2024 Smartphone: 2024 ರಲ್ಲಿ ಬಿಡುಗಡೆಯಾಗಲಿದೆ ಈ ಟಾಪ್ ಬೆಸ್ಟ್ 4 ಸ್ಮಾರ್ಟ್ ಫೋನ್.

2024 ರಲ್ಲಿ ಬಿಡುಗಡೆಯಾಗಲಿದೆ ಈ 4 ಬೆಸ್ಟ್ ಸ್ಮಾರ್ಟ್ ಫೋನ್ ಗಳು

Top Best Smartphone Release In 2024: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ತಿಂಗಳಿಗೆ ಒಂದಾದರು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಲಾಂಚ್ ಆಗುತ್ತಿದೆ. ಸದ್ಯ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷವನ್ನು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಮೂಲಕ ಸ್ವಾಗತಿಸೋಣ ಎನ್ನುವ ಯೋಜನೆ ಸಾಕಷ್ಟು ಜನರಲ್ಲಿ ಇರಬಹುದು.

ಇನ್ನು ಮಾರುಕಟ್ಟೆಯಲ್ಲಿ 2024 ರಲ್ಲಿ ಜನಪ್ರಿಯ ಕಂಪನಿಗಳ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ವಿಭಿನ್ನ ಫೀಚರ್ ಗಳೊಂದಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುವಂತಹ ಬೆಸ್ಟ್ ಸ್ಮಾರ್ಟ್ ಫೋನ್ ಗಳು 2024 ರಲ್ಲಿ ಬಿಡುಗಡೆಯಾಗಲಿದೆ. ಹೊಸ ವರ್ಷಕ್ಕೆ ಹೊಸ ಮೊಬೈಲ್ ಖರೀದಿಸುವ ನಿಮ್ಮ ಯೋಜನೆಗೆ ಈ ಲೇಖನದಲ್ಲಿನ ಮಾಹಿತಿ ಉಪಯುಕ್ತವಾಗಲಿದೆ. 2024 ರಲ್ಲಿ ಬಿಡುಗಡೆಯಾಗುವ ಟಾಪ್ ಬೆಸ್ಟ್ 4 ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.

Apple iPhone 16
Image Credit: Live Mint

2024 ರಲ್ಲಿ ಬಿಡುಗಡೆಯಾಗಲಿದೆ ಈ ಟಾಪ್ ಬೆಸ್ಟ್ 4 ಸ್ಮಾರ್ಟ್ ಫೋನ್
Apple iPhone 16
2024 ರ ಸೆಪ್ಟೆಂಬರ್ ತಿಂಗಳಿನಲ್ಲಿ iPhone 16 ಮಾರುಕಟ್ಟೆಯಲ್ಲಿ ರಿಲೀಸ್ ಆಗಲಿದೆ. ಇನ್ನು iPhone 16 ಸರಣಿ 6.1 ಇಂಚಿನ ಡಿಸ್ಪ್ಲೇ, iPhone 16 Pro ಸರಣಿ 6.3 ಇಂಚಿನ ಡಿಸ್ಪ್ಲೇ, iPhone 16 Pro Max ಸರಣಿ 6.9 ಇಂಚಿನ ಡಿಸ್ಪ್ಲೇ, iPhone 16 Pro Plus ಸರಣಿ 6.7 ಇಂಚಿನ ಡಿಸ್ಪ್ಲೇ ಹೊಂದಿದೆ. ಐಫೋನ್ 16 ಮಾದರಿಗಳು A18 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತವೆ. ಕ್ಯಾಮೆರಾಗೆ ಸಂಬಂಧಿಸಿದಂತೆ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ‘ಟೆಟ್ರಾ-ಪ್ರಿಸ್ಮ್’ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿವೆ ಎಂದು ವರದಿಯಾಗಿದೆ.

OnePlus 12 Smartphone Price And Feature
Image Credit: Gadgets360

OnePlus 12 Smartphone
ಸದ್ಯ ಮಾರುಕಟ್ಟೆಯಲ್ಲಿ OnePlus ಇದೀಗ 5G ಸಂಪರ್ಕದೊಂದಿಗೆ ಹೆಚ್ಚು ನವೀಕರಿಸಿದ OnePlus 12 ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರ ಬಜೆಟ್ ಬೆಲೆಗೆ ಬಿಡುಗಡೆ ಮಾಡಿದೆ. ನೋಟ ಮತ್ತು ವಿನ್ಯಾಸದ ವಿಷಯದಲ್ಲಿ ಫೋನ್ OnePlus 11 ಗಿಂತ ಸ್ವಲ್ಪ ಭಿನ್ನವಾಗಿದೆ. OnePlus 12 ColorOS 14.0 ಅನ್ನು ಬೆಂಬಲಿಸಲಿದೆ. ಅಲ್ಲದೆ ಇದು 5,400mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 6.82 ಇಂಚಿನ ಡಿಸ್ಪ್ಲೇ, 32MP ಮುಂಭಾಗದ ಕ್ಯಾಮೆರಾ, 50MP ಮುಖ್ಯ, 48MP ಅಲ್ಟ್ರಾ ವೈಡ್ ಆಂಗಲ್ ಮತ್ತು 64MP ಮೂರನೇ ಕ್ಯಾಮೆರಾ ಸಂವೇದಕವನ್ನು ಹೊಂದಿರಲಿದೆ.

Samsung Galaxy S24 Smartphone Price
Image Credit: Forbes

Samsung Galaxy S24 Smartphone
ಕೊರಿಯನ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್‌ ಸಂಗ್ ತನ್ನ Samsung Galaxy S24 ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಜನವರಿ 17, 2024 ರಂದು ಭಾರತೀಯ ಮಾರುಕಟ್ಟೆಯಲ್ಲಿ ಈ ಮಾದರಿ ಗ್ರಾಂಡ್ ಎಂಟ್ರಿ ಕೊಡಲಿದೆ. Samsung Galaxy S24 Smartphone ನಲ್ಲಿ AI- ಸಂಬಂಧಿತ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ.

Join Nadunudi News WhatsApp Group

Xiaomi 14 Pro Smartphone
Image Credit: 91mobiles

Xiaomi 14 Pro Smartphone
ಸದ್ಯ ಮಾರುಕಟ್ಟೆಯಲ್ಲಿ Xiaomi ಕಂಪನಿಯ ನೂತನ ಸ್ಮಾರ್ಟ್ ಫೋನ್ ಕೂಡ ಎಂಟ್ರಿ ಕೊಡಲಿದೆ. Xiaomi 14 Pro ಮಾದರಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ಸ್ಮಾರ್ಟ್ ಫೋನ್ ಗಾಲ ಜೊತೆ ನೇರ ಸ್ಪರ್ಧೆಗಿಳಿಯಲಿದೆ. ಫೆಬ್ರವರಿ 2024 ರಲ್ಲಿ Xiaomi 14 Pro ಅದ್ದೂರಿಯಾಗಿ ರಿಲೀಸ್ ಆಗಲಿದೆ. Xiaomi 14 Pro Smartphone 6.7-ಇಂಚಿನ ಡಿಸ್ಪ್ಲೇ ಹೊಂದಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್ 120W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4880mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಕ್ಯಾಮರಾ ಬಗ್ಗೆ ಹೇಳುವುದಾದರೆ, 50MP ಟೆಲಿಫೋಟೋ ಲೆನ್ಸ್, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 32MP ಸೆಲ್ಫಿ ಶೂಟರ್ ಅನ್ನು ಒಳಗೊಂಡಿವೆ.

Join Nadunudi News WhatsApp Group