Bill Reduce: ಈ ವಿಧಾನದ ಮೂಲಕ ಮನೆಯಲ್ಲಿ ವಿದ್ಯುತ್ ಬಳಸಿದರೆ ಅರ್ಧಕ್ಕಿಂತ ಕಡಿಮೆ ಬರುತ್ತದೆ ವಿದ್ಯುತ್ ಬಿಲ್

ಈ ಕೆಳಗಿನ ಕ್ರಮವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು

Tricks For Electricity Bill Saving: ಸದ್ಯ ರಾಜ್ಯದಲ್ಲಿ ಉಚಿತ ವಿದ್ಯುತ್ ಆರಂಭವಾದ ದಿನದಿಂದ ವಿದ್ಯುತ್ ಬೆಲೆ ಹೆಚ್ಚಳವಾಗುತ್ತಿದೆ. ವಿದ್ಯುತ್ ದರದ ಏರಿಕೆ ರಾಜ್ಯ ಸರ್ಕಾರದ Gruha Jyothi ಯೋಜನೆಯ ಲಾಭ ಪಡೆಯದವರ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ವಿದ್ಯುತ್ ದರದ ಏರಿಕೆ ಜನರಿಗೆ ಹೆಚ್ಚಿನ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಿದೆ ಎನ್ನಬಹುದು.

ಇನ್ನು ವಿದ್ಯುತ್ ದರ ಹೆಚ್ಚಿಗೆ ಬರಲು ಮೂಲ ಕಾರಣವೆಂದರೆ ಅದು ಮನೆಯಲ್ಲಿ ಬಳಸುವಂತಹ ಎಲೆಕ್ಟ್ರಾನಿಕ್ ವಸ್ತುಗಳಾಗಿವೆ. ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಫ್ಯಾನ್, ಎಸಿ, ಕೂಲರ್, ಇನ್ವರ್ಟರ್, ಮಿಕ್ಸಿ ಹೀಗೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು ನಿಮ್ಮ ಎಲೆಕ್ಟ್ರಿಸಿಟಿ ಬಿಲ್ ಅನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಯ ವಿದ್ಯುತ್ ಬಿಲ್ ಹೆಚ್ಚು ಬರುವುದನ್ನು ತಡೆಯಲು ಮಾರ್ಗವಿದೆ. ನೀವು ಈ ಕೆಳಗಿನ ಕ್ರಮವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.

Tricks For Electricity Bill Saving
Image Credit: 5bestthings

ಈ ವಿಧಾನದ ಮೂಲಕ ಮನೆಯಲ್ಲಿ ವಿದ್ಯುತ್ ಬಳಸಿದರೆ ಅರ್ಧಕ್ಕಿಂತ ಕಡಿಮೆ ಬರುತ್ತದೆ ವಿದ್ಯುತ್ ಬಿಲ್
•ವಿದ್ಯುತ್ ಬಿಲ್ ಕಡಿಮೆ ಮಾಡಲು ಮನೆಯಲ್ಲಿರುವ ಟ್ಯೂಬ್ ಲೈಟ್ ತೆಗೆದು ಎಲ್ ಇಡಿ ಬಲ್ಬ್ ಅಳವಡಿಸಬೇಕು. 2 ವ್ಯಾಟ್ ನಿಂದ 40 ವ್ಯಾಟ್ ವರೆಗಿನ ಸಾಮರ್ಥ್ಯದ LED Bulbಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಖರೀದಿಸಬಹುದು. ಈ ಸಾಧನಗಳನ್ನು ಬಳಸುವುದರಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. ಇದು ನಿಮ್ಮ ವಿದ್ಯುತ್ ಬಿಲ್ ಅನ್ನು ಸುಧಾರಿಸಬಹುದು.

•ಇನ್ನು ಫ್ರಿಜ್ ಖಾಲಿಯಾಗಿದ್ದರೆ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ. ಆದ್ದರಿಂದ, ನೀವು ಯಾವಾಗಲೂ ಹಣ್ಣುಗಳು ಮತ್ತು ತರಕಾರಿಗಳನ್ನು ರೆಫ್ರಿಜರೇಟರ್ ನಲ್ಲಿ ಇಡಬೇಕು. ಅಲ್ಲದೆ ಫ್ರಿಡ್ಜ್ ಅನ್ನು ಯಾವಾಗಲೂ ಸಾಮಾನ್ಯ ಮೋಡ್‌ನಲ್ಲಿ ಇಡುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ.

•ರಾತ್ರಿ ಮಲಗುವಾಗ ಅನೇಕರು ಮನೆಯಲ್ಲಿ ದೀಪಗಳನ್ನು ಹಚ್ಚುತ್ತಾರೆ. ಇದು ಅನಗತ್ಯವಾಗಿ ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ, ಆದ್ದರಿಂದ ಯಾವಾಗಲೂ ಬಲ್ಬ್ಗಳು ಮತ್ತು ದೀಪಗಳನ್ನು ಸ್ವಿಚ್ ಆಫ್ ಮಾಡಿ ಮಲಗಿಕೊಳ್ಳಿ.

Join Nadunudi News WhatsApp Group

Best Tips and Tricks for Saving Money on Electricity Bill
Image Credit: Onaplatterofgold

•ನಿಮ್ಮ ಮನೆಯಲ್ಲಿ ಹಳೆಯ ಫ್ಯಾನ್‌ ಗಳನ್ನು ಅಳವಡಿಸಿದ್ದರೆ, ಅವುಗಳನ್ನು ತಕ್ಷಣವೇ ಬದಲಾಯಿಸಬೇಕು. ಪ್ರಸ್ತುತ ಹೊಸ ತಂತ್ರಜ್ಞಾನದ BLDS ಫ್ಯಾನ್‌ ಗಳು ಮಾರುಕಟ್ಟೆಗೆ ಬಂದಿವೆ. ಇವುಗಳು 40 ವ್ಯಾಟ್‌ ಗಳವರೆಗೆ ಇರುತ್ತವೆ ಮತ್ತು ಅವುಗಳ ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ.

•ಸೌರ ಫಲಕಗಳಿಂದ ಉತ್ಪತ್ತಿಯಾಗುವ ಸೌರ ಶಕ್ತಿಯನ್ನು ಬಳಸಿ. ಇದರೊಂದಿಗೆ ನಾವು ಮನೆಯಲ್ಲಿ ವಿದ್ಯುತ್ ಬಳಕೆಯನ್ನು ಪೂರೈಸಬಹುದು. ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ, ನೀವು ದಿನವಿಡೀ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.

•ನಿಮ್ಮ ಮನೆಯಲ್ಲಿ ಸಾಮಾನ್ಯ ಕಿಟಕಿ ಅಥವಾ ಸ್ಪ್ಲಿಟ್ ಎಸಿ ಇದ್ದರೆ, ನೀವು ಅದನ್ನು ತೆಗೆದು ತಕ್ಷಣ ಇನ್ವರ್ಟರ್ ಎಸಿ ಅಳವಡಿಸಿಕೊಳ್ಳಬೇಕು. ಇನ್ವರ್ಟರ್ ಎಸಿ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುತ್ತದೆ.

Join Nadunudi News WhatsApp Group