Toyota Glanza: 30 Km ಮೈಲೇಜ್ ಕೊಡುವ ಈ ಟೊಯೋಟಾ ಕಾರ್ ಕೇವಲ 7 ಲಕ್ಷಕ್ಕೆ, ಯಾವುದೇ ದುಬಾರಿ ಕಾರಿಗೆ ಕಡಿಮೆ ಇಲ್ಲ

30 Km ಮೈಲೇಜ್ ಕೊಡುವ ಈ ಟೊಯೋಟಾ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್

Toyota  Glanza Price And Mileage: ಮಾರುಕಟ್ಟೆಯಲ್ಲಿ Toyota Car ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು. Toyota ಈಗಾಗಲೇ ಮಾರುಕಟ್ಟೆಯಲ್ಲಿ ವಿವಿದ ರೂಪಾಂತರದ ಕಾರ್ ಗಳನ್ನೂ ಪರಿಚಯಿಸಿವೆ.

Toyota Fortuner , Toyota Innova ಸೇರಿದಂತೆ ಇನ್ನು ಸಾಕಷ್ಟು ಮಾದರಿಯ ಕಾರ್ ಗಳು ಗ್ರಾಹಕರ ಆಯ್ಕೆಗೆ ಲಭ್ಯವಾಗಲಿದೆ. ಇದೀಗ Toyota ತನ್ನ ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎನ್ನಬಹುದು. ಟೊಯೋಟಾದ ಈ ಮಾದರಿ ಬುಕಿಂಗ್ ನಲ್ಲಿ ದಾಖಲೆ ಸೃಷ್ಟಿಸುತ್ತಿದೆ.

Toyota  Glanza Price
Image Credit: ABP News

Toyota  Glanza 
ಟೊಯೋಟಾ ಇದೀಗ ಟೊಯೋಟಾ ಗ್ಲಾಂಜಾ ಹೊಸ ಕಾರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಕಂಪನಿಯು Glanza ಬುಕಿಂಗ್ ಬಗ್ಗೆ ಮಾಹಿತಿ ನೀಡಿದೆ. ಡಿಸೆಂಬರ್ 2023 ರಲ್ಲೂ ಬುಕಿಂಗ್ ಅನ್ವಯವಾಗುವಂತೆ ವೈಟಿಂಗ್ ಪಿರಿಯಡ್ ಅನ್ನು ಕಂಪನಿ ಪ್ರಕಟಿಸಿದೆ. ಇನ್ನು Glanza ಮಾದರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ವಿತರಣೆಗೆ ಬುಕಿಂಗ್ ಮಾಡಿದ 1 ತಿಂಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಮಾರುಕಟ್ಟೆಯಲ್ಲಿ ಈ ಟೊಯೋಟಾ ಗ್ಲಾಂಜಾ ಕಾರ್ ನ ಬೆಲೆ ಸುಮಾರು 6.81 ಲಕ್ಷದಿಂದ 10 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. Toyota  Glanza ಮಾದರಿಯಲ್ಲಿ ಹೆಚ್ಚಿನ ಫೀಚರ್ ಅನ್ನು ನೀಡಲಾಗಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 90PS ಪವರ್ ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Toyota  Glanza Feature
Image Credit: Carwale

30KM ಮೈಲೇಜ್ ನೀಡುವ ಟೊಯೋಟಾ ಗ್ಲಾಂಜಾಗೆ ಹೆಚ್ಚಿದೆ ಬೇಡಿಕೆ
ಟೊಯೋಟಾ ಗ್ಲಾಂಜಾ ಕಾರ್ ನಲ್ಲಿ ಐದು ಆಸನಗಳನ್ನು ಇರಿಸಲಾಗಿದೆ. ಕಾರು 318 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, 5 ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರ್ ನಲ್ಲಿ 1197 ಸಿಸಿ ಎಂಜಿನ್ ಅನ್ನು ನೀಡಲಾಗಿದೆ. ಟೊಯೋಟಾ ಗ್ಲಾಂಜಾ ಪೆಟ್ರೋಲ್ ಮಾದರಿಗೆ 22 KM ಮೈಲೇಜ್ ಮತ್ತು CNG ಆಯ್ಕೆಯಲ್ಲಿ ಪ್ರತಿ ಕೆಜಿಗೆ 30KM ಮೈಲೇಜ್ ನೀಡಲಿದೆ.

Join Nadunudi News WhatsApp Group

Toyota  Glanza Feature
ವಿಎಸ್‌ಸಿ, ಇಬಿಡಿ ಮತ್ತು ಎಬಿಎಸ್‌ ಸೇರಿದಂತೆ ಇನ್ನಿತರ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ ನಾಲ್ಕು ರೂಪಾಂತರಗಳನ್ನು ನೋಡಬಹುದಾಗಿದೆ. ಕಾರು ಹಿಂಬದಿಯ ಎಸಿ ವೆಂಟ್‌ ಗಳೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ವಾಹನ ಸವಾರರ ಸುರಕ್ಷತೆಗಾಗಿ ಟೊಯೊಟಾ ಗ್ಲಾನ್ಜಾ ಆರು ಏರ್‌ ಬ್ಯಾಗ್‌ಗಳು ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.

Join Nadunudi News WhatsApp Group