TVS Radeon: ಕೈಗೆಟುಕುವ ಬೆಲೆಗೆ ಇನ್ನೊಂದು ಬೈಕ್ ಲಾಂಚ್ ಮಾಡಿದ TVS, ಸ್ಪ್ಲೆಂಡರ್ ಗಿಂತ ಹೆಚ್ಚು ಮೈಲೇಜ್.

ಇದೀಗ TVS Motor ತನ್ನ Radeon ಬೈಕ್ ನ ಖರೀದಿಗೆ ಬಂಪರ್ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ.

TVS Radeon EMI Offer: ಸಾಮಾನ್ಯವಾಗಿ ಯುವಕರಿಗೆ ಬೈಕ್ ಮೇಲೆ ಹೆಚ್ಚಿನ ಕ್ರೇಜ್ ಇರುತ್ತದೆ. ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಬೈಕ್ ಗಳು ಪರಿಚಯವಾಗುತ್ತಿದ್ದಂತೆ ಯುವಕರಿಗೆ ಬೈಕ್ ಖರೀದಿಸುವ ಆಸಕ್ತಿ ಹೆಚ್ಚುತ್ತದೆ. ಆದರೆ ಇತ್ತೀಚಿಗೆ ಬೈಕ್ ಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಅಳವಡಿಸಿರುವ ಕಾರಣ ಬೆಲೆ ಕೊಂಚ ದುಬಾರಿಯಾಗಿರುತ್ತದೆ. ಬೈಕ್ ನ ಬೆಲೆ ಅಧಿಕವಾದರೂ ಕೂಡ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಮಧ್ಯಮ ವರ್ಗದವರಿಗೆ ದುಬಾರಿ ಬೆಲೆಯ ಬೈಕ್ ಖರೀದಿ ಕಷ್ಟವಾಗುತ್ತದೆ ಎನ್ನಬಹುದು. ಹೀಗಾಗಿ ಸಾಕಷ್ಟು ಜನರು ತಮ್ಮ ಹೊಸ ಬೈಕ್ ಖರೀದಿಯ ಆಸೆಯನ್ನು ಕೈಬಿಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಬೈಕ್ ಖರೀದಿಗೆ ಆಕರ್ಷಕ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ. ಇದೀಗ TVS Motor ತನ್ನ Radeon ಬೈಕ್ ನ ಖರೀದಿಗೆ ಬಂಪರ್ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ.

TVS Radeon EMI Offer
Image Credit: Autocarindia

ಮಾರುಕಟ್ಟೆಯಲ್ಲಿ TVS Radeon ಬೈಕ್ ನ ಬೆಲೆ ಎಷ್ಟು..?
ಹೊಸ TVS Radeon ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ. ಟಿವಿಎಸ್ ರೇಡಿಯನ್ ಡ್ಯುಯಲ್ ಟೋನ್ ಡಿಸ್ಕ್ ಬ್ರೇಕ್  ಉನ್ನತ ಮಾದರಿಯಾಗಿದೆ. ಈ ಟಾಪ್ ಮಾಡೆಲ್‌ನ ಆರಂಭಿಕ ಬೆಲೆ  79,844 ರೂ. ಆಗಿದ್ದು ಆನ್ ರೋಡ್ ನಂತರ  92,475 ರೂ. ಆಗಲಿದೆ. ಇನ್ನು ಬೈಕ್  ಖರೀದಿಸುವಾಗ ಅದರ ಎಂಜಿನ್ ಹಾಗು ಮೈಲೇಜ್ ಬಗ್ಗೆ ಗಮನ ಹರಿಸುವುದು ಸಹಜ.

ರೇಡಿಯನ್ ಬೈಕ್  ಸಿಂಗಲ್ ಸಿಲಿಂಡರ್ 109.7cc ಎಂಜಿನ್ ಹೊಂದಿದ್ದು, ಇದು 8.19 PS ಪವರ್ ಮತ್ತು 8.7 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ ನೊಂದಿಗೆ 4 ಸ್ಪೀಡ್ ಗೇರ್‌ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕ್ ಪ್ರತಿ ಲೀಟರ್‌ ಗೆ 64 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

TVS Radeon Bike Price
Image Credit: Bikewale

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ TVS Radeon
Halogen Headlight, LED DRL, Full Digital Meter, Bluetooth Feature, Attractive Tank Call, ETFI Fuel System, Large Seat, Mobile Charging Facility, Large Wheels, Analog Meter, Digital Cluster, Inbuilt Service Indicator, Low Battery Indicator ವೈಶಿಷ್ಟ್ಯಗಳನ್ನು ಹೊಂದಿರುವ TVS Radeon ಬೈಕ್ ಅನ್ನು ನೀವು ಕೇವಲ 1 ಲಕ್ಷ ಡೌನ್ ಪೇಮೆಂಟ್ ನ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

ನೀವು ಬ್ಯಾಂಕುಗಳಲ್ಲಿ 3 ವರ್ಷದ ಅವಧಿಗೆ 65,943 ಸಾಲವನ್ನು ಶೇ. 9.7 ರ ಬಡ್ಡಿದರದಲ್ಲಿ ಪಡೆಯಬಹುದಾಗಿದೆ. ಇನ್ನು ಮಾಸಿಕ 2129 ರೂ. ಪಾವತಿಸುವ ಮೂಲಕ ನೀವು ಮೂರು ವರ್ಷಗಳಲ್ಲಿ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group