Best EV: ಎಲೆಕ್ಟ್ರಿಕ್ ಕಾರ್ಸ್ ಖರೀದಿಸುವ ಯೋಜನೆ ಉಂಟಾ…? ಇಲ್ಲಿದೆ ಭರ್ಜರಿ ಮೈಲೇಜ್ ಕೋಡಿವ ಟಾಟಾ ಕರುಗಳ ಪಟ್ಟಿ

ಎಲೆಕ್ಟ್ರಿಕ್ ಕಾರ್ ಖರೀದಿಸುವವರಿಗೆ ಇಲ್ಲಿದೆ ನೋಡಿ ಟಾಪ್ 6 ಟಾಟಾ ಎಲೆಕ್ಟ್ರಿಕ್ ಕಾರುಗಳು

Top 6 Best EV: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಪಾರುಪತ್ಯ ಸಾಧಿಸಿದೆ. ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯ್ನ್ನು ಖರೀದಿಸಲು ಇಷ್ಟಪಡುತ್ತಾರೆ. ಗ್ರಾಹಕರು ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ರೂಪಾಂತರದ ಖರಿದಿಗೆ ಮುಂದಾಗುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವಂತಹ ಟಾಪ್ 6 ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ. ನೀವು ಹೊಸ EV ಮಾದರಿಯನ್ನು ಖರೀದಿಸಲು ಬಯಸಿದರೆ ನಿಮಗೆ ಈ ಲೇಖನದಲ್ಲಿ 6 ಉತ್ತಮ ಎಲೆಕ್ಟ್ರಿಕ್ ಕಾರ್ ಗಳ ಬಗ್ಗೆ ಮಾಹಿತಿ ಇದೆ.

Tata Tiago Price In India
Image Credit: Car Wale

Tata Tiago
ಕಂಪನಿಯು ನಾಲ್ಕು ರೂಪಾಂತರಗಳು ಮತ್ತು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಟಾಟಾ ಟಿಯಾಗೋವನ್ನು ಬಿಡುಗಡೆ ಮಾಡಿವೆ. ಈ ಎಲೆಕ್ಟ್ರಿಕ್ ಕಾರ್ ನಲ್ಲಿ 19.2 kWh ಮತ್ತು 24 kWh ಬ್ಯಾಟರಿ ಪ್ಯಾಕ್ ಹೊಂದಿರುವ ಎರಡು ಬ್ಯಾಟರಿಯನ್ನು ಅಳವಡಿಸಲ್ಗಿದೆ. ಒಂದು ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿದರೆ 315 ಕಿಲೋ ಮೀಟರ್ ಚಲಿಸಿದರೆ ಇನ್ನೊಂದು ಬ್ಯಾಟರಿ ಸಂಪೂರ್ಣ ಚಾರ್ಜ್ ಗೆ 250 ಕಿಲೋ ಮೀಟರ್ ಚಲಿಸಲಿದೆ. ಈ ಕಾರ್ ನ ಆರಂಭಿಕ ಬೆಲೆ 9 .05 ಲಕ್ಷದಿಂದ 12 .59 ಲಕ್ಷದ ವರೆಗೆ ಇರುತ್ತದೆ.

Tata Nexon EV 2024
Image Credit: Team BHP

Tata Nexon
Tata Nexon ಪ್ರೈಮ್ ಮತ್ತು ಮ್ಯಾಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನೆಕ್ಸಾನ್ ಪ್ರೈಮ್ ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ. ಮ್ಯಾಕ್ಸ್ ಮಾದರಿಯು 453 kmph ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ನೆಕ್ಸಾನ್ ಪ್ರೈಮ್ ಎಕ್ಸ್ ಶೋ ರೂಂ ಬೆಲೆ 15.48 ಲಕ್ಷ ಮತ್ತು 18.31 ಲಕ್ಷ ರೂ. Nexon Max ಬೆಲೆ 17.57 ಲಕ್ಷ ಮತ್ತು 20.76 ಲಕ್ಷ ರೂ. ಆಗಿದೆ.

Tata Tigor Car Mileage
Image Credit: Inkhabar

Tata Tigor
ಟಾಟಾ ಕಂಪನಿಯ ಟಾಟಾ ಟಿಗೊರ್ ಭಾರತದ ಟಾಪ್ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. Tigor ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿ.ಮೀ. ಮೈಲೇಜ್ ನೀಡುತ್ತದೆ. ಟಾಟಾ ಟಿಗೋರ್ ಬೆಲೆ 13.24 ಲಕ್ಷದಿಂದ 14.55 ಲಕ್ಷ ರೂ. ಆಗಿದೆ.

Mahindra XUV400 Price In India
Image Credit: Team BHP

Mahindra XUV400
ಮಹೀಂದ್ರಾ XUV400 ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. XUV400 ಮಾದರಿಯು XUV300 ಗಿಂತ ಉದ್ದವಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 456 ಕಿ.ಮೀ ವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರಿನ ಬೆಲೆ 17.03 ಲಕ್ಷದಿಂದ 20.21 ಲಕ್ಷ ರೂಪಾಯಿಗಳಷ್ಟಿದೆ.

Join Nadunudi News WhatsApp Group

Citroen eC3 Car Price And Mileage
Image Credit: Autocarindia

Citroen eC3
Citroen EC3 ಎಲೆಕ್ಟ್ರಿಕ್ ಕಾರು 2023 ರ ಆರಂಭದಲ್ಲಿ ಮಾರುಕಟ್ಟೆಗೆ ಬರಲಿದೆ. ಇದು 29.2kWh ಬ್ಯಾಟರಿಯನ್ನು ಹೊಂದಿದೆ ಮತ್ತು ಒಮ್ಮೆ ಚಾರ್ಜ್ ಮಾಡಿದರೆ 320 ಕಿ.ಮೀ. ಮೈಲೇಜ್ಸಿ ನೀಡುತ್ತದೆ. Citroen eC3 ಕಾರಿನ ಬೆಲೆ 12.20 ಲಕ್ಷದಿಂದ 13.17 ಲಕ್ಷ ರೂ. ಆಗಿದೆ.

Kia EV6 Price And Feature
Image Credit: Tomkadleckia

Kia EV6
ಭಾರತೀಯ ಆಟೋಮೊಬೈಲ್ ವಲಯದಲ್ಲಿ ಕಿಯಾ ತನ್ನ EV6 ಅನ್ನು ಬಿಡುಗಡೆ ಮಾಡಿದೆ. Kia EV6 ದೇಶದಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳಲ್ಲಿ ಒಂದಾಗಿದೆ. ಈ ಕಾರಿನ ಬೆಲೆ 65 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಪ್ರತಿ ಚಾರ್ಜ್ ಗೆ 528 ಕಿ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group