Toyota Hilux: ಟೊಯೋಟಾ Hilux ಕಾರಿನ ಮೇಲೆ 6 ಲಕ್ಷ ಡಿಸ್ಕೌಂಟ್, ಇದೊಂದು ಬೆಸ್ಟ್ ಆಫ್ ರೋಡಿಂಗ್ ಕಾರ್.

ಟೊಯೋಟಾ hilux ಕಾರಿನ ಮೇಲೆ ಆಫರ್ ಘೋಷಣೆ ಆಗಿದ್ದು ಕಡಿಮೆ ಬೆಲೆಯಲ್ಲಿ ಜನರು ಖರೀದಿ ಮಾಡಬಹುದು.

Toyota Hilux Pickup: ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಾರ್ ಗಳನ್ನೂ ಬಿಡುಗಡೆ ಮಾಡಿವೆ. ಇನ್ನು ಟೊಯೊಟಾ ಕಂಪನಿಯು ಕಾರ್ ಗಳ ಜೊತೆಗೆ ಪಿಕಪ್ ಗಳನ್ನೂ ಕೂಡ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ. ದೇಶದಲ್ಲಿ ಪಿಕಪ್ ತಯಾರಕ ಕಂಪನಿಗಳಲ್ಲಿ ಟೊಯೊಟಾ ಕೂಡ ಒಂದಾಗಿದೆ.

ಇನ್ನು ದೇಶದಲ್ಲಿ ಟೊಯೊಟಾ ಕಂಪನಿಯು ಮಾರ್ಚ್ 2022 ರಲ್ಲಿ ಪಿಕಪ್ ಅನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಇದೀಗ ಟೊಯೊಟಾ ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಹಿಲಕ್ಸ್ (Toyota Hilux) ಪಿಕಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

An offer is announced on the Toyota hilux car so that people can buy it at a low price.
Image Credit: Autocarindia

ಟೊಯೊಟಾ ಹಿಲಕ್ಸ್
ಟೊಯೊಟಾ ಕಂಪನಿಯು ಒಟ್ಟು 1300 ಯುನಿಟ್ ಗಳಷ್ಟು ಪಿಕಪ್ ಗಳನ್ನೂ ಮಾರಾಟ ಮಾಡಿದೆ. ಪ್ರವೇಶ ಮಟ್ಟದ Hilux Standard 4WD MT ಬೆಲೆಯಲ್ಲಿ ಕಂಪನಿಯು ಈ ಕಡಿತವನ್ನು ಮಾಡಿದೆ. ಈ ಟೊಯೊಟಾ ಹಿಲಕ್ಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 30.40 ಲಕ್ಷ ರೂ. ಗಳಲ್ಲಿ ಪರಿಚಯಿಸಲಾಗಿದೆ. ಟಾಪ್ ಸ್ಪೆಕ್ ಹೈ ಟ್ರಿಮ್ ಅನ್ನು ಮ್ಯಾನುವಲ್ ಗೆ ರೂ. 1.35 ಲಕ್ಷ ಮತ್ತು ಆಟೋಮ್ಯಾಟಿಕ್ ಗೆ ರೂ. 1.10 ಲಕ್ಷ ಹೆಚ್ಚಿಸಲಾಗಿದೆ.

ಟೊಯೊಟಾ ಹಿಲಕ್ಸ್ ವಿಶೇಷತೆ
ಪ್ರಸ್ತುತ ಟೊಯೊಟಾ ಹಿಲಕ್ಸ್ ಬೆಲೆ 37.15 ಲಕ್ಷ ಮತ್ತು 37.90 ಲಕ್ಷಕ್ಕೆ ತಲುಪಿದೆ. ಇನ್ನು ಕಂಪನಿಯು ಟೊಯೊಟಾ ಹಿಲಕ್ಸ್ ಖರೀದಿಯ ಮೇಲೆ ಈ ತಿಂಗಳು ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಟೊಯೊಟಾ ಕಂಪನಿಯ ಈ ಎರಡು ಪಿಕಪ್ ಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯಬಹುದು. ಇನ್ನು 2 .8 ಲೀಟರ್ ಡೀಸೆಲ್ ಎಂಜಿನ್ ಹಾಗೂ 204 bhp ಯಾ ಗರಿಷ್ಟ ಶಕ್ತಿ ಮತ್ತು 500 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಟೊಯೊಟಾ ಹಿಲಕ್ಸ್ ಪಡೆದಿದೆ.

An offer is announced on the Toyota hilux car so that people can buy it at a low price.
Image Credit: V3cars

ಇಸುಜು ವಿ ಕ್ರಾಸ್ ಎಂಜಿನ್
ಇನ್ನು ಇಸುಜು ವಿ ಕ್ರಾಸ್ 1.9 ಲೀಟರ್ ಡೀಸೆಲ್ ಎಂಜಿನ್ ಹಾಗೂ 150 bhp ಯಾ ಗರಿಷ್ಟ ಶಕ್ತಿ ಮತ್ತು 350Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಇಸುಜು ವಿ ಕ್ರಾಸ್ ಪಡೆದಿದೆ. ಇನ್ನು ಇಸುಜು ವಿ ಕ್ರಾಸ್ ನ ಆಕ್ಸ್ ಶೋ ರೂಮ್ ಬೆಲೆ 23.82 ಲಕ್ಷ ರೂ. ಆಗಿದೆ. ಇನ್ನು 27.36 ಲಕ್ಷ ರೂ. ಗಳನ್ನೂ ಟಾಪ್ 4WD AT ಪ್ರೆಸ್ಟಿಜ್ ರೂಪಾಂತರಕ್ಕೆ ನಿಗದಿಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group