TVS: 60 Km ಮೈಲೇಜ್ ಮತ್ತು ಕಡಿಮೆ ಬೆಲೆ, ಬಡವರ ಬಂದು ಅನಿಸಿಕೊಂಡಿದೆ ಈ ಹೊಸ ಬೈಕ್.

ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲು ತಯಾರಿ ನೆಡೆಸುತ್ತಿರುವ tvs ನ ಹೊಚ್ಚ ಹೊಸ ಬೈಕ್.

TVS Victor 2023: ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ವಿವಿಧ ಮಾದರಿಯ ಪೆಟ್ರೋಲ್ ಚಾಲಿತ ವಾಹನಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದೀಗ ಟಿವಿಎಸ್ ಮೋಟಾರ್ (TVS Motor) ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಸಜ್ಜಾಗಿದೆ. ಟಿವಿಎಸ್ ಇದೀಗ ತನ್ನ ಹೊಚ್ಚ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿದೆ ಹೊಸ ಬೈಕ್
ಸದ್ಯದಲ್ಲೇ ಟಿವಿಎಸ್ ಮೋಟಾರ್ ನ ಹೊಸ ಮಾದರಿಯ ಬೈಕ್ ಮಾರುಕಟ್ಟೆಗೆ ಬಂದು ಗ್ರಾಹಕರನ್ನು ಸೆಳೆಯಲಿದೆ. ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.

TVS Victor Bike Price and Features
Image Credit: Bikedekho

ಬೇಡಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಿ ತನ್ನ ಮಾರಾಟವನ್ನು ಕೂಡ ಹೆಚ್ಚಿಸಿಕೊಂಡಿದೆ. ಇದೀಗ ವರದಿಗಳ ಪ್ರಕಾರ ಟಿವಿಎಸ್ ಮೋಟಾರ್ ತನ್ನ ಟಿವಿಎಸ್ ವಿಕ್ಟರ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

ಟಿವಿಎಸ್ ವಿಕ್ಟರ್ ಬೈಕ್ (TVS Victor) 
ಟಿವಿಎಸ್ ವಿಕ್ಟರ್ ಬೈಕ್ 124.5 cc BS 4 ಬಲಿಷ್ಠ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11 PS ಪವರ್ ಮತ್ತು 11 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ. ಈ ಬೈಕ್ ನಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನೂ ಸುರಕ್ಷತೆಗಾಗಿ ನೀಡಲಾಗಿದೆ.

Join Nadunudi News WhatsApp Group

TVS Victor Bike Price and Features
Image Credit: Autocarindia

ಟಿವಿಎಸ್ ವಿಕ್ಟರ್ ಬೈಕ್ ನ ವಿಶೇಷತೆ
ಈ ಹೊಸ ಮಾದರಿಯ ಬೈಕ್ ನಲ್ಲಿ ಮೊಬೈಲ್ ಸಂಪರ್ಕದ ಜೊತೆಗೆ ರೈಡಿಂಗ್ ಮೋಡ್ ಮತ್ತು ಇಂಧನದ ಗೇಜ್ ಅನ್ನು ನೀಡಲಾಗಿದೆ. ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಆಡಿಯೋ ಮೀಟರ್, ಡಿಜಿಟಲ್ ಟ್ರಿಪ್, ಸ್ಟ್ಯಾಂಡ್ ಇಂಡಿಕೇಟರ್ ಡಿಜಿಟಲ್ ಟ್ಯಾಕೋಮೀಟರ್ ಮತ್ತು ಎಂಜಿನ್ ಆಫ್ ಬಟನ್ ಸೇರಿದಂತೆ ಇನ್ನಿತರ ಹತ್ತು ಹಲವು ಫೀಚರ್ ಸೇರಿಕೊಂಡಿದೆ.

ಟಿವಿಎಸ್ ವಿಕ್ಟರ್ ಬೈಕ್ ನ ಬೆಲೆ
ಟಿವಿಎಸ್ ವಿಕ್ಟರ್ ಬೈಕ್ ಕಡಿಮೆ ಬೆಲೆಯದ್ದಾಗಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ. ಈ ಮೊದಲ ಮಾದರಿಯ ಟಿವಿಎಸ್ ವಿಕ್ಟರ್ ಬೈಕ್ 55 ರಿಂದ 56 ಕಿಲೋಮೀಟರ್ ಮೈಲೇಜ್ ನೀಡುತ್ತಿತ್ತು.

TVS Victor Bike Price and Features
Image Credit: Indiacarnews

ಆದರೆ ಪ್ರಸ್ತುತ ಪ್ರತಿ ಲೀಟರ್ ಗೆ 60 ರಿಂದ 65 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ. ಈ ಬೈಕ್ ನಲ್ಲಿ 480 ಕಿಲೋಮೀಟರ್ ಪ್ರಯಾಣ ಮಾಡಬಹುದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ವಿಕ್ಟರ್ ಬೈಕ್ ನ ಬೆಲೆ 85,000 ರೂ. ಆಗಿದೆ.

Join Nadunudi News WhatsApp Group