TVS Bike: ದಿನಪೂರ್ತಿ ಸುತ್ತಾಡಿದರು ಪೆಟ್ರೋಲ್ ಖಾಲಿಯಾಗಲ್ಲ, ಈ TVS ಮೈಲೇಜ್ ಬೈಕ್ ಖರೀದಿಗೆ ಜನರ ಕ್ಯೂ

ಅತಿ ಹೆಚ್ಚು ಮೈಲೇಜ್ ನೀಡಲಿದೆ TVS ನ ಈ ಬೈಕ್

TVS Top Best Mileage Bike: ಸಾಮಾನ್ಯವಾಗಿ ದೂರದ ಪ್ರಯಾಣಕ್ಕೆ ಹಾಗೂ ನಿತ್ಯದ ಪ್ರಯಾಣಕ್ಕಾಗಿ ಜನರು ಹೆಚ್ಚಿನ ಮೈಲೇಜ್ ಇರುವ ಬೈಕ್ ಗಳನ್ನೂ ಹುಡುಕುತ್ತಾರೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಪಟ್ಟಿಯಲ್ಲಿ TVS ಕಂಪನಿಯು ಅಗ್ರಸ್ಥಾನದಲ್ಲಿದೆ ಎನ್ನಬಹುದು.

ಜನರು ಹೆಚ್ಚಿನ ಸಂಖ್ಯೆಯಲ್ಲಿ TVS ಬೈಕ್ ಗಳನು ಖರೀದಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ TVS ಕಂಪನಿಯ ಅತಿ ಹೆಚ್ಚು ಮೈಲೇಜ್ ನೀಡುವ ಸಾಕಷ್ಟು ಬೈಕ್ ಗಳಿವೆ. ನಾವೀಗ ಈ ಲೇಖನದಲ್ಲಿ TVS ಕಂಪನಿಯ ಹೆಚ್ಚು ಮೈಲೇಜ್ ನೀಡುವ ಟಾಪ್ ಮಾಡೆಲ್ ಬೈಕ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಖರೀದಿಗಾಗಿ ಯೋಜನೆ ಹಾಕಿಕೊಂಡಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

TVS Sports Bike Mileage
Image Credit: Indiamart

ಅತಿ ಹೆಚ್ಚು ಮೈಲೇಜ್ ನೀಡಲಿದೆ TVS ನ ಈ ಬೈಕ್
•TVS Sports Bike
ಟಿವಿಎಸ್ ಸ್ಪೋರ್ಟ್ ಮೋಟಾರ್ ಬೈಕ್ ನಿಮಗೆ ದಿನನಿತ್ಯ ಪ್ರಯಾಣ ಮಾಡಲು ಬೆಸ್ಟ್ ಆಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 66,320 ರಿಂದ 71,023 ರೂ. ನಿಗದಿಯಾಗಿದೆ. ಇದು 109.7 cc, ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು 8.19 PS ಗರಿಷ್ಠ ಶಕ್ತಿ ಮತ್ತು 8.7 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ ಮತ್ತು ಪ್ರತಿ ಲೀಟರ್ ಗೆ 70 km ಮೈಲೇಜ್ ನೀಡುತ್ತದೆ. ಈ ಟಿವಿಎಸ್ ಸ್ಪೋರ್ಟ್ ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಕರ್ಷಕ ಹೆಡ್ ಲೈಟ್, ಎಲ್ ಇಡಿ ಡಿಆರ್ ಎಲ್ ಸೇರಿದಂತೆ ವಿವಿಧ ಫೀಚರ್ ಗಳನ್ನು ಇದು ಹೊಂದಿದೆ.

TVS Star City Plus
Image Credit: Bikewale

•TVS Star City Plus
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ರೂ. 77,138 ರಿಂದ ರೂ.80,288 ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 109 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 8.08 ಪಿಎಸ್ ಗರಿಷ್ಠ ಶಕ್ತಿ ಮತ್ತು 8.7 ಎನ್ ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಹೊಂದಿದೆ. ಸ್ಟಾರ್ ಸಿಟಿ ಪ್ಲಸ್ 83.09 km ಮೈಲೇಜ್ ನೀಡುತ್ತದೆ ಮತ್ತು 90 kmph ಗರಿಷ್ಠ ವೇಗವನ್ನು ಹೊಂದಿದೆ. ಎಲ್‌ಇಡಿ ಹೆಡ್ ಲೈಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

•TVS Raider
ಟಿವಿಎಸ್ ರೈಡರ್ ಬೈಕ್ ನ ಎಕ್ಸ್ ಶೋ ರೂಂ ಬೆಲೆ 98,709 ರಿಂದ 1.08 ಲಕ್ಷ ರೂ. ಆಗಿದೆ. ಇದು 124.8 cc ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11.38 PS ಗರಿಷ್ಠ ಶಕ್ತಿಯನ್ನು ಮತ್ತು 11.2 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ ಮತ್ತು 71.94 kmpl ಮೈಲೇಜ್ ನೀಡುತ್ತದೆ. ಈ ಟಿವಿಎಸ್ ರೈಡರ್ ಇಕೋ, ಸ್ಪೋರ್ಟ್ಸ್ ರೈಡಿಂಗ್ ಮೋಡ್ ಆಯ್ಕೆಯನ್ನು ಪಡೆಯುತ್ತದೆ. ಇದು ಎಲ್ಇಡಿ ಹೆಡ್ಲೈಟ್, ಹ್ಯಾಲೊಜೆನ್ ಸೂಚಕಗಳು, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Join Nadunudi News WhatsApp Group

TVS Raider Bike
Image Credit: Rushlane

Join Nadunudi News WhatsApp Group