TVS NTorq: ರೇಸಿಂಗ್ ಸ್ಕೂಟರ್ ಎಂದು ಫೇಮಸ್ ಆಗಿರುವ ಈ TVS ಬೆಲೆ ಅಗ್ಗವಾಗಿದೆ, ಕೇವಲ 30 ಸಾವಿರಕ್ಕೆ ಖರೀದಿಸಿ

ಕೇವಲ 30 ಸಾವಿರಕ್ಕೆ ಖರೀದಿಸಿ TVS NTorq

TVS NTorq Price And Feature: ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ (TVS) ಮೋಟಾರ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿದೆ.ಹೊಸ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಕಂಪನಿಯು ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಈಗಾಗಲೇ ಟಿವಿಎಸ್ ವಿಭಿನ್ನ ಮಾದರಿಯ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ TVS NTorq ಸ್ಕೂಟರ್ ಗೆ ಬೇಡಿಕೆ ಹೆಚ್ಚಿದೆ. ಸದ್ಯ ಕಂಪನಿಯು ಈ ಜನಪ್ರಿಯ ಸ್ಕೂಟರ್ ಖರೀದಿಗೆ ಒಂದೊಳ್ಳೆ ಅವಕಾಶ ನೀಡುತ್ತಿದೆ. ನೀವು ಅತಿ ಕಡಿಮೆ ಬೆಲೆಗೆ TVS NTorq ಸ್ಕೂಟರ್ ಅನ್ನು ಖರೀದಿಸಬಹುದು.

TVS NTorq Scooter Mileage
Image Credit: Bikewale

ರೇಸಿಂಗ್ ಸ್ಕೂಟರ್ ಎಂದು ಫೇಮಸ್ ಆಗಿರುವ ಈ TVS ಬೆಲೆ ಅಗ್ಗವಾಗಿದೆ
ಟಿವಿಎಸ್ ಎನ್‌ಟಾರ್ಕ್ ಸ್ಪೋರ್ಟಿ ವಿನ್ಯಾಸದೊಂದಿಗೆ ಕಂಪನಿಯ ಉತ್ತಮ ಸ್ಕೂಟರ್ ಆಗಿದೆ. ಇದು ಫ್ಯೂಯಲ್ ಇಂಜೆಕ್ಟೆಡ್ ತಂತ್ರಜ್ಞಾನವನ್ನು ಆಧರಿಸಿದ 124.8 ಸಿಸಿ ಎಂಜಿನ್ ಹೊಂದಿದೆ. ಇದು 9.51Ps ನ ಗರಿಷ್ಠ ಶಕ್ತಿಯನ್ನು ಮತ್ತು 10.6Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈ ಸ್ಕೂಟರ್‌ ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸಂಯೋಜನೆಯನ್ನು ಸ್ಥಾಪಿಸಿದೆ. ಇನ್ನು ಈ ಸ್ಕೂಟರ್ ಪ್ರತಿ ಲೀಟರ್‌ ಗೆ 54.33 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಟಿವಿಎಸ್ ಎನ್‌ ಟಾರ್ಕ್ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಈ ಸ್ಕೂಟರ್ ನಿಮಗೆ 84,636 ರಿಂದ 1.05 ಲಕ್ಷ ರೂ. ಬೆಲೆಯಲ್ಲಿ ಸಿಗಲಿದೆ. ಆದಾಗ್ಯೂ, ನೀವು ಬಯಸಿದರೆ, ನೀವು ಇದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಅನೇಕ ಆನ್‌ ಲೈನ್ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮತ್ತು ಮಾರಾಟದ ವೆಬ್‌ ಸೈಟ್‌ ಗಳು ಈ ಸ್ಕೂಟರ್‌ ನಲ್ಲಿ ಆಕರ್ಷಕ ಡೀಲ್‌ಗಳನ್ನು ನೀಡುತ್ತಿವೆ.

TVS NTorq Price In India
Image Credit: Bikewale

ಕೇವಲ 30 ಸಾವಿರಕ್ಕೆ ಖರೀದಿಸಿ
ನೀವು TVS Ntorq ಅನ್ನು 30,000 ರೂ.ಗೆ ಖರೀದಿಸಬಹುದು. ಇದಕ್ಕಾಗಿ ನೀವು Olx ವೆಬ್‌ ಸೈಟ್‌ಗೆ ಭೇಟಿ ನೀಡಬೇಕು. Ntorq ಸ್ಕೂಟರ್‌ನ 2018 ಮಾದರಿಯನ್ನು ಈ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಕೆಂಪು ಬಣ್ಣದ ಸ್ಕೂಟರ್ ಆಗಿದ್ದು, ಕೇವಲ 2,500 ಕಿಲೋಮೀಟರ್ ಪ್ರಯಾಣಿಸಿದೆ. ಇದಲ್ಲದೆ, ನೀವು ಈ ವೆಬ್‌ಸೈಟ್‌ನಲ್ಲಿ ಹಲವು ಬಣ್ಣಗಳು ಮತ್ತು ಬೆಲೆಗಳಲ್ಲಿ ಸೆಕೆಂಡ್ ಹ್ಯಾಂಡ್ Ntorq ಸ್ಕೂಟರ್‌ ಗಳನ್ನು ಸಹ ಪಡೆಯುತ್ತೀರಿ.

Join Nadunudi News WhatsApp Group

TVS NTorq Price And Features
Image Credit: Bikewale

Join Nadunudi News WhatsApp Group