Toyota EV: ಒಮ್ಮೆ ಚಾರ್ಜ್ ಮಾಡಿದರೆ 1600 Km ರೇಂಜ್, ಈ ಟೊಯೋಟಾ ಕಾರಿನ ಮುಂದೆ ಸೋತ ಟಾಟಾ ಮತ್ತು ಮಹಿಂದ್ರಾ.
1600 ಕಿಲೋಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರ್ ತಯಾರಿಸಲು ಮುಂದಾದ ಟೊಯೋಟಾ.
Toyota Ev Cars: ಕಾರು ಖರೀದಿ ಮಾಡುವ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ಸದ್ಯ ದೇಶದಲ್ಲಿ ಪೆಟ್ರೋಲ್ ಡಿಐಎಲ್ ಬೆಲೆ ಏರಿಕೆ ಆಗಿರುವುದರ ಕಾರಣ ನಾವು ರಸ್ತೆಯಲ್ಲಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನ ಕಾಣಬಹುದು.
ಹೌದು ದೇಶದಲ್ಲಿ ಕಾರು ತಯಾರಕ ಕಂಪನಿಗಳು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಜನರು ಹೆಚ್ಚು ಮೈಲೇಜ್ ಕೊಡುವ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನ ಖರೀದಿ ಮಾಡಲು ಮನಸ್ಸು ಮಾಡುತ್ತಿದ್ದಾರೆ ಎಂದು ಹೇಳಬಹುದು. ಸದ್ಯ ಇದರ ನಡುವೆ ದೇಶದಲ್ಲಿ ಹೆಚ್ಚು ಮಾರಾಟ ಆಗುತ್ತಿರುವ ಟೊಯೋಟಾ ಕಾರ್ಸ್ (Toyota) ತನ್ನ ಇನ್ನೊಂದು ಎಲೆಕ್ಟ್ರಿಕ್ ಮಾದರಿಯ ಕಾರನ್ನ ಮಾರುಕಟ್ಟೆಗೆ ತರಲು ಸಿದ್ಧತೆಯನ್ನ ಮಾಡಿಕೊಂಡಿದೆ.
ಹೆಚ್ಚು ಮಾರಾಟ ಆಗುತ್ತಿದೆ ಟೊಯೋಟಾ ಕಾರ್ಸ್
ದೇಶದಲ್ಲಿ ಟೊಯೋಟಾ ಕಾರ್ಸ್ ತನ್ನ ಆದ ಸಾಮ್ರಾಜ್ಯವನ್ನ ಸೃಷ್ಟಿಮಾಡಿದೆ ಎಂದು ಹೇಳಬಹುದು. ಈಗಾಗಲೇ ಸಾಕಷ್ಟು ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡಿರುವ ಟೊಯೋಟಾ ಈಗ ತನ್ನ ಇನ್ನೊಂದು ಮಾದರಿಯ ಕಾರನ್ನ ಮಾರುಕಟ್ಟೆಗೆ ತರಲು ಸಿದ್ಧತೆಯನ್ನ ಮಾಡಿಕೊಂಡಿದೆ ಎಂದು ಹೇಳಬಹುದು. ಇದು ಎಲೆಕ್ಟ್ರಿಕ್ ಮಾದರಿಯ ಕಾರ್ ಆಗಿರಲಿದ್ದು ಕಾರುಗಳ ಕ್ಷೇತ್ರದಲ್ಲಿ ಹೆಚ್ಚು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರ್ ಇದಾಗಿರಲಿದೆ ಎಂದು ಕಂಪನಿ ಹೇಳಿದೆ.
1600 ಕೊಲೋಮೀಟರ್ ಮೈಲೇಜ್ ಕೊಡುವ ಕಾರ್
ಹೌದು ಸುಮಾರು 1600 ಕಿಲೋಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಈಗ ಟೊಯೋಟಾ ಕಂಪನಿ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈಗಲೇ ರೋಡ್ ನಲ್ಲಿ 500 ರಿಂದ 700 ಕಿಲೋಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರುಗಳು ಓಡಾಡುತ್ತಿದ್ದು ಸಾಕಷ್ಟು ದೂರ ಪ್ರಯಾಣ ಮಾಡಲು ಈ ಕಾರುಗಳು ಸೂಕ್ತವಲ್ಲ ಅನ್ನುವ ಕಾರಣಕ್ಕೆ ಟೊಯೋಟಾ 1600 ಕಿಲೋಮೀಟರ್ ಮೈಲೇಜ್ ಕೊಡುವ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆಯನ್ನ ಮಾಡಿಕೊಂಡಿದೆ.
1600 ಕಿಲೋಮೀಟರ್ ಮೈಲೇಜ್ ಕಾರಿನ ಬೆಲೆ
2026 ಇಸವಿಯ ಆರಂಭದಲ್ಲಿ ಈ ಎಲೆಕ್ಟ್ರಿಕ್ ಕಾರನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆಯನ್ನ ಮಾಡಿಕೊಂಡಿರುವ ಟೊಯೋಟಾ ಈ ಕಾರಣ ತಯಾರಿಯಲ್ಲಿ ತೊಡಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಲಿಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಕಾರುಗಳು ಇದಾಗಿರಲಿದ್ದು ಎರಡು ಮಾದರಿಯ ಕಾರುಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಟೊಯೋಟಾ ಮುಂದಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಒಂದು ಮಾದರಿಯ ಕಾರ್ 1000 ಕಿಲೋಮೀಟರ್ ಮೈಲೇಜ್ ನೀಡಿದರೆ ಇನ್ನೊಂದು ಮಾದರಿಯ ಕಾರ್ ಸುಮಾರು 1600 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಇನ್ನು ಕಾರಿನ ಬೆಲೆಯ ವಿಷಯಕ್ಕೆ ವಿಷಯಕ್ಕೆ ಬರುವುದಾದರೆ, ಈ ಕಾರುಗಳ ಮೇಲೆ ಸುಮಾರು 30 ಲಕ್ಷದಿಂದ ಆರಂಭ ಆಗಲಿದ್ದು ನಿಖರವಾದ ಮಾಹಿತಿ ತಿಳಿದುಬಂದಿಲ್ಲ.