Best Ev Cars: ದಿನಪೂರ್ತಿ ಪ್ರಯಾಣ ಮಾಡಿದರು ಚಾರ್ಜ್ ಖಾಲಿಯಾಗಲ್ಲ, ಈ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಬೇಡಿಕೆ.

ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚು ಮೈಲೇಜ್ ನೀಡುವ Electric ಕಾರ್ ಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ

Top 4 Best Mileage Electric EV: ಪ್ರಸ್ತುತ ಮಾರುಕಟ್ಟೆಯಲ್ಲಿ Petrol, Diesel ದರ ಹೆಚ್ಚಿನ ಏರಿಕೆ ಕಾಣುತ್ತಿದೆ. Petrol , Diesel ಬೆಲೆಯ ಏರಿಕೆ ಒಂದು ರೀತಿಯಲ್ಲಿ ಇಂಧನ ಚಾಲಿತ ವಾಹನಗಳ ಮೇಲಿನ ಬೇಡಿಕೆ ಕಡಿಮೆ ಮಾಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ Electric ಮಾದರಿ ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿದೆ. ಈಗಾಗಲೇ ವಿವಿಧ Electric ರೂಪಾಂತರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಡೀಸೆಲ್, ಪೆಟ್ರೋಲ್ ಬೆಲೆಯ ಏರಿಕೆಯಿಂದ ಜನರು ಕಂಗಾಲಾಗಿದ್ದು, ಈ ಕಾರಣಕ್ಕೆ ವಿವಿಧ ಕಂಪನಿಗಳು ಜನರ ಖರ್ಚನ್ನು ಉಳಿಸಲು ವಿವಿಧ ಮಾದರಿಯ Electric ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚು ಮೈಲೇಜ್ ನೀಡುವ Electric ಕಾರ್ ಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Mahindra XUV.E8 gives a mileage of 450 kilometers on a single charge.
Image Credit: Cardekho

ದಿನಪೂರ್ತಿ ಪ್ರಯಾಣ ಮಾಡಿದರು ಚಾರ್ಜ್ ಖಾಲಿಯಾಗದ Electric ಮಾದರಿಗಳ ವಿವರ
*Mahindra XUV.E8
ಮಾರುಕಟ್ಟೆಯಲ್ಲಿ Mahindra XUV.E8 EV ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಕಾರು ಹೊಸ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಾಗೆಯೆ ಒಂದೇ ಚಾರ್ಜ್ ನಲ್ಲಿಬರೋಬ್ಬರೀ 450 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Tata Punch EV will give a mileage of 300 km on a single charge.
Image Credit: Smartprix

*Tata Punch EV
Tata 2023 ಅಂತ್ಯದಲ್ಲಿ Tata Punch EV ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಪಂಚ್ EV ಟಾಟಾದ ಜಿಪ್ಟ್ರಾನ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ಲಿಕ್ವಿಡ್-ಕೂಲ್ಡ್ ಬ್ಯಾಟರಿ ಮತ್ತು ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಅನ್ನು ಹೊಂದಿದೆ. ಇನ್ನು 19.2kWh ಮತ್ತು 24kWh ಎರಡು ಬ್ಯಾಟರಿ ಆಯ್ಕೆಗಳೊಂದಿಗೆ 300 ಕಿಮೀ ಮೈಲೇಜ್ ನೀಡಲಿದೆ.

Maruti Suzuki EVX has a mileage of around 500 km. Mileage will be given.
Image Credit: News18

*Maruti Suzuki EVX
ಮಾರುಕಟ್ಟೆಯಲ್ಲಿ ಇದೀಗ Maruti ಕಂಪನಿ Maruti Suzuki EVX ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇನ್ನು 60kWh ಬ್ಯಾಟರಿ ಪ್ಯಾಕ್ ಹೊಂದಿರುವ Maruti Suzuki EVX ಸುಮಾರು 500 ಕಿ.ಮೀ. ಮೈಲೇಜ್ ನೀಡಲಿದೆ.

Join Nadunudi News WhatsApp Group

Hyundai Creta EV gives a mileage of 452 kilometers on a single charge.
Image Credit: Gomechanic

*Hyundai Creta EV
Hyundai ತನ್ನ ಮಾದರಿಯಲ್ಲಿ ಸದ್ಯದಲ್ಲೇ Creta EV ಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. Hyundai Creta EV 39.2kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 452 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group