Bike Price Hike: 2024 ರ ಆರಂಭದಲ್ಲಿಯೇ ಬೈಕ್ ಪ್ರಿಯರಿಗೆ ಬೇಸರದ ಸುದ್ದಿ, ಈ ಬೈಕ್ ಬೆಲೆಯಲ್ಲಿ ಭರ್ಜರಿ ಏರಿಕೆ

2024 ರ ಆರಂಭದಲ್ಲೇ ಜನಪ್ರಿಯ ಬೈಕ್ ಬೆಲೆ ಏರಿಕೆ, ಬೇಸರ ಹೊರಹಾಕಿದ ಗ್ರಾಹಕರು

Triumph Speed 400 Bike Price Hike: ಹೊಸ ವರ್ಷದ ಆರಂಭದಲ್ಲೇ ಈ ಬೈಕ್ ಖರೀದಿ ಮಾಡುವವರಿಗೆ ಶಾಕಿಂಗ್ ಸುದ್ದಿ, ಅದೇನೆಂದರೆ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕ್ ಬೆಲೆ ಹೆಚ್ಚಾಗಿದ್ದು, ಈ ಬೈಕ್ ಖರೀದಿ ಮಾಡುವವರಿಗೆ ಇದು ಬೇಸರ ತರಿಸಿದೆ.

ದೇಶದಲ್ಲಿ ಪ್ರಸಿದ್ದಿ ಪಡೆದ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕನ್ನು ಬಿಡುಗಡೆಗೊಳಿಸಿತು. ಆದರೆ ಈಗ ಪರಿಚಯಾತ್ಮಕ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಈ ಬೈಕ್ ಅನ್ನು ಖರೀದಿ ಮಾಡಬೇಕಾಗಿದೆ. ಹೌದು ಕಂಪನಿ ತನ್ನ ಬೈಕ್ ಬೆಲೆಯನ್ನು ಏರಿಕೆ ಮಾಡಿದ್ದು ಜನರು ಈ ವರ್ಷದಲ್ಲಿ ಹೆಚ್ಚಿನ ಬೆಲೆ ಕೊಟ್ಟು ಬೈಕ್ ಖರೀದಿ ಮಾಡಬೇಕಾಗಿದೆ

Triumph Speed 400 Bike
Image Credit: Bikewale

Triumph Speed 400 Bike Feature

ಟ್ರಯಂಫ್ ಸ್ಪೀಡ್ 400 ಬೈಕ್ ಮುಂಭಾಗದಲ್ಲಿ 43mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಿಂದ ಒಳಗೊಂಡಿದೆ. ಇನ್ನು ಟ್ರಯಂಫ್ ಸ್ಪೀಡ್ 400 ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹಾಯವನ್ನು ಸಹ ಹೊಂದಿದೆ.ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.

Triumph Speed 400Bike Engine capacity
ಹೊಸ ಟ್ರಯಂಫ್ ಸ್ಪೀಡ್ 400 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

Join Nadunudi News WhatsApp Group

Triumph Speed 400 Bike Price In India
Image Credit: Bikedekho

Triumph Speed 400 Bike Price 
ಟ್ರಯಂಫ್ ಕಂಪನಿಯು ತನ್ನ ಈ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಬೈಕ್ ನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.23 ಲಕ್ಷವಾಗಿತ್ತು. ಈ ಪರಿಚಯಾತ್ಮಕ ಬೆಲೆಯು ಈಗ ಡಿಸೆಂಬರ್ 31, 2023 ರವರೆಗೆ ವಿಸ್ತರಿಸಲಾಗಿತ್ತು. ಹೊಸ ವರ್ಷದಿಂದ ಟ್ರಯಂಫ್ ಸ್ಪೀಡ್ 400 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 2.33 ಲಕ್ಷವಾಗಿದೆ. ಹೌದು ಬೈಕ್ ಬೆಲೆಯಲ್ಲಿ ಕಂಪನಿ 10000 ರೂಪಾಯಿ ಏರಿಕೆ ಮಾಡಿದೆ.

Join Nadunudi News WhatsApp Group