Ram Mandir: ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, ರಾಮ ಮಂದಿರಕ್ಕೆ ಇಲ್ಲಿಂದ ಹೊರಡಲಿದೆ 12 ರೈಲುಗಳು.

ರಾಮನ ದರ್ಶನಕ್ಕಾಗಿ ಕಾಯುತ್ತಿರುವ ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ.

Train For Ayodhya Ram Mandir: ಇಡೀ ದೇಶದ ಜನರು ಅಯೋಧ್ಯ ರಾಮ ಮಂದಿರ ಉದ್ಘಾಟನೆಗಾಗಿ Ayodhya Ram Mandir Inauguration) ಕಾಯುತ್ತಿದ್ದಾರೆ. ರಾಮ ಮಂದಿರಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆಯಬೇಕೆನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳು ಹಲವು ವರ್ಷದಿಂದ ಕಾಯುತ್ತಿದ್ದಾರೆ. ಸದ್ಯ ಇನ್ನೇನು ಆರು ದಿನಗಳಲ್ಲಿ ಬಹುನಿರೀಕ್ಷಿತ ರಾಮ ಮಂದಿರ ಉದ್ಘಾಟನೆ ನೆರವೇರಲಿದೆ. ಸದ್ಯ ರಾಮನ ದರ್ಶನಕ್ಕಾಗಿ ಕಾಯುತ್ತಿರುವ ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ ಹೊರಬಿದ್ದಿದೆ.

Train For Ayodhya Ram Mandir
Image Credit: Jagran

ಕನ್ನಡಿಗರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್
ರಾಮನ ದರ್ಶನ ಪಡೆಯಲು ಕರ್ನಾಟಕದಿಂದ ವಿಶೇಷ 12 ರೈಲುಗಳು ಸಂಚಾರ ನಡೆಸಲಿದೆ. ಕರ್ನಾಟಕದವರು ರಾಮನ ದರ್ಶನವನ್ನು ಪಡೆಯಲು ರೈಲು ಮಾರ್ಗದ ಮೂಲಕ ಪ್ರಯಾಣ ಮಾಡಬಹುದು. ಭಕ್ತರ ಅನುಕೂಲಕ್ಕಾಗಿ ರೈಲ್ವಸ್ ಇಲಾಖೆವಿವಿಧ ಕಡೆಯಿಂದ ರೈಲನ್ನು ಸಂಚರಿಸಲು ಅನುಮತಿ ನೀಡಲಿದೆ. ರೈಲು ಪ್ರಯಾಣವನ್ನು ಮಾಡುವ ಮೂಲಕ ಭಕ್ತರು ರಾಮನ ದರ್ಶನವನ್ನು ಪಡೆಯಬಹುದು.

ರಾಮ ಮಂದಿರಕ್ಕೆ ಇಲ್ಲಿಂದ ಹೊರಡಲಿದೆ 12 ರೈಲುಗಳು
ಜನವರಿ 22 2024 ರಂದು ನೆರವೇರಲಿರುವ ರಾಮ ಮಂದಿರ ಉದ್ಘಾಟನೆಯ ಸಲುವಾಗಿ ಪ್ರತಿ ಮನೆ ಮನೆಗೂ ಅಯೋದ್ಯೆಯ ಮಂತ್ರಾಕ್ಷತೆ ಬಂದು ತಲುಪಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಮುಗಿಯುತ್ತಿದ್ದಂತೆ, ನೈರುತ್ಯ ರೈಲ್ವೆ ವಲಯವು ಈ ಸಂದರ್ಭದ ಸ್ಮರಣಾರ್ಥ ರಾಜ್ಯದ ವಿವಿಧ ಭಾಗಗಳಿಂದ 12 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲಿದೆ.

Ayodhya Ram Mandir Latest News
Image Credit: Biharivoice

ಹುಬ್ಬಳ್ಳಿ-3, -2, -2, ಮೈಸೂರು-2 ಸೇರಿದಂತೆ ವಿವಿಧ ಪಟ್ಟಣಗಳಿಂದ 12ಕ್ಕೂ ಹೆಚ್ಚು ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಒಂದು ರೈಲು ಬಂದ ನಂತರ ಇನ್ನೊಂದು ರೈಲು ಆ ಊರಿನಿಂದ ಹೊರಡುತ್ತದೆ. ರೈಲುಗಳ ಸಮಯ ಮತ್ತು ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಈ ರೈಲು ಪ್ರಯಾಣಕ್ಕೆ ಪ್ರಯಾಣಿಕರು ಆನ್ಲೈನ್ ನಲ್ಲಿ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ಕೌಂಟರ್ ನಲ್ಲಿ ಟಿಕೆಟ್ ಪಡೆದುಕೊಳ್ಳಲು ಅವಕಾಶವಿಲ್ಲ.

Join Nadunudi News WhatsApp Group

Join Nadunudi News WhatsApp Group