Top Mileage Cars: ಕಡಿಮೆ ಬೆಲೆ ಗರಿಷ್ಟ ಮೈಲೇಜ್, ದೇಶದಲ್ಲಿ ಹೆಚ್ಚು ಸೇಲ್ ಆಗುತ್ತಿದೆ ಈ 3 MUV 7 ಸೀಟರ್ ಕಾರುಗಳು.

ದೇಶದಲ್ಲಿ ಹೆಚ್ಚು ಸೇಲ್ ಆಗುತ್ತಿದೆ ಈ 3 MUV 7 ಸೀಟರ್ ಕಾರುಗಳು.

Top 3 best Mileage Cars In India: ಸಾಮಾನ್ಯವಾಗಿ ಎಲ್ಲಾರು ಹೊಸ ಕಾರ್ ಖರೀದಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಈಗಂತೂ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಲು ವಿವಿಧ ಮಾದರಿಯ ಕಾರ್ ಗಳು ಪರಿಚಯವಾಗುತ್ತಿದೆ. ಇನ್ನು ಗ್ರಾಹಕರು ಕಾರ್ ಖರೀದಿಸುವಾಗ ಮೊದಲು ಮೈಲೇಜ್ ಮತ್ತು ಬೆಲೆಯ ಬಗ್ಗೆ ಗಮನ ಕೊಡುತ್ತಾರೆ. ತಮ್ಮ ಬಜೆಟ್ ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಖರೀದಿಸಲು ಜನರು ಇಷ್ಟಪಡುತ್ತಾರೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ MPV ಗಳಿವೆ.

ಒಂದಕ್ಕಿಂತ ಒಂದು ವಿಶೇಷ ವಿನ್ಯಾಸದೊಂದಿಗೆ ವಿಭಿನ್ನ ಫೀಚರ್ ಗಳ ಜೊತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ. ಗ್ರಾಹಕರು ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ದೊಡ್ಡ ಕಾರ್ ಗಳನ್ನೇ ಹುಡುಕುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ 7 ಆಸನಗಳಿರುವ ಸಾಕಷ್ಟು MPV ಗಳು ಗ್ರಾಹಕರ ಆಯ್ಕೆಗೆ ಲಭ್ಯವಿದೆ ಎನ್ನಬಹುದು. ಇದೀಗ ಗ್ರಾಹಕರ ಕಾರ್ ಖರೀದಿಗೆ ಸಹಾಯವಾಗಲು ಉತ್ತಮ ಮೈಲೇಜ್ ಜೊತೆಗೆ ಕಡಿಮೆ ಬೆಲೆಗೆ ಸಿಗುವ MPV ಗಳ ಬಗ್ಗೆ ಮಾಹಿತಿ ಇಲ್ಲಿದೆ.

Mahindra Bolero 7 seater
Image Credit: Autocarindia

ಕಡಿಮೆ ಬೆಲೆಗೆ ಸಿಗಲಿವೆ ಈ 7 ಆಸನಗಳ MPV
*Mahindra Balero
ಇದೀಗ ಮಾರುಕಟ್ಟೆಯಲ್ಲಿ ಶಕ್ತಿಶಾಲಿ SUV 1493cc ಡೀಸೆಲ್ ಎಂಜಿನ್‌ ನ ಆಯ್ಕೆಯಲ್ಲಿ Mahindra Bolero Neo ಲಭ್ಯವಾಗಲಿದೆ. Mahindra Bolero Neo ವಿಶೇಷವಾಗಿ 7 ಆಸನಗಳ ಉತ್ತಮ SUV ಆಗಿದೆ. ಇದೂ ಪ್ರತಿ ಲೀಟರ್ ಗೆ 17 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ 9,47,799 ರಿಂದ ಲಭ್ಯವಾಗಲಿದೆ.

*Maruti Suzuki Ertiga
ಮಾರುತಿ ಕಂಪನಿಯು 1462cc K15B ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ Maruti Suzuki Ertiga SUC ಪರಿಚಯಿಸಿದ್ದು, ಇದು 6000rpm ನಲ್ಲಿ 77 kW ಗರಿಷ್ಠ ಶಕ್ತಿಯನ್ನು ಮತ್ತು 4400rpm ನಲ್ಲಿ 134Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರ್ ಪ್ರತಿ ಲೀಟರ್ ಗೆ 26 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ 8,49,000 ರಿಂದ 12,93,000 ಬೆಲೆಯಲ್ಲಿ ಲಭ್ಯವಾಗಲಿದೆ.

Renault TRIBER 7 Seater SUV
Image Credit: Navbharattimes

*Renault TRIBER 7 Seater SUV
ಉತ್ತಮ ಮೈಲೇಜ್ ನೀಡುವ 7 ಆಸನಗಳ ಕಾರ್ ನ ಪಟ್ಟಿಯಲ್ಲಿ Renault Triber ಕೂಡ ಒಂದಾಗಿದೆ. ಕಂಪನಿಯು ರೆನಾಲ್ಟ್ ಟ್ರೈಬರ್‌ನಲ್ಲಿ 999cc 3 ಸಿಲಿಂಡರ್ ಎಂಜಿನ್ ಅನ್ನು ನೀಡಿದ್ದು, ಇದು 6250 Rpm ನಲ್ಲಿ 71 Hp ಮತ್ತು 3500 Rpm ನಲ್ಲಿ 96 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೂಲ ಮಾದರಿಯ ಟ್ರೈಬರ್ RXE ನ ಆರಂಭಿಕ ಬೆಲೆ 6,33,500 ಮತ್ತು ಉನ್ನತ ಮಾದರಿ RXZ EASY-R DUALTONE ಬೆಲೆ 8,97,500 ರೂ. ಆಗಿದೆ. ಇನ್ನು Renault Triber ಪ್ರತಿ ಲೀಟರ್ ಗೆ 19 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group