TVS Sport: ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ ಈ ಸ್ಪೋರ್ಟ್ಸ್ ಬೈಕ್, ದಿನಪೂರ್ತಿ ಓಡಿಸುವಷ್ಟು ಮೈಲೇಜ್ ಕೊಡುತ್ತೆ

ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ ಈ ಸ್ಪೋರ್ಟ್ಸ್ ಬೈಕ್

TVS Sport Second Hand Model: ದ್ವಿಚಕ್ರ ವಾಹನ ವಿಭಾಗದಲ್ಲಿ ಟಿವಿಎಸ್ ಸ್ಪೋರ್ಟ್‌ ನ ಸ್ಪೋರ್ಟಿ ಲುಕಿಂಗ್ ಬೈಕ್ ಸಾಕಷ್ಟು ಜನಪ್ರಿಯವಾಗಿದೆ. ಈ ಬೈಕ್‌ ಉತ್ತಮ ಕಾರ್ಯಕ್ಷಮತೆಯ ಜೊತೆಗೆ ಹೆಚ್ಚಿನ ಮೈಲೇಜ್ ನೀಡುತ್ತದೆ. ಈ ಬೈಕ್ ಅನ್ನು ನೀವು ಕಡಿಮೆ ಬೆಲೆಗೆ ಖರೀದಿಸಬಹುದು.

ವಿವಿಧ ಬೈಕ್ ತಯಾರಕ ಕಂಪನಿಗಳು ಬೈಕ್ ಖರೀದಿಗೆ ಗ್ರಾಹಕರಿಗೆ ಸಹಾಯವಾಗಲು ಹಣಕಾಸು ಯೋಜನೆಗಳನ್ನು ನೀಡುತ್ತಿವೆ. ನೀವು TVS ಕಂಪನಿಯ ಈ ಟಾಪ್ ಮಾಡೆಲ್ ಬೈಕ್ ಅನ್ನು ಹಣಕಾಸು ಯೋಜನೆಗಳ ಜೊತೆಗೆ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕೂಡ ಖರೀದಿಸಬಹುದಾಗಿದೆ.

TVS Sport Second Hand Model
Image Credit: Jansatta

ದಿನಪೂರ್ತಿ ಓಡಿಸುವಷ್ಟು ಮೈಲೇಜ್ ಕೊಡುತ್ತೆ ಈ ಬೈಕ್
TVS ಸ್ಪೋರ್ಟ್ ಬೈಕ್ ನಿಮಗೆ ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ.  ಈ ಬೈಕ್ ಫ್ಯುಯಲ್ ಇಂಜೆಕ್ಟೆಡ್ ತಂತ್ರಜ್ಞಾನ ಆಧಾರಿತ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಗರಿಷ್ಠ 8.19Ps ಶಕ್ತಿಯನ್ನು ಮತ್ತು 8.7Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಉತ್ತಮ ಬ್ರೇಕಿಂಗ್‌ಗಾಗಿ ಡ್ರಮ್ ಬ್ರೇಕ್‌ ಗಳ ಸಂಯೋಜನೆಯೊಂದಿಗೆ ಬರುತ್ತದೆ. ಈ ಸ್ಪೋರ್ಟ್ಸ್ ಬೈಕ್ ನಿಮಗೆ ಪ್ರತಿ ಲೀಟರ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ನೀವು ಈ ಬೈಕ್ ಅನ್ನು ಮಾರುಕಟ್ಟೆಯಿಂದ 59,431 ರಿಂದ 70,773 ರೂ.ಗೆ ಖರೀದಿಸಬೇಕಾಗುತ್ತದೆ. ಆದರೆ ನಿಮ್ಮ ಬಜೆಟ್ ಇದಕ್ಕಿಂತ ಕಡಿಮೆಯಿದ್ದರೆ ನೀವು ಅದರ ಹಳೆಯ ಮಾದರಿಯನ್ನುಖರೀದಿಸಬಹುದು. ಆನ್‌ ಲೈನ್ ವೆಬ್ ಸೈಟ್ ನಿಮಗೆ TVS ಸ್ಪೋರ್ಟ್ಸ್ ನ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಲು  ಅತ್ಯುತ್ತಮ ಡೀಲ್‌ ಗಳನ್ನು ನೀಡುತ್ತಿದೆ. ಅದರ ಬಗ್ಗೆ ವಿವರ ಇಲ್ಲಿದೆ ನೋಡಿ.

TVS Sport Bike
Image Credit: India Mart

ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ ಈ ಸ್ಪೋರ್ಟ್ಸ್ ಬೈಕ್
•ನೀವು ಕ್ವಿಕರ್ ವೆಬ್‌ ಸೈಟ್‌ ನಿಂದ ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಈ 2010 ಮಾಡೆಲ್ ಬೈಕಿನ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ. ಇದರ ಮಾಲೀಕರು 18,500 ಕಿ.ಮೀ ಓಡಿಸಿ ದೆಹಲಿಯಲ್ಲಿ ನೋಂದಾಯಿಸಿದ್ದಾರೆ. ನೀವು 2010 ರ TVS ಸ್ಪೋರ್ಟ್ಸ್ ಬೈಕ್ ಅನ್ನು ಕೇವಲ 14,000 ರೂ. ಗೆ ಕ್ವಿಕರ್ ವೆಬ್ ಸೈಟ್ ನಲ್ಲಿ ಖರೀದಿಸಬಹುದು.

Join Nadunudi News WhatsApp Group

•ಕಡಿಮೆ ಬಜೆಟ್‌ ನಲ್ಲಿ ಈ ಬೈಕ್ ಉತ್ತಮ ಆಯ್ಕೆಯಾಗಿದೆ. 2013ರ ಮಾದರಿಯ ಟಿವಿಎಸ್ ಸ್ಪೋರ್ಟ್ ಬೈಕ್ ಅನ್ನು ಕ್ವಿಕರ್ ವೆಬ್‌ ಸೈಟ್‌ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕನ್ನು 46,000 ಕಿಲೋಮೀಟರ್‌ ಗಳವರೆಗೆ ಓಡಿಸಲಾಗಿದೆ ಮತ್ತು ಕೇವಲ  26,000 ರೂ ಬೆಲೆಯಲ್ಲಿ ಇಲ್ಲಿ ಖರೀದಿಗೆ ಲಭ್ಯವಿದೆ.

TVS Sport Bike Price In India
Image Credit: TVS Motor

Join Nadunudi News WhatsApp Group