Train Mileage: ಭಾರತದ ರೈಲುಗಳ ಮೈಲೇಜ್ ಎಷ್ಟು…? ರೈಲು 1 ಕಿಲೋಮೀಟರ್ ಚಲಿಸಲು ಎಷ್ಟು ಡೀಸೆಲ್ ಬೇಕು ಗೊತ್ತಾ…?

ರೈಲುಗಳು 1 ಕಿ.ಮೀ ಮೈಲೇಜ್ ನೀಡಲು ಎಷ್ಟು ಲೀಟರ್ ಡೀಸೆಲ್ ಅಗತ್ಯ..?

Train Mileage Information: ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಎಷ್ಟು ಬಾರಿ ರೈಲುಗಳಲ್ಲಿ ಓರಾಯನಿಸಿದರು ಕೂಡ ಕೆಲ ಪ್ರಯಾಣಿಕರಿಗೆ ಈ ರೈಲಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ತಿಳಿದಿರುವುದಿಲ್ಲ.

ರೈಲಿನ ಕುರಿತು ಜನರಲ್ಲಿ ಸಾಕಷ್ಟು ಪ್ರಶ್ನೆಗಳಿರುತ್ತವೆ, ರೈಲಿನ ಮೈಲೇಜ್ ಎಷ್ಟು..? ಒಂದು ಕಿಲೋಮೀಟರ್ ಪ್ರಯಾಣಿಸಲು ಎಷ್ಟು ಡೀಸೆಲ್ ಖರ್ಚಾಗುತ್ತದೆ..? ಎನ್ನುವ ಪ್ರಶ್ನೆ ಮಾಡುವುದು ಸಹಜ. ಇನ್ನು ದೇಶದಲ್ಲಿ ಕಲ್ಲಿದ್ದಲಿನ ಹೊರತಾಗಿ ಡೀಸೆಲ್‌ ನಲ್ಲಿ ಚಲಿಸುವ ಅನೇಕ ರೈಲುಗಳಿವೆ. ಇದೀಗ ನಾವು ಈ ಲೇಖಾನದಲ್ಲಿ ರೈಲಿನ ಮೈಲೇಜ್ ನ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

Train Mileage Information
Image Credit: Aajtak

ರೈಲುಗಳ ಮೈಲೇಜ್ ಬಗ್ಗೆ ನಿಮಗೆ ತಿಳಿದಿದೆಯೇ…?
ರೈಲಿನ ಮೈಲೇಜ್ ಬಗ್ಗೆ ಹೇಳುವುದಾದರೆ, ವಾಹನಗಳಂತೆ ರೈಲಿನ ಮೈಲೇಜ್ ಸಹ ಅನೇಕ ಅಂಶಗಳ ಮೇಲೆ ಅವಲಂಭಿತವಾಗಿರುತ್ತದೆ. ರೈಲಿನ ಮೈಲೇಜ್ ಅನ್ನು ನೇರವಾಗಿ ಹೇಳುವುದು ತುಂಬಾ ಕಷ್ಟ. ಏಕೆಂದರೆ ರೈಲಿನ ಮೈಲೇಜ್ ಮಾರ್ಗ, ಪ್ಯಾಸೆಂಜರ್ ರೈಲು, ಎಕ್ಸ್‌ ಪ್ರೆಸ್ ಅಥವಾ ರೈಲಿನ ಕೋಚ್‌ ಗಳ ಸಂಖ್ಯೆಯನ್ನು ಅವಲಂಭಿಸಿರುತ್ತದೆ.

ರೈಲಿನ ಮೈಲೇಜ್‌ ನ ಅತಿದೊಡ್ಡ ಅಂಶವೆಂದರೆ ರೈಲಿನಲ್ಲಿರುವ ಕೋಚ್‌ ಗಳ ಸಂಖ್ಯೆ. ಕಡಿಮೆ ಕಂಪಾರ್ಟ್‌ ಮೆಂಟ್‌ ಗಳೊಂದಿಗೆ, ಎಂಜಿನ್‌ ನಲ್ಲಿ ಹೆಚ್ಚಿನ ಹೊರೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಂಜಿನ್ ನ ಶಕ್ತಿಯು ಹೆಚ್ಚಾಗುತ್ತದೆ. ಡೀಸೆಲ್ ಇಂಜಿನ್ ರೈಲಿನ ಮೈಲೇಜ್ ಅನ್ನು ಗಂಟೆಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

Train Mileage Latest News
Image Credit: tv9telugu

ರೈಲುಗಳು 1 ಕಿ.ಮೀ ಮೈಲೇಜ್ ನೀಡಲು ಎಷ್ಟು ಲೀಟರ್ ಡೀಸೆಲ್ ಅಗತ್ಯ..?
ಡೀಸೆಲ್ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ, ಟ್ಯಾಂಕ್ ಅನ್ನು 5,000 ಲೀಟರ್, 5,500 ಲೀಟರ್ ಮತ್ತು 6,000 ಲೀಟರ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ರೈಲಿನ ಹೊರೆಗೆ ಅನುಗುಣವಾಗಿ, ಪ್ರತಿ ಕಿ.ಮೀ.ಗೆ ಸರಾಸರಿ ಡೀಸೆಲ್ ಎಂಜಿನ್ ಅನ್ನು ನಿರ್ಧರಿಸಲಾಗುತ್ತದೆ.

Join Nadunudi News WhatsApp Group

12 ಬೋಗಿಗಳ ಪ್ಯಾಸೆಂಜರ್ ರೈಲು ಪ್ರತಿ ಕಿ.ಮೀ.ಗೆ 6 ಲೀಟರ್ ಮೈಲೇಜ್ ನೀಡುತ್ತದೆ. 24 ಬೋಗಿಗಳ ಎಕ್ಸ್‌ ಪ್ರೆಸ್ ರೈಲು 6 ಲೀಟರ್ ಗೆ 1 ಕಿ.ಮೀ ಮತ್ತು 12 ಬೋಗಿಗಳ ಎಕ್ಸ್‌ಪ್ರೆಸ್ ರೈಲು 4.50 ಲೀಟರ್ ಗೆ 1 ಕಿ.ಮೀ ಮೈಲೇಜ್ ನೀಡುತ್ತದೆ. ಅಲ್ಲದೆ ರೈಲುಗಳು WAG, WAP, WAM, WDG, WDP ವರ್ಗವನ್ನು ಅವಲಂಬಿಸಿ ಮೈಲೇಜ್ ನೀಡುತ್ತವೆ. ಈ ಎಲ್ಲ ಪದಗಳು ಕೂಡ ರೈಲುಗಳ ಎಂಜಿನ್ ನ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

Join Nadunudi News WhatsApp Group