Best Scooter: 56 Km ಮೈಲೇಜ್ ಕೊಡುವ ಈ ಸ್ಕೂಟರ್ ದೇಶದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ, ಬೆಲೆ ಕೂಡ ಕಡಿಮೆ

ಮಾರುಕಟ್ಟೆಯಲ್ಲಿ 85000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಸ್ಕೂಟರ್ ಗಳ ಬಗ್ಗೆ ಮಾಹಿತಿ

Top 3 Best Scooter 2024: ಮಾರುಕಟ್ಟೆಯಲ್ಲಿ ಸ್ಕೂಟರ್ ಗಳಿಗೆ ಕೂಡ ಹೆಚ್ಚಿನ ಬೇಡಿಕೆ ಇದೆ. ಯುವತಿಯರ ಜೊತೆಗೆ ಈಗ ಯುವಕರು ಕೂಡ ಸ್ಕೂಟರ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಸ್ಕೂಟರ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಇನ್ನು ಸ್ಕೂಟರ್ ಖರೀದಿಸುವಾಗ ಜನರು ಹೆಚ್ಚಾಗಿ ಬೆಜೆಟ್ ಬಗ್ಗೆ ಗಮನ ಹರಿಸುತ್ತಾರೆ. ತಮ್ಮ ಬಜೆಟ್ ಗೆ ಸರಿಹೊಂದುವಂತಹ ಸ್ಕೂಟರ್ ಯಾವುದಿದೆ ಎನ್ನುವ ಬಗ್ಗೆ ಹುಡುಕುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 85000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಸ್ಕೂಟರ್ ಗಳ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ. ನಿಮ್ಮ ಬಜೆಟ್ ಬೆಲೆಗೆ ಲಭ್ಯವಾಗುವ ಸ್ಕೂಟರ್ ಗಳ ವಿವರ ಈ ಲೇಖನದಲ್ಲಿದೆ.

Honda Activa 125 Feature
Image Credit: Hindustan Times

Honda Activa 125
ಮಾರುಕಟ್ಟೆಯಲ್ಲಿ Honda Activa 125 ಸ್ಕೂಟರ್ ಸರಿಸುಮಾರು ರೂ. 79,806 ರೂ. ಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ನಲ್ಲಿ 124cc ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ ಸ್ಪ್ರಾಟಿ ಲೀಟರ್ ಗೆ 60 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ರೆಬೆಲ್ ರೆಡ್ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.

ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ರೂಪಾಂತರಗಳನ್ನು ಅವಲಂಬಿಸಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದು LED ಹೆಡ್ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ರೆಬೆಲ್ ರೆಡ್ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲಾಕ್ ಸೇರಿದಂತೆ ಹಲವು ಆಕರ್ಷಕ ಬಣ್ಣಗಳಲ್ಲಿ ಇದು ಲಭ್ಯವಿದೆ.

TVS Jupiter Price In India
Image Credit: Bikewale

TVS Jupiter
ದೇಶೀಯ ಮಾರುಕಟ್ಟೆಯಲ್ಲಿ TVS Jupiter ಎಕ್ಸ್ ಶೋ ರೂಂ ಬೆಲೆ ರೂ. 73,340 ರಿಂದ 89,748 ಕ್ಕೆ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ 109.7 cc ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 7.88 PS ಪವರ್ ಮತ್ತು 8.8 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಸ್ಕೂಟರ್ ಪ್ರತಿ ಲೀಟರ್ ಗೆ 50 km ವರೆಗೆ ಮೈಲೇಜ್ ನೀಡುತ್ತದೆ.

Join Nadunudi News WhatsApp Group

ಈ ಟಿವಿಎಸ್ ಜೂಪಿಟರ್ ಸ್ಕೂಟರ್ ಎಲ್ ಇಡಿ ಹೆಡ್ ಲೈಟ್, ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ರೂಪಾಂತರಗಳನ್ನು ಅವಲಂಬಿಸಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಸಹ ಒಳಗೊಂಡಿದೆ.

Hero Destini Prime
Image Credit: Apanabihar

Hero Destini Prime
ಹೀರೋ ಡೆಸ್ಟಿನಿ ಪ್ರೈಮ್ ಸ್ಕೂಟರ್ ರೂ. 71,499 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 124.6 ಸಿಸಿ ಎಂಜಿನ್ ಅನ್ನು ಹೊಂದಿದ್ದು ಅದು 9.09 ಪಿಎಸ್ ಗರಿಷ್ಠ ಶಕ್ತಿ ಮತ್ತು 10.36 ಎನ್ಎಂ ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಹೀರೋ ಡೆಸ್ಟಿನಿ ಪ್ರೈಮ್ ಸ್ಕೂಟರ್ ಪ್ರತಿ ಲೀಟರ್ ಗೆ 56 km ಮೈಲೇಜ್ ನೀಡುತ್ತದೆ ಮತ್ತು ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

Join Nadunudi News WhatsApp Group