Best Scooter: ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್, ದೇಶದಲ್ಲಿ ದಾಖಲೆಯ ಸೇಲ್ ಕಾಣುತ್ತಿದೆ ಈ ಸ್ಕೂಟರ್

ಕಡಿಮೆ ಬೆಲೆ, ಭರ್ಜರಿ ಮೈಲೇಜ್ ನೀಡುತ್ತವೆ ಈ 3 ಬೆಸ್ಟ್ ಸ್ಕೂಟರ್

Top 3 Best Scooter In India: ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹತ್ತು ಹಲವು ಎಂಡ್ರಿಯ ಬೈಕ್ ಗಳನ್ನೂ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಬೈಕ್ ಗಳಿಗೆ ಎಷ್ಟು ಬೇಡಿಕೆ ಇದೆಯೋ ಅದೇ ರೀತಿ ಸ್ಕೂಟರ್ ಗಳು ಕೂಡ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಹೆಚ್ಚಿನ ಮೈಲೇಜ್ ನೀಡುವ ಸ್ಕೂಟರ್ ಅನ್ನು ಖರೀದಿಸಲು ಜನರು ಬಯಸುತ್ತಾರೆ. ಇನ್ನು ದೇಶದಲ್ಲಿ ಈ ಮೂರು ಬ್ರಾಂಡ್ ನ ಸ್ಕೂಟರ್ ಗಳು ಹೆಚ್ಚಿನ ಮೈಲೇಜ್ ನೀಡುವುದರಲ್ಲಿ ಹೆಸರುವಾಸಿಯಾಗಿದೆ. ನೀವು ಈ ಟಾಪ್ ಬೆಸ್ಟ್ ಮಾಡೆಲ್ ಗಳನ್ನು ದಿನನಿತ್ಯದ ಪ್ರಯಾಣಕ್ಕೆ ಖರೀದಿಸಬಹುದಾಗಿದೆ.

TVS Jupiter 125 Scooter
Image Credit: Autocarindia

ಕಡಿಮೆ ಬೆಲೆ, ಭರ್ಜರಿ ಮೈಲೇಜ್ ನೀಡುತ್ತವೆ ಈ 3 ಬೆಸ್ಟ್ ಸ್ಕೂಟರ್
•TVS Jupiter 125 Scooter
ಟಿವಿಎಸ್ ಜೂಪಿಟರ್ 125 ಸ್ಕೂಟರ್ ಖರೀದಿಗೆ ಉತ್ತಮ ಆಯ್ಕೆ ಎನ್ನಬಹುದು. ಇದರ ಎಕ್ಸ್ ಶೋರೂಂ ಬೆಲೆ 89,155 ರಿಂದ 99,805 ರೂ. ಆಗಿದೆ. ಇದು ಡ್ರಮ್, ಡಿಸ್ಕ್, ಸ್ಮಾರ್ಟ್ ಕನೆಕ್ಟ್ ರೂಪಾಂತರ ಮತ್ತು ಪ್ರಿಸ್ಟಿನ್ ವೈಟ್, ಇಂಡ್ ಬ್ಲೂ, ಡಾನ್ ಆರೆಂಜ್ ಸೇರಿದಂತೆ ವಿವಿಧ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಜುಪಿಟರ್ 125 ಸ್ಕೂಟರ್ 124.8 cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಟ್ಟಿದ್ದು, ನಗರದಲ್ಲಿ 57.27 kmpl ಮತ್ತು ಹೆದ್ದಾರಿಯಲ್ಲಿ 52.91 kmpl ಮೈಲೇಜ್ ನೀಡುತ್ತದೆ.

•Suzuki Access 125 Scooter
Suzuki Access 125 Scooter ಗ್ರಾಹಕರಿಗೆ ರೂ.83,482 ರಿಂದ ರೂ.94,082 ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ. ಇದು 124 cc ಸಿಲಿಂಡರ್ ಪೆಟ್ರೋಲ್ ಎಂಜಿನ್‌ ನಿಂದ ನಿಯಂತ್ರಿಸಲ್ಪಟ್ಟಿದ್ದು, ಪ್ರತಿ ಲೀಟರ್ ಗೆ 45 km ಮೈಲೇಜ್ ನೀಡುತ್ತದೆ. ಈ ಸುಜುಕಿ ಆಕ್ಸೆಸ್ 125 ಸ್ಕೂಟರ್ ನಲ್ಲಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ ಫೋನ್‌ ಗೆ ಸಂಪರ್ಕಿಸಬಹುದಾದ ಇನ್‌ ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ರೂಪಾಂತರಗಳನ್ನು ಅವಲಂಬಿಸಿ ಮುಂಭಾಗದ ಡಿಸ್ಕ್ ಅಥವಾ ಡ್ರಮ್, ಹಿಂಭಾಗದ ಡ್ರಮ್ ಬ್ರೇಕ್ ಆಯ್ಕೆ ಇದೆ. ಈ ಸ್ಕೂಟರ್ ನ ತೂಕ ಸುಮಾರು 103 ಕೆಜಿ.

Join Nadunudi News WhatsApp Group

Suzuki Access 125 Scooter
Image Credit: Original Source

•Hero Pleasure Plus Scooter
Hero Pleasure Plus Scooter ಮಾರುಕಟ್ಟೆಯಲ್ಲಿ 71,788 ರಿಂದ 83,918 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು LX, VX ಸೇರಿದಂತೆ 3 ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಪರ್ಲ್ ಸಿಲ್ವರ್ ವೈಟ್, ಮ್ಯಾಟ್ ವರ್ನಿಯರ್ ಗ್ರೇ, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ ರೆಡ್, ಮ್ಯಾಟ್ ಮೆಡ್ ರೆಡ್ ಸೇರಿದಂತೆ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ಪ್ಲೆಶರ್ ಪ್ಲಸ್ ಸ್ಕೂಟರ್ 110.9 ಸಿಸಿ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8.1 ಪಿಎಸ್ ಗರಿಷ್ಠ ಶಕ್ತಿ ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 50 kmpl ಮೈಲೇಜ್ ನೀಡುತ್ತದೆ ಮತ್ತು 4.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

Hero Pleasure Plus Scooter
Image Credit: Carandbike

Join Nadunudi News WhatsApp Group