Rumion: ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಎರ್ಟಿಗಾ, ಕಡಿಮೆ ಬೆಲೆ 26 Km ಮೈಲೇಜ್.

26 Km ಮೈಲೇಜ್ ನೀಡುವ ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಎರ್ಟಿಗಾ

Toyota Rumion Price And Feature: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ವಾಹನಗಳು ಲಭ್ಯವಿದೆ. 5 ಸೀಟರ್ ವಾಹನಗಳಿಂದ ಹಿಡಿದು 7 ಸೀಟರ್ ವಾಹನಗಳನ್ನು ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Toyota ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 7 ಸೀಟರ್ ವಿಭಾಗದಲ್ಲಿ Toyota Rumion ಮಾದರಿಯು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ 7 ಸೀಟರ್ ಕಾರ್ ಅನ್ನು ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ ಕಾರ್ ಗಳ ಜೊತೆ ರೂಮಿಯಾನ್ ಮಾದರಿಯು ಪೈಪೋಟಿ ನೀಡಲು ಸಜ್ಜಾಗಿದೆ. ನಾವೀಗ ಈ ಲೇಖನದಲ್ಲಿ ರೂಮಿಯಾನ್ ಮಾದರಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

Toyota Rumion Price And Features
Image Credit: Overdrive

ಈ ಟೊಯೋಟಾ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಎರ್ಟಿಗಾ
ಟೊಯೋಟಾ ರೂಮಿಯಾನ್‌ ಕಾರಿನಲ್ಲಿ ನೀವು ಉತ್ತಮ ವೈಶಿಷ್ಟ್ಯಗಳ ರೂಪಾಂತರಗಳನ್ನು ನೋಡಬಹುದು. ಉತ್ತಮ ನೋಟ ಮತ್ತು ಸೌಕರ್ಯಗಳ ಜೊತೆಗೆ ಆಕರ್ಷಕವಾದ ವಿನ್ಯಾಸವನ್ನು ನೋಡುತ್ತೀರಿ. ಸ್ಪೋರ್ಟಿ ವಿನ್ಯಾಸ ಹೊಂದಿರುವ ಈ ಕಾರ್ 7-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಆಪಲ್ ಕಾರ್ಪ್ಲೇ ಮತ್ತು ಸುಧಾರಿತ ತಂತ್ರಜ್ಞಾನವನ್ನು ಸಹ ಹೊಂದಿದೆ.

ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, 6-ಸ್ಪೀಕರ್ ಆಡಿಯೋ ಸಿಸ್ಟಮ್, ಕನೆಕ್ಟೆಡ್ ಕಾರ್ ಗಳು ಸೇರಿದಂತೆ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಡ್ಯುಯಲ್ ಏರ್‌ ಬ್ಯಾಗ್‌ ಗಳ ಜೊತೆಗೆ ಸ್ವಯಂಚಾಲಿತ ಹೆಡ್‌ ಲ್ಯಾಂಪ್‌ ಗಳು, ಕ್ರೂಸ್ ಕಂಟ್ರೋಲ್, ಕರ್ಟನ್ ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್‌ ಗಳಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

Toyota Rumion Price In India
Image Credit: Overdrive

ಕಡಿಮೆ ಬೆಲೆ 26 Km ಮೈಲೇಜ್
ಟೊಯೊಟಾ ರೂಮಿಯಾನ್ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 103 bhp ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಲಭ್ಯವಿದೆ. ಟೊಯೋಟಾ ರೂಮಿಯಾನ್‌ ಪೆಟ್ರೋಲ್ ರೂಪಾಂತರದಲ್ಲಿ, ಪ್ರತಿ ಕಿಲೋಮೀಟರ್ ಗೆ 20.51 km ಮೈಲೇಜ್ ನೀಡಿದರೆ, CNG ರೂಪಾಂತರದಲ್ಲಿ 26.11 km/kg ತಲುಪುತ್ತದೆ. ನಾವು ಟೊಯೊಟಾ ರುಮಿಯಾನ್ ಬೆಲೆಯ ಬಗ್ಗೆ ಹೇಳುವುದಾದರೆ, ಟೊಯೊಟಾ ರೂಮಿಯಾನ್ ಕಾರಿನ ಬೆಲೆ 10.29 ಲಕ್ಷದಿಂದ ಪ್ರಾರಂಭವಾಗಿ 13.68 ಲಕ್ಷಕ್ಕೆ ತಲುಪುತ್ತದೆ.

Join Nadunudi News WhatsApp Group

Toyota Rumion Car Mileage
Image Credit: News24online

Join Nadunudi News WhatsApp Group