Toyota 2024: ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿದೆ ಈ ಟೊಯೋಟಾ ಕಾರ್, ಕಡಿಮೆ ಮತ್ತು 26 Km ಮೈಲೇಜ್

ಬರೋಬ್ಬರಿ 26km ಮೈಲೇಜ್ ನೀಡಲಿದೆ ಈ ಟೊಯೋಟಾ ಕಾರ್

Toyota Rumion Price And Feature: ದೇಶದ ವಿವಿಧ ಜನಪ್ರಿಯ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಇರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ TOYOTA ಈ ಮಾದರಿಯು ಬಾರಿ ಸಂಚಲನ ಮೂಡಿಸುತ್ತಿದೆ. ಬರೋಬ್ಬರಿ 7 ಆಸನಗಳೊಂದಿಗೆ ಪರಿಚಯವಾಗಿರುವ Toyota ಕಾರ್ ಇನ್ನಿತ MPV ಮಾದರಿಗಳಿಗೆ ಠಕ್ಕರ್ ನೀಡುತ್ತಿದೆ.

ಸದ್ಯ ಟೊಯೋಟಾ ಕಂಪನಿಯು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಫೆ. 1 2024 ಗೆ ಅನ್ವಯವಾಗುವಂತೆ ರೂಮಿಯನ್ MPV ಪಡೆದಿರುವ ಕಾಯುವಿಕೆಯ ಅವಧಿಯ ಬಗ್ಗೆ ಬಹಿರಂಗಪಡಿಸುವ ಮೂಲಕ ಇನ್ನಷ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

Toyota Rumion Price And Features
Image Credit: News 24

ಟೊಯೋಟಾದ ಈ 7 ಸೀಟರ್ ಕಾರ್ ಗೆ ಜನರು ಫಿದಾ
ಮಾರುಕಟ್ಟೆಯಲ್ಲಿ ಟೊಯೋಟಾ 7 ಸೀಟರ್ ಕಾರ್ ನ ವಿಭಾಗದಲ್ಲಿ ಇದೀಗ Toyota Rumion ಆಯ್ಕೆಯುಯನ್ನು ಕಂಪನಿಯು ನೀಡಿದೆ. ಟೊಯೋಟದ ಈ ನೂತನ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಟೊಯೋಟಾ ಎರಡು ಎಂಜಿನ್ ರೂಪಾಂತರದಲ್ಲಿ Toyota Rumion ಮಾದರಿಯನ್ನು ಬಿಡುಗಡೆ ಮಾಡಿದೆ.

ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮಾರುಕಟ್ಟೆಯಲ್ಲಿ Toyota Rumion ಬಿಡುಗಡೆಗೊಂಡು ಕೆಲವೇ ದಿನಗಳಲ್ಲಿ 25,000 ಹೆಚ್ಚಿನ ಬುಕಿಂಗ್ ಕಂಡುಕೊಂಡಿರುವ ಬಗ್ಗೆ ದಾಖಲೆ ಬರೆದಿದೆ.

Toyota Rumion Price In India
Image Credit: Amarujala

ಬರೋಬ್ಬರಿ 26km ಮೈಲೇಜ್ ನೀಡುವ ಈ ರೂಮಿಯನ್ ಮಾದರಿಯ ಬೆಲೆ ಎಷ್ಟು ಗೊತ್ತಾ…?
ಟೊಯೋಟಾ ರೂಮಿಯಾನ್ ಕಾರ್  ನಲ್ಲಿ ಬಲಿಷ್ಠ ಎಂಜಿನ್ ಅನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ. ಇನ್ನು ಈ MPV ನಲ್ಲಿ ಜೈವಿಕ ಇಂಧನ CNG ರೂಪಾಂತರವನ್ನು ಅಳವಡಿಸಿದೆ. ಟೊಯೋಟಾ ರೂಮಿಯಾನ್ CNG ರೂಪಾಂತರವು ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

ಕಂಪನಿಯು ಟೊಯೋಟಾ ರೂಮಿಯಾನ್ ಕಾರ್ ನಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 10.29 ರಿಂದ 13.68 ಲಕ್ಷ ಆಗಿದೆ. ನೀವು ರೂಮಿಯನ್ ಮಾದರಿಯಲ್ಲಿ 7-inch touchscreen infotainment system , Automatic Climate Control , cruise control , 4 airbags , EBD , ABS , ESC , Rare Parking Camera ಸೇರಿದಂತೆ ಇನ್ನು ಹತ್ತಾರು ಫೀಚರ್ ಗಳನ್ನೂ ನೋಡಬಹುದಾಗಿದೆ.

Join Nadunudi News WhatsApp Group