New Traffic Rules: ಎಲ್ಲ ದ್ವಿಚಕ್ರ ಹಾಗೂ ಕಾರು ಚಾಲಕರಿಗೆ ಹೊಸ ನಿಯಮ, ಇನ್ಮೇಲೆ ಲೈಸನ್ಸ್ ರದ್ದು

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಡಿ ಎಲ್ ರದ್ದು, ಅಲೋಕ್ ಕುಮಾರ್ ಖಡಕ್ ವಾರ್ನಿಂಗ್.

New Traffic Rules: ಸಂಚಾರದ ನಿಯಮದ ಬಗ್ಗೆ ಈಗಾಗಲೇ ನಿತಿನ್ ಗಡ್ಕರಿ ಅವರು ಸಾಕಷ್ಟು ನಿಯಮಗಳನ್ನು ಹೊರ ತಂದಿದ್ದಾರೆ. ವಾಹನಗಳು (Vehicle) ಸಾಮಾನ್ಯವಾಗಿ ಈಗ ಎಲ್ಲರ ಮನೆಯಲ್ಲಿ ಇರುತ್ತದೆ. ವಾಹನ ಇಲ್ಲದ ಮನೆಯನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಬಹುದು.

ಸದ್ಯ ವಾಹನಗಳ ಹೊಂದಿರುವವರು ಕೆಲವು ಸಾರಿಗೆ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಮತ್ತು ಮಾಡದೆ ಇದ್ದರೆ ಅವರು ನಿಯಮಗಳ ಅಡಿಯಲ್ಲಿ ದಂಡವನ್ನ ಕಟ್ಟಬೇಕು. ವಾಹನಗಳ ಚಾಲನೆ ಮಾಡುವವರು ಕೆಲವು ಸಾರಿಗೆ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು.

ಹೊಸ ಸಂಚಾರ ನಿಯಮಗಳು
ಸದ್ಯ ದೇಶದಲ್ಲಿ ಹಲವು ಸಾರಿಗೆ ನಿಯಮಗಳು ಇದ್ದು ಕೆಲವು ಜನರು ಸಾರಿಗೆ ನಿಯಮಗಳನ್ನ (Traffic Rules) ಪಾಲನೆ ಮಾಡುತ್ತಿಲ್ಲ.

Driving license will be canceled if traffic rules are violated
Image Credit: Thehindu

ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರು ಸಂಚಾರ ನಿಯಂತ್ರಣಕ್ಕಾಗಿ ಹಲವು ಹೊಸ ಹೊಸ ನಿಯಮಗಳನ್ನು ವಾಹನ ಸವಾರರಿಗೆ ಪರಿಚಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಹೊಸ ಹೊಸ ಸಂಚಾರ ನಿಯಮಗಳು ಜಾರಿ ಆಗುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಡಿ ಎಲ್ ರದ್ದು
ಇದೀಗ ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿ ಎಲ್ ರದ್ದು ಮಾಡುತ್ತೇವೆ. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಹಾಗು ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ ಹಾಕುವ ಕೆಲಸ ಮಾಡುತ್ತೇವೆ ಎಂದು ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

Join Nadunudi News WhatsApp Group

ಇನ್ನು ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಏನ್ ಹೆಚ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ನಾನು ರಸ್ತೆಯಲ್ಲಿ ಬಹಳ ಬಾರಿ ಸಂಚರಿಸಿದ್ದೇನೆ.

Driving license will be canceled if traffic rules are violated
Image Credit: Aajtak

ಕಳೆದ ಐದಾರು ತಿಂಗಳಿನಿಂದ ರಾಮನಗರ ವ್ಯಾಪ್ತಿಯಲ್ಲಿ 58 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 48 ಕ್ಕೂ ಹೆಚ್ಚು ಅಪಘಾತಗಳಾಗಿವೆ. ಎಲ್ಲೆಲ್ಲಿ ಅಪಘಾತ ನಡೆದಿದೆ ಆ ಸ್ಥಳಗಳ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇವೆ.

ಹೆದ್ದಾರಿಯಲ್ಲಿ ಆಗಮನ ಮತ್ತು ನಿರ್ಗಮನ ಸಮಸ್ಯೆ ಇದೆ. ಕೆಲವೆಡೆ ರಸ್ತೆಯಲ್ಲಿ ತೀವ್ರ ತಿರುವುಗಳಿವೆ. ಇದರಿಂದ ವಾಹನಗಳು ಡಿವೈಡರ್ ಹಾರುತ್ತಿವೆ. ಹೈವೇಯಲ್ಲಿ ಲೇನ್ ಶಿಸ್ತನ್ನು ಬಳಸಬೇಕು. ಹೀಗಾಗಿ ಹೈವೇ ಪೆಟ್ರೋಲಿಂಗ್ ಅಗತ್ಯ ಎಂದು ಹೇಳಿದರು.

Join Nadunudi News WhatsApp Group