Best Scooter: ನಿಮ್ಮ ತಂದೆಗೆ ಇಂದೇ ಬುಕ್ ಮಾಡಿ ಈ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್, 110 Km ಮೈಲೇಜ್.

ಕೇವಲ 50 ಸಾವಿರ ಬಜೆಟ್ ನಲ್ಲಿ ಸಿಗಲಿದೆ ಈ ಬೆಸ್ಟ್ ಸ್ಕೂಟರ್

TVS XL 100 And Kinetic E-Luna: ದಿನ ನಿತ್ಯದ ಬಳಕೆಗೆ ಹೆಚ್ಚಿನ ಜನರು ದ್ವಿಚಕ್ರ ವಾಹನವನ್ನು ಬಳಸುತ್ತಾರೆ. ಇನ್ನು ಪ್ರತಿನಿತ್ಯದ ಬಳಸುವ ದ್ವಿಚಕ್ರ ವಾಹನಗಳು ಹೆಚ್ಚಿನ ಮೈಲೇಜ್ ನೀಡಿದರೆ ಮಾತ್ರ ಗ್ರಾಹಕರನ್ನು ಅಂತಹ ವಾಹನವನ್ನು ಖರೀದಿಸಲು ಬಯಸುತ್ತಾರೆ.

ಇನ್ನು ಮಾರುಕಟ್ಟೆಯಲ್ಲಿ ಈಗಂತೂ ಲಕ್ಷ ಬಜೆಟ್ ನಲ್ಲಿ ಹೆಚ್ಚಿನ ದ್ವಿಚಕ್ರ ವಾಹನಗಳು ಬಿಡುಗಡೆ ಆಗುತ್ತಿದೆ. ಆದರೆ ಈ ಎರಡು ಟಾಪ್ ವೇರಿಯೆಂಟ್ ಸ್ಕೂಟರ್ ಗಳು ನಿಮಗೆ ಕೇವಲ 50 ಸಾವಿರ ಬಜೆಟ್ ನಲ್ಲಿ ಸಿಗಲಿದೆ. ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವಂತಹ ಎರಡು ಸ್ಕೂಟರ್ ಗಳ ಬಗ್ಗೆ ಇದೀಗ ಮಾಹಿತಿ ನೀಡಲಿದ್ದೇವೆ.

TVS XL 100
Image Credit: Motorbeam

ಕೇವಲ 50 ಸಾವಿರ ಬಜೆಟ್ ನಲ್ಲಿ ಸಿಗಲಿದೆ ಈ ಬೆಸ್ಟ್ ಸ್ಕೂಟರ್
TVS XL 100
TVS XL 100 ಮೊಪೆಡ್ ಬಗ್ಗೆ ಇದೀಗ ಮೊದಲು ಮಹಿತಿ ತಿಳಿಯೋಣ. TVS XL 100 ಮಾದರಿಯ ಬೆಲೆ 44,999 ರಿಂದ 57,804 ಲಕ್ಷ ರೂ.ಗಳವರೆಗೆ ನಿಗದಿಯಾಗಿದೆ. ಕಂಫರ್ಟ್, ಹೆವಿ ಡ್ಯೂಟಿ, ಕಂಫರ್ಟ್ ಐ-ಟಚ್ ಸ್ಟಾರ್ಟ್ ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಮತ್ತು ಗ್ರೇ-ಬ್ಲಾಕ್, ರೆಡ್-ಬ್ಲಾಕ್, ಬ್ಲೂ, ಗ್ರೀನ್ ಸೇರಿದಂತೆ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. TVS XL 99.7 cc, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಪಡೆಯುತ್ತದೆ. ಇದು 4.4 PS ಗರಿಷ್ಠ ಶಕ್ತಿ ಮತ್ತು 6.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮೊಪೆಡ್ ಪ್ರತಿ ಲೀಟರ್ ಗೆ 80 km ಮೈಲೇಜ್ ಅನ್ನು ನೀಡುತ್ತದೆ. TVS XL 100 ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಅಪರೂಪದ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆಯುತ್ತದೆ. ಅಲ್ಲದೆ 2 ತುದಿಗಳಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 2.5-ಇಂಚಿನ ಟೈರುಗಳು, 16-ಇಂಚಿನ ಸ್ಪೋಕ್ ವೀಲ್‌ ಗಳನ್ನು ಹೊಂದಿದೆ. ಇದು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದ್ದು, 130 ಕೆಜಿ ಸರಕುಗಳನ್ನು ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

Kinetic E-Luna And TVS XL 100
Image Credit: Original Source

Kinetic E-Luna
ಟಿವಿಎಸ್ XL 100 ನ ಜೊತೆಗೆ Kinetic E-Luna ಕೂಡ ಉತ್ತಮ ಆಯ್ಕೆಯಾಗಿದೆ. ಇದು X1 ಮತ್ತು X2 ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದರ ಬೆಲೆ ರೂ. 69,990 ಮತ್ತು ರೂ 74,990 ಆಗಿದೆ. ಹೊಸ ಕೈನೆಟಿಕ್ ಇ-ಲೂನಾ ಮೊಪೆಡ್ 2 KWh ಬ್ಯಾಟರಿ ಪ್ಯಾಕ್‌ ನೊಂದಿಗೆ ಲಭ್ಯವಿದೆ, ಅದು ಪೂರ್ಣ ಚಾರ್ಜ್‌ ನಲ್ಲಿ 110 ಕಿಲೋಮೀಟರ್‌ ಗಳವರೆಗೆ ಚಲಿಸುತ್ತದೆ. ಗಂಟೆಗೆ 50 ಗರಿಷ್ಠ ವೇಗವನ್ನು ಪಡೆಯುತ್ತದೆ. ಇದರ ಬ್ಯಾಟರಿ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.

Join Nadunudi News WhatsApp Group

ಈ ಎಲೆಕ್ಟ್ರಿಕ್ ಮೊಪೆಡ್ ಕಾಂಬಿ ಬ್ರೇಕಿಂಗ್ ಸಿಸ್ಟಮ್, 16-ಇಂಚಿನ ಚಕ್ರಗಳು, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸೇಫ್ಟಿ ಗಾರ್ಡ್, ಸೈಟ್ ಸ್ಟ್ಯಾಂಡ್ ಸೆನ್ಸಾರ್, ಸೇಫ್ಟಿ ಲಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಮಲ್ಬೆರಿ ರೆಡ್, ಓಷನ್ ಬ್ಲೂ, ಪರ್ಲ್ ಹಳದಿ ಸೇರಿದಂತೆ 4 ಬಣ್ಣಗಳಲ್ಲಿ ಲಭ್ಯವಿದೆ. ಬಜೆಟ್ ಬಲೆಯಲ್ಲಿ ಸಿಗುವ ಸ್ಕೂಟರ್ ಗಳಲ್ಲಿ ಈ ಮಾದರಿ ಕೂಡ ಒಂದಾಗಿದೆ ಎನ್ನಬಹುದು.

Kinetic E-Luna
Image Credit: India Mart

Join Nadunudi News WhatsApp Group