Traffic Rules: ಟ್ರಾಫಿಕ್ ಪೊಲೀಸರಿಂದ ಹೊಸ ಮಾಸ್ಟರ್ ಪ್ಲ್ಯಾನ್, ಸಂಕಷ್ಟದಲ್ಲಿ Fastag ಹಾಕಿಕೊಂಡ ಸವಾರರು.

ಸಂಚಾರ ನಿಯಮವನ್ನು ಉಲಂಘನೆ ಮಾಡುವವರಿಗೆ ಫಾಸ್ ಟ್ಯಾಗ್ ನಲ್ಲೆ ದಂಡ ವಸೂಲಿ.

Traffic Fine Collection Through Fastag: ಇತ್ತೀಚಿನ ದಿನದಲ್ಲಿ ಸಂಚಾರ ನಿಯಮ ಹೆಚ್ಚು ಉಲ್ಲಂಘನೆ ಆಗುತ್ತಿರುವುದರಿಂದ ಪೊಲೀಸ್ ಇಲಾಖೆ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಸಂಚಾರ ನಿಯಮ ಬ್ರೇಕ್ ಮಾಡುವುದರಿಂದ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸಲಿದ್ದು, ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಲಾಖೆ ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಟೋಲ್ ಸಂಗ್ರಹಣಾ ವ್ಯಸ್ಥೆಯಲ್ಲಿ ಸಾಕಷ್ಟು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಇನ್ನು ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ (FASTag) ಅನ್ನು ಬಳಸಲಾಗುತ್ತದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆಯಿಂದ ಟೋಲ್ ಸಂಗ್ರಹಣೆಗೆ ಸಾಕಷ್ಟು ಅನುಕೂಲಗಳಾಗಿವೆ.

Significant change in fast tag
Image Credit: Financialexpress

ಸಂಚಾರ ನಿಯಮ ಬ್ರೇಕ್ ಮಾಡುವವರಿಗೆ ಇನ್ನುಮುಂದೆ ಹೊಸ ರೂಲ್ಸ್
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಫಾಸ್ಟ್ ಟ್ಯಾಗ್ ನಲ್ಲೆ ದಂಡ ವಸೂಲಿ ಮಾಡುವ ಯೋಜನೆಯನ್ನು ಸಂಚಾರ ಪೊಲೀಸ್ ಇಲಾಖೆ ಹೊರ ತರುತ್ತಿದೆ. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ನಿಯಮ ಉಲ್ಲಂಘನೆ ಮಾಡುವವರಿಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನ ವೇಗದ ಮಿತಿ 100 ಕೀ. ಮೀ ಗೆ ನಿಗದಿಪಡಿಸಲಾಗಿದೆ.

ವಾಹನ ಸಂಚರಿಸುವಾಗ ವೇಗ ಎಷ್ಟಿದೆ ಎನ್ನುವ ಮಾಹಿತಿ ಡಿಸ್ಪ್ಲೇ ಆಗಲಿದ್ದು ನಿಯಮ ಉಲ್ಲಂಘಿಸಿದವರ ವಾಹನ ಫೋಟೋ ಟೋಲ್ ಪ್ಲಾಜಾ ಮೂಲಕ ಪೊಲೀಸರು ತಿಳಿದುಕೊಳ್ಳುತ್ತಾರೆ. ಮತ್ತು Fastag ಮೂಲಕವೇ ದಂಡ ವಸೂಲಿ ಮಾಡಲು ಟ್ರಾಫಿಕ್ ಪೊಲೀಸರು ನಿರ್ಧಾರವನ್ನ ಮಾಡಿದ್ದಾರೆ.

ದಂಡ ವಸೂಲಿ ಪ್ರಕ್ರಿಯೆ ನಡೆಸುವ ಉದ್ದೇಶವನ್ನು ಪೊಲೀಸರು ಹೊಂದಿದ್ದು ಇದು ಯಶಸ್ವಿಯಾದಲ್ಲಿ ಬೇರೆ ಹೆದ್ದಾರಿಗಳಲ್ಲಿಯೂ ಇದನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆ ಹೊಸ ಅಸ್ತ್ರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

new traffic rules update
Image Credit: News18

ಫಾಸ್ಟ್ ಟ್ಯಾಗ್ ನಲ್ಲಿ ಮಹತ್ವದ ಬದಲಾವಣೆ
ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್ ಹೆಚ್ಚು ಉಪಯೋಗಕಾರಿಯಾಗಿದ್ದು, ಇದೀಗ ಫಾಸ್ಟ್ ಟ್ಯಾಗ್ ತನ್ನ ಸೇವೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇನ್ನುಮುಂದೆ ಫಾಸ್ಟ್ ಟ್ಯಾಗ್ ನ ಮೂಲಕ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬಹುದಾಗಿದೆ. ಪಾರ್ಕಿಂಗ್ ಶುಲ್ಕವನ್ನು ಫಾಸ್ಟ್ ಟ್ಯಾಗ್ ಮೂಲಕ ಠೇವಣಿ ಮಾಡಬಹುದು. ಫಾಸ್ಟ್ ಟ್ಯಾಗ್ ನ ಈ ಹೊಸ ಸೇವೆ ಈಗಾಗಲೇ ವಾಹನ ಸವಾರರರಿಗೆ ಲಭ್ಯವಾಗಿದೆ.

Join Nadunudi News WhatsApp Group