Toyota Corolla: ಕೇವಲ 70 ರೂ ನಲ್ಲಿ ನಿಭಾಯಿಸಬಹುದಾದ ಕಾರ್ ಲಾಂಚ್ ಮಾಡಿದ ಟೊಯೋಟಾ, ಬೆಲೆ ಕೂಡ ಕಡಿಮೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಕೊರೊಲ್ಲ ಫ್ಲೆಕ್ಸ್ ಇಂಧನ, ಕೇವಲ 70 ರೂ. ಖರ್ಚಿನಲ್ಲಿ ನಿಭಾಯಿಸಬಹುದಾದ ಕಾರ್.

Toyota Corolla Hybrid: ಹೆಚ್ಚುತ್ತಿರುವ ವಾಯು ಮಾಲಿನ್ಯ ಸಮಸ್ಯೆಯ ನಿಯಂತ್ರಣಕ್ಕಾಗಿ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಎಥನಾಲ್ ಚಾಲಿತ ವಾಹನಗಳು ವಾಯುಮಾಲಿನ್ಯ ನಿಯಂತ್ರದ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆಯ ಇಳಿಕೆಗೆ ಕಾರಣವಾಗುತ್ತದೆ ಎನ್ನಬಹುದು.

ದೇಶದಲ್ಲಿ Ethanol Vehicle ವಾಹನಗಳು ಚಲಾವಣೆಗೆ ಬಂದರೆ ಹೆಚ್ಚಿನ ಅನುಕೂಲವಾಗಲಿದೆ. ದೇಶದಲ್ಲಿನ ಮಾಲಿನ್ಯವನ್ನು ತಡೆಗಟ್ಟಿ ಶುದ್ಧ ಪರಿಸರ ನಿರ್ಮಾಣಕ್ಕಾಗಿ ಸರ್ಕಾರ ಎಥನಾಲ್ ಚಾಲಿತ ವಾಹನಗಳನ್ನು ಜಾರಿಗೊಳಿಸಲು ನಿರ್ಧರಿಸಿತ್ತು.

toyota corolla new 2023
Image Credit: cartoq

Toyota Corolla Hybrid
ಇಂಧನ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್, ಸೋಲಾರ್, ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಸದ್ಯ TOYOTA ಟೊಯೋಟಾ ಕಂಪನಿಯು ತನ್ನ ಫ್ಲೆಕ್ಸ್ ಇಂಧನ ಕಾರುಗಳ ಮೂಲಮಾದರಿಯನ್ನು ಪರಿಚಯಿಸಿದೆ. Toyota ಇದೀಗ Corolla Hybrid ಮಾದರಿಯನ್ನು ಪರಿಚಯಿಸಲು ಮುಂದಾಗಿದೆ. ಸದ್ಯದಲ್ಲೇ ಟೊಯಾಟಾ ಕಂಪನಿಯು ಎಥೆನಾಲ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಎಥೆನಾಲ್ ಚಾಲಿತ ವಾಹನಗಳು 100 ಪ್ರತಿಶತ ಜೈವಿಕ ಎಥೆನಾಲ್ ನಲ್ಲಿ ಚಲಿಸುತ್ತದೆ ಮತ್ತು ಎಥೆನಾಲ್ ಇಂಧನವು ಪೆಟ್ರೋಲ್ ಗಿಂತ ಅಗ್ಗವಾಗಿದೆ. ಇನ್ನು ಎಲ್ಲ ವಾಹನಗಳು ರೈತರು ತಯಾರಿಸಿದ ಎಥೆನಾಲ್ ನಿಂದ ಚಲಿಸಲು ಪ್ರಾರಂಭಿಸಿದಾಗ 60% ಎಥೆನಾಲ್, 40 % ವಿದ್ಯುತ್ ಬಳಕೆಯಾಗಲಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ 15 ರೂ. ಆಗುತ್ತದೆ ಎಂದು ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಕೃಷಿಯ ತ್ಯಾಜ್ಯದಿಂದ ತಯಾರಾಗಿರುವ ಎಥನಾಲ್ ಗ್ರಾಹಕರಿಗೆ ಬಹಳ ಅಗ್ಗವಾಗಿ ಸಿಗಲಿದೆ.

toyota corolla new model
Image Credit: cardekho

ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಕೊರೊಲ್ಲ ಫ್ಲೆಕ್ಸ್ ಇಂಧನ
ಫ್ಲೆಕ್ಸ್ ಇಂಧನದಲ್ಲಿ ಚಲಿಸುವ ಕಾರುಗಳನ್ನು ತರಲು ಪ್ರಸ್ತುತ ಹಲವಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಟೊಯೋಟಾ ಫ್ಲೆಕ್ಸ್ ಇಂಧನ ಇನ್ನೋವಾ ಹೈಕ್ರಾಸ್ ಅನ್ನು ಸಹ ತರಬಹುದು. ಕೊರೊಲ್ಲಾ ಫ್ಲೆಕ್ಸ್ ಫ್ಯುಯೆಲ್ ಕಾರಿನ ಹೊಸ ಆವೃತ್ತಿಯಲ್ಲಿ ದೊಡ್ಡದಾದ ಟಚ್‌ ಸ್ಕ್ರೀನ್ ಮತ್ತು ಕ್ಲೀನರ್ ಒಳಾಂಗಣದೊಂದಿಗೆ ತೀಕ್ಷ್ಣವಾಗಿ ಕಾಣುತ್ತದೆ.

Join Nadunudi News WhatsApp Group

ಕೇವಲ 70 ರೂ. ಖರ್ಚಿನಲ್ಲಿ ನಿಭಾಯಿಸಬಹುದಾದ ಕಾರ್
ಇನ್ನು 1.8 ಲೀಟರ್ ಪೆಟ್ರೋಲ್ ಎಂಜಿನ್, ಎಥೆನಾಲ್ ಮಿಶ್ರಿತ ಇಂಧನದಿಂದ ಲೀಟರ್‌ಗೆ ಸುಮಾರು 60 ರಿಂದ 70 ರೂ. ಗಳಲ್ಲಿ ಖರ್ಚಿನಲ್ಲಿ ಚಲಾಯಿಸಬಹುದಾಗಿದೆ. ಇನ್ನು ಟೊಯೋಟಾ ಜೊತೆಗೆ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೋಟಾ, ಹೋಂಡಾ ಮತ್ತು ಮಹೀಂದ್ರಾ ಕಂಪನಿಗಳು ಕೂಡ ತಮ್ಮ ವಾಹನಗಳನ್ನು ಎಥೆನಾಲ್ ಮಿಶ್ರ ಇಂಧನಕ್ಕೆ ಬದಲಾಯಿಸಲು ತಯಾರಿ ನಡೆಸುತ್ತಿದೆ.

Join Nadunudi News WhatsApp Group