Two In One Vehicle: ಕೆಲವೇ ಸಮಯದಲ್ಲಿ ಕಾರ್ ಆಗಿ ಬದಲಾಗುತ್ತೆ ಈ ಸ್ಕೂಟರ್, ಹೊಸ ತಂತ್ರಜ್ಞಾನ ಲಾಂಚ್

ಕೇವಲ ಮೂರೇ ನಿಮಿಷದಲ್ಲಿ ಕಾರ್ ಆಗಿ ಬದಲಾಗಲಿದೆ ಈ ಸ್ಕೂಟರ್

Two In One Electric Vehicle Launch: ಪ್ರಸ್ತುತ ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿದೆ. ತಂತ್ರಜ್ಞಾನಗಳು ಯಾವ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದರೆ ಹೊಸ ಹೊಸ ಆವಿಷ್ಕಾರ ಪರಿಚಯವಾಗುತ್ತಿದ್ದಂತೆ ಒಂದು ಕ್ಷಣ ಅಚ್ಚರಿಗೊಳಗಾಗುವುದಂತೂ ನಿಜ. ಹೌದು, ಇದೀಗ ದೇಶದಲ್ಲಿ ಅಚ್ಚರಿ ಮೂಡಿಸುವಂತಹ ಅವಿಷ್ಕಾರವೊಂದು ಬೆಳಕಿಗೆ ಬಂದಿದೆ. ಸಿನಿಮಾಗಳಲ್ಲಿ ಆಗುವ ರೀತಿ ಇದೀಗ ನಿಜ ಜೀವನದಲ್ಲಿಯೂ ನಡೆಯಲಿದೆ. ಅದೇನೆಂದು ನೀವು ಯೋಚಿಸುತ್ತಿದ್ದೀರಾ..? ಹೌದು ಹೊಸ ಆವಿಷ್ಕಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಬಹುದು.

Two In One Vehicle launch
Image Credit: Original Source

ಕೇವಲ ಮೂರೇ ನಿಮಿಷದಲ್ಲಿ ಕಾರ್ ಆಗಿ ಬದಲಾಗಲಿದೆ ಈ ಸ್ಕೂಟರ್…!
ಸದ್ಯ ಹೀರೋ ಮೋಟೋಕಾರ್ಸ್‌ ನ Surge Startup ಹೊಸ ವಾಹನವನ್ನು ವಿನ್ಯಾಸಗೊಳಿಸಿದ್ದು ಅದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸೆಕೆಂಡುಗಳಲ್ಲಿ ಕಾರ್ ಆಗಿ ಪರಿವರ್ತಿಸುತ್ತದೆ. ಇತ್ತೀಚೆಗೆ ನಡೆದ ‘ಹೀರೋ ವರ್ಲ್ಡ್’ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಯಿತು. ಕೇವಲ ಮೂರೇ ನಿಮಿಷದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಾರ್ ಆಗಿ ಬದಲಾಗುತ್ತದೆ. ಈ ವಾಹನವನ್ನು Surge 31 ಎಂದು ಕರೆಯಲಾಗುತ್ತದೆ. ಈ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿಯನ್ನು ನೀಡಿದೆ.

ಒಂದೇ ಕ್ಲಿಕ್ ನಲ್ಲಿ ಸ್ಕೂಟರ್ ಕಾರ್ ಆಗಲಿದೆ
ಈ ನೂತನ ಆವಿಷ್ಕಾರವು ಪ್ರಪಂಚದಲ್ಲಿಯೇ ಮೊದಲ ಟು ಇನ್ ಒನ್ ಎಲೆಕ್ಟ್ರಿಕ್ ವಾಹನವಾಗಿದೆ. ವಾಹನ ಸವಾರರ ಅವಶ್ಯಕತೆಗೆ ಅನುಗುಣವಾಗಿ ಇದನ್ನು ಬದಲಾಯಿಸಿಕೊಳ್ಳಬಹುದು. ಕೇವಲ ಒಂದು ಬಟನ್ ಅನ್ನು ಕ್ಲಿಕ್ ಮಾಡಿದರೆ ಎಲೆಕ್ಟ್ರಿಕ್ ಸ್ಕೂಟರ್ ಕಾರ್ ನಂತೆಯೇ ವಿಂಡ್‌ಸ್ಕ್ರೀನ್, ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್ಸ್, ವಿಂಡ್‌ಸ್ಕ್ರೀನ್ ವೈಪರ್ ಗಳಾಗಿ ಬದಲಾಗುತ್ತದೆ.

two in one vehicle launch
Image Credit: Original Source

ಈ ಟು ಇನ್ ಒನ್ ಎಲೆಕ್ಟ್ರಿಕ್ ವಾಹನದ ವಿಶೇಷತೆಗಳೇನು..?
ಎರಡು ವಾಹನಗಳು ವಿಭಿನ್ನ ಸಾಮರ್ಥ್ಯವನ್ನು ಹೊಂದಿದೆ. ಕಾರ್ ನಲ್ಲಿ 10KV ಎಂಜಿನ್ ಹಾಗೂ 11KWA ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಸ್ಕೂಟರ್ ನಲ್ಲಿ 3KWA ಎಂಜಿನ್ ಅನ್ನು ಅಳವಡಿಸಲಾಗಿದೆ. ಇನ್ನು ಕಾರ್ ನಲ್ಲಿ ಗಂಟೆಗೆ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆಯಲ್ಲಿ ಗಂಟೆಗೆ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಚಲಿಸಬಹುದು.

Join Nadunudi News WhatsApp Group

Join Nadunudi News WhatsApp Group