Toyota Kirloskar: 30 ದಿನದಲ್ಲಿ ಮನೆಗೆ ತನ್ನಿ ಹೊಸ ಟೊಯೋಟಾ ಕಾರ್, ಟೊಯೋಟಾ ಕಂಪನಿಯ ಬಹುದೊಡ್ಡ ಘೋಷಣೆ

30KM ಮೈಲೇಜ್ ನೀಡುವ ಟೊಯೋಟಾ ಗ್ಲಾಂಜಾಗೆ ಜನರು ಫಿದಾ

Toyota Kirloskar Motor New Toyota Glanza: ಭಾರತೀಯ ಆಟೋ ವಲಯದಲ್ಲಿ ಈಗಾಗಲೇ ಸಾಕಷ್ಟು ಮಾದರಿಯ SUV ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ ಗಳನ್ನೂ ಖರೀದಿಸುತ್ತಿದ್ದಾರೆ. ಸಧ್ಯ ಮಾರುಕಟ್ಟೆಯಲ್ಲಿ Toyota Kirloskar Motor ಇದೀಗ ನೂತನವಾಗಿ ಪ್ರೀಮಿಯಂ ಮಾದರಿಯನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಈ ನೂತನ ಮಾದರಿ ಮಾರಿಕಟ್ಟೆಯಲ್ಲಿ ಬಾರಿ ಬೇಡಿಕೆಯನ್ನು ಪಡೆದುಕೊಂಡಿದೆ.

Toyota Kirloskar Motor Launch Toyota Glanza
Image Credit: Toyotabharat

ಬುಕ್ ಮಾಡಿದ 30 ದಿನದಲ್ಲೇ ನಿಮ್ಮದಾಗಲಿದೆ ಈ Toyota ನ್ಯೂ SUV
ಟೊಯೋಟಾ ಇದೀಗ Toyota  Glanza  ಹೊಸ ಕಾರ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಕಂಪನಿಯು Glanza ಬುಕಿಂಗ್ ಬಗ್ಗೆ ಮಾಹಿತಿ ನೀಡಿದೆ. ಫೆಬ್ರವರಿ 1 2024 ಕ್ಕೆ ಬುಕಿಂಗ್ ಅನ್ವಯವಾಗುವಂತೆ ವೈಟಿಂಗ್ ಪಿರಿಯಡ್ ಅನ್ನು ಕಂಪನಿ ಪ್ರಕಟಿಸಿದೆ. ಇನ್ನು Glanza ಮಾದರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ವಿತರಣೆಗೆ ಬುಕಿಂಗ್ ಮಾಡಿದ 1 ತಿಂಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ನೀವು ಈ Glanza ಮಾದರಿಯನ್ನು ಬುಕ್ ಮಾಡಿದ 30 ದಿನಗಳಲ್ಲೇ ನಿಮ್ಮ ಮನೆಯ ಮುಂದೆ ನಿಲ್ಲಿಸಬಹುದಾಗಿದೆ.

30KM ಮೈಲೇಜ್ ನೀಡುವ ಟೊಯೋಟಾ ಗ್ಲಾಂಜಾಗೆ ಜನರು ಫಿದಾ
ಮಾರುಕಟ್ಟೆಯಲ್ಲಿ ಈ ಟೊಯೋಟಾ ಗ್ಲಾಂಜಾ ಕಾರ್ ನ ಬೆಲೆ ಸುಮಾರು 6.81 ಲಕ್ಷದಿಂದ 10 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. Toyota  Glanza ಮಾದರಿಯಲ್ಲಿ ಹೆಚ್ಚಿನ ಫೀಚರ್ ಅನ್ನು ನೀಡಲಾಗಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, 90PS ಪವರ್ ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೋಟಾ ಗ್ಲಾಂಜಾ ಕಾರ್ ನಲ್ಲಿ ಐದು ಆಸನಗಳನ್ನು ಇರಿಸಲಾಗಿದೆ. ಕಾರು 318 ಲೀಟರ್ ಬೂಟ್ ಸ್ಪೇಸ್ ಹೊಂದಿದ್ದು, 5 ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರ್ ನಲ್ಲಿ 1197 ಸಿಸಿ ಎಂಜಿನ್ ಅನ್ನು ನೀಡಲಾಗಿದೆ. ಟೊಯೋಟಾ ಗ್ಲಾಂಜಾ ಪೆಟ್ರೋಲ್ ಮಾದರಿಗೆ 22 KM ಮೈಲೇಜ್ ಮತ್ತು CNG ಆಯ್ಕೆಯಲ್ಲಿ ಪ್ರತಿ ಕೆಜಿಗೆ 30KM ಮೈಲೇಜ್ ನೀಡಲಿದೆ.

Toyota Glanza Price In India
Image Credit: Cartrade

Toyota  ಗ್ಲಾಂಜಾ ಮಾದರಿಯ ವೈಶಿಷ್ಟ್ಯಗಳ ಬಗ್ಗೆ ವಿವರ ಇಲ್ಲಿದೆ
ವಿಎಸ್‌ಸಿ, ಇಬಿಡಿ ಮತ್ತು ಎಬಿಎಸ್‌ ಸೇರಿದಂತೆ ಇನ್ನಿತರ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಈ ಕಾರ್ ನಲ್ಲಿ ನಾಲ್ಕು ರೂಪಾಂತರಗಳನ್ನು ನೋಡಬಹುದಾಗಿದೆ. ಕಾರು ಹಿಂಬದಿಯ ಎಸಿ ವೆಂಟ್‌ ಗಳೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ವಾಹನ ಸವಾರರ ಸುರಕ್ಷತೆಗಾಗಿ ಟೊಯೊಟಾ ಗ್ಲಾನ್ಜಾ ಆರು ಏರ್‌ ಬ್ಯಾಗ್‌ಗಳು ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group