ಯಾಕ್ ಅನ್ನು ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾಯಿತು. ಇದು ಟಾಟಾ ಟಿಯಾಗೊ EV ಯಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಬ್ಯಾಟರಿ ಪ್ಯಾಕ್ ಸೇರಿದಂತೆ K-EV ಪ್ಲಾಟ್‌ಫಾರ್ಮ್ ಅನ್ನು ಸ್ಥಳೀಕರಿಸುವ ಮೂಲಕ, ಮಾರುತಿ ಅದನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.

Maruti Electric MPV
Image Credit: Hindustantimes

•Maruti Electric MPV
ಮಾರುತಿ ಸುಜುಕಿ eVX ಲಾಕ್ ಆದ ಬಳಿಕ, ಮಾರುತಿ ಸುಜುಕಿಯು ಸೆಪ್ಟೆಂಬರ್ 2026 ರಲ್ಲಿ ಹೊಸ ಎಲೆಕ್ಟ್ರಿಕ್ MPV ಅನ್ನು ಪರಿಚಯಿಸಲು ಸಿದ್ಧವಾಗಿದೆ. ಈ 3 ಸಾಲಿನ MPV ಬಗ್ಗೆ ವಿವರಗಳು ಸ್ವಲ್ಪ ಕಡಿಮೆ ಲಭ್ಯವಾಗಿದೆ. ಮೂಲಗಳು ಹೇಳುವಂತೆ ಮಾರುತಿಯು ತನ್ನ ನೀತಿಗೆ ಅನುಗುಣವಾಗಿ ಸ್ಪರ್ಧಾತ್ಮಕ ಬೆಲೆಯನ್ನು ನಿರ್ವಹಿಸಲು ಬದ್ಧವಾಗಿದೆ ಮೌಲ್ಯದ ಚಾಲಿತ ವಾಹನಗಳನ್ನು ನೀಡುತ್ತಿದೆ. ಸದ್ಯದಲ್ಲೇ ಈ MPV ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ.

Join Nadunudi News WhatsApp Group

Join Nadunudi News WhatsApp Group