Tork Kratos R: ಸಿಂಗಲ್ ಚಾರ್ಜ್ ನಲ್ಲಿ 200 Km ರೇಂಜ್, ಈ ಎಲೆಕ್ಟ್ರಿಕ್ ಬೈಕ್ ಮುಂದೆ ಸೋತ ಹೀರೋ ಸ್ಪ್ಲೆಂಡರ್.

ಸಿಂಗಲ್ ಚಾರ್ಜ್ ನಲ್ಲಿ 200 Km ರೇಂಜ್ ನೀಡುವ ಎಲೆಕ್ಟ್ರಿಕ್ ಬೈಕ್

Tork Kratos R Electric Bike: ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಹೊಸ ಹೊಸ ವಿನ್ಯಾಸದ ಸಾಕಷ್ಟು ಬೈಕ್ ಗಳು ಬಿಡುಗಡೆಯಾಗುತ್ತಿದೆ. ವಿವಿಧ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿವೆ. ಇತ್ತೀಚಿಗೆ ಟಾರ್ಕ್ ಮೋಟಾರ್ ಅರ್ಬೆನ್ ಎಂಬ ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್‌ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ.

ಕಂಪನಿಯ ವಿವಿಧ ರೂಪಾಂತರಕ್ಕೆ ಹೋಲಿಸಿದರೆ ಈ ಹೊಸ ಕ್ರಾಟೋಸ್ ಸ್ವಲ್ಪ ಮಟ್ಟಿಗೆ ಅಗ್ಗವಾಗಿದೆ. ಈ ಹೊಸ ಬೈಕ್ ನ ನೋಟವು ಆಕರ್ಷಣೀಯವಾಗಿದ್ದು ಯುವಕರನ್ನು ಹೆಚ್ಚಾಗಿ ಸೆಳೆಯಲಿದೆ. ಕೆಂಪು, ನೀಲಿ ಹಾಗೂ ಕಪ್ಪು ಬಣ್ಣದ ಆಯ್ಕೆಯಲ್ಲಿ ಈ ಹೊಸ ಕ್ರಾಟೋಸ್ ಬೈಕ್ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಕ್ರಾಟೋಸ್ ಬೈಕ್ ನಲ್ಲಿ ಅಳವಡಿಸಲಾದ ಸುಧಾರಿತ ಫೀಚರ್ ಗಳ ಬಗ್ಗೆ ವಿವರವನ್ನು ತಿಳಿಯೋಣ.

Tork Kratos R Electric Bike
Image Credit: Team-bhp

ಸಿಂಗಲ್ ಚಾರ್ಜ್ ನಲ್ಲಿ 200 Km ರೇಂಜ್
ಹೊಚ್ಚ ಹೊಸ ಟಾರ್ಕ್ ಕ್ರಾಟೋಸ್ ಬೈಕ್ ನಲ್ಲಿ ಎಕ್ಸೆಲ್ ಫ್ಲಕ್ಸ್ ಮೋಟಾರ್ ಅನ್ನು ನೀಡಲಾಗಿದ್ದು, ಈ ಮೋಟಾರ್ 12 bhp ಪವರ್ ಮತ್ತು 38 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೋಟರ್ 4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ನೊಂದಿಗೆ ಜೋಡಿಸಲ್ಪಟ್ಟಿದ್ದು, ಪೂರ್ಣ ಚಾರ್ಜ್ ಮಾಡಿದ ನಂತರ ಬರೋಬ್ಬರಿ 200 ಕಿಲೋಮೀಟರ್‌ ಗಳಿಗಿಂತ ಹೆಚ್ಚಿನ ರೇಂಜ್ ಅನ್ನು ಪಡೆಯಬಹುದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 105 ಕಿಲೋಮೀಟರ್ ಆಗಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.

ಈ ಎಲೆಕ್ಟ್ರಿಕ್ ಬೈಕ್ ಮುಂದೆ ಸೋತ ಹೀರೋ ಸ್ಪ್ಲೆಂಡರ್
ಈ ಹಿಂದೆ ಈ ಎಲೆಕ್ಟ್ರಿಕ್ ಬೈಕ್‌ ನ ಎಕ್ಸ್ ಶೋ ರೂಂ ಬೆಲೆ 1.87 ಲಕ್ಷ ರೂ. ಆಗಿತ್ತು ಪ್ರಸ್ತುತ ಕಂಪನಿಯು ಬೆಲೆಯಲ್ಲಿ ಇಳಿಕೆ ಮಾಡಿದ್ದು, ಇದೀಗ 1.49 ಲಕ್ಷ ರೂ.ಗೆ ಇಳಿಕೆಯಾಗಿದೆ. ಅಂದರೆ ಈಗ ನೀವು ಈ ಬೈಕ್ ಮೇಲೆ 37000 ರೂ. ವರೆಗೆ ರಿಯಾಯಿತಿ ಪಡೆಯಲಿದ್ದೀರಿ. ಮಾರ್ಚ್ 31, 2024 ರವರೆಗೆ, ಗ್ರಾಹಕರು Kratos R ನಲ್ಲಿ ರೂ. 37000 ವರೆಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ ಎಂದು ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Tork Kratos R Electric Bike Price And Feature
Image Credit: Original Source

ರಿವರ್ಸ್ ಮೋಡ್, ಫಾಸ್ಟ್ ಚಾರ್ಜಿಂಗ್, ಲ್ಯಾಪ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಆಂಟಿ ಥೆಫ್ಟ್ ಅಲಾರ್ಮ್, ಜಿಯೋ ಫೆನ್ಸಿಂಗ್, ಚಾರ್ಜಿಂಗ್ ಪಾಯಿಂಟ್ ಲೊಕೇಶನ್, ಬ್ಯಾಟರಿ ಲೊಕೇಟರ್ ಅನಾಲಿಟಿಕ್ಸ್, OTA ಅಪ್‌ಡೇಟ್, ಗೈಡ್ ಮಿ ಹೋಮ್‌ ನಂತಹ ವೈಶಿಷ್ಟ್ಯಗಳೊಂದಿಗೆ ಈ ಹೊಸ ಬೈಕ್ ಆಕರ್ಷಣೀಯವಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಬೈಕ್ ಗಳಿಗೆ ಈ ನೂತನ ಮಾದರಿ ನೇರ ಪೈಪೋಟಿ ನೀಡಲಿದೆ. ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಬೈಕ್ ಇದಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆಯುವದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

Join Nadunudi News WhatsApp Group